ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಅನಾರೋಗ್ಯದಿಂದ ಇಲ್ಲಿನ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭಾನುವಾರ ದಾಖಲಾಗಿದ್ದಾರೆ.
ಹೋಟೆಲ್ ಮುಂಭಾಗ ಕಾರಿನಿಂದ ಇಳಿಯುತ್ತಿದ್ದಂತೆ ಡಿವಿ ಸದಾನಂದಗೌಡರು ಕುಸಿದು ಬಿದ್ದರು. ಅದೃಷ್ಟವಶಾತ್ ಆ ಕ್ಷಣಕ್ಕೆ ಅವರ ಅಂಗರಕ್ಷಕರು ಪಕ್ಕದಲ್ಲೇ ಇದ್ದು, ಸದಾನಂದ ಗೌಡರನ್ನು ಹಿಡಿದು ಕೊಂಡರು. ನಂತರ ಪೆÇಲೀಸ್ ಎಸ್ಕಾರ್ಟ್ ವಾಹನದಲ್ಲಿ ಪ್ರಜ್ಞೆ ತಪ್ಪಿ ಕಾರಿನಲ್ಲಿ ಕುಸಿದು ಬಿದ್ದ ಸದಾನಂದ ಗೌಡ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೇಲ್ನೋಟಕ್ಕೆ ಪಿಟ್ಸ್ ಬಂದು ಮೂರ್ಛೆ ಹೋದ ರೀತಿಯಲ್ಲಿ ಕುಸಿದು ಬಿದ್ದರು ಎಂದು ಜೊತೆಗಿದ್ದ ಕಾರ್ಯಕರ್ತರು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಡಿವಿಎಸ್ ಹೋಗಿದ್ದರು. ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಭಾನುವಾರ ಬಂದಿದ್ದರು. . ಚಿತ್ರದುರ್ಗದ ಹೋಟೆಲ್ ನವೀನ್ ರೇಜೆನ್ಸಿಗೆ ಮಧ್ಯಾಹ್ನ ಊಟಕ್ಕೆ ಬಂದಿದ್ದ ಅವರು, ಕಾರಿನಿಂದ ಇಳಿಯುವಾಗ ಅಸ್ವಸ್ಥರಾಗಿದ್ದಾರೆ. ಕಾರಿನಿಂದ ಕೆಳಗೆ ಇಳಿಯುತ್ತಲೇ ಅವರು ಕುಸಿದು ಬಿದ್ದಿದ್ದು, ತಕ್ಷಣ ಅಂಗರಕ್ಷಕರು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಶುಗರ್ ಲೋ ಆದ ಕಾರಣ ಆರೋಗ್ಯ ಏರುಪೇರಾಗಿದೆಚಿತ್ರದುರ್ಗ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಯಾವುದೇ ಸಮಸ್ಯೆ ಇಲ್ಲ ವೈದ್ಯರಿಂದ ತಕ್ಷಣಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಅವರ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಲೋ ಶುಗರ್ ಕಾರಣ ಕಣ್ಣು ಕತ್ತಲೆ ಕಟ್ಟಿ, ಕುಸಿದು ಬಿದ್ದಿದ್ದಾರೆ ಎಂದಿದ್ದಾರೆ.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವೇಶ್ವರ ಆಸ್ಪತ್ರೆಗೆ ಬಿಜೆಪಿ ಶಾಸಕರು ಹಾಗೂ ಮುಖಂಡರು ದೌಡಾಯಿಸಿದ್ದಾರೆ. ಸಚಿವ ಸದಾನಂದ ಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದ್ದು, ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿನ ಹೆಬ್ಬಾಳ ರಸ್ತೆಯಲ್ಲಿರುವ ಹಾಸ್ಟರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಚಿವರು ಜ್ಯೂಸ್ ಕೂಡಾ ಕುಡಿದಿದ್ದಾರೆ. ಕುಟುಂಬದವರ ಜತೆಯೂ ಮಾತನಾಡಿದ್ದಾರೆ ಎಂದು ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ ಹಾಗೂ ಎಂ. ಚಂದ್ರಪ್ಪ ಮಾಹಿತಿ ನೀಡಿದ್ದಾರೆ.