ನಿತ್ಯವಾಣಿ, ಚಿತ್ರದುರ್ಗ,(ಏ.4) : ಕೋವಿಡ್ ನಿಯಂತ್ರಣದಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ ಯಾವುದೇ ಸಚಿವರು ಕೆಲಸ ಮಾಡುತ್ತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದವಿ ದರರ ಮತ್ತು ಶಿಕ್ಷಕರ ವಿಭಾಗದ ಜಿಲ್ಲಾ ಅಧ್ಯಕ್ಷ ಮುದಾಸಿರ್ ನವಾಜ್ ಆಕ್ರೋಶ ವ್ಯಕ್ತಪಡಿಸಿದರು. ಇಂದು ಜಿಲ್ಲಾ ಆಸ್ಪತ್ರೆಗೆ ಬಂದಿರುವ ಸಾರ್ವಜನಿಕರಿಗೆ ಸ್ವಯಂ ಪ್ರೇರಣೆಯಿಂದ ಉಪಹಾರ ವನ್ನು ವಿತರಿಸಿ ಮಾತನಾಡಿದರು.ಈ ವೇಳೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತಾಜ್ ಪೀರ್,ಯುವ ಕಾಂಗ್ರೆಸ್ ನ ಸಂದೀಪ್, ಜಿಲ್ಲಾ ಪದವೀಧರರ ಕಾಂಗ್ರೆಸ್ ವಿಭಾಗದ ಉಪಾಧ್ಯಕ್ಷ ಮಹದೇವಪುರ ಮಧುಕುಮಾರ್, ಇಂಟೆಕ್ ಅಧ್ಯಕ್ಷ ಅಶೋಕ್ ನಾಯ್ಡು ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.