ಪಂಚಮಸಾಲಿ ಪಾದಯಾತ್ರೆಗೆ ಸರ್ಕಾರದಿಂದ ಶುಭಸುದ್ದಿ,,, 22 ದಿನದಿಂದ ಪಾದಯಾತ್ರೆ ಕೈಗೊಂಡ ಸ್ವಾಮಿಗಳ ಪ್ರಯತ್ನಕ್ಕೆ ಮುಖ್ಯಮಂತ್ರಿಗಳು ಶುಭ ಸುದ್ದಿಯನ್ನು ಕೊಟ್ಟಿದ್ದಾರೆ, ಹಿಂದೆ ಮಾಡಿದ ಪಂಚಮಸಾಲಿ ಸಮಾಜದ ಅಧ್ಯಯನ ವರದಿಯನ್ನು ಕೊಡುವಂತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಸೂಚನೆ ಕೊಟ್ಟಿದ್ದಾರೆ. ಸಚಿವರುಗಳಾದ ಮುರುಗೇಶ್ ನಿರಾಣಿ ಹಾಗೂ ಸಿಸಿ ಪಾಟೀಲ್ ಹಾಗೂ ಇನ್ನುಳಿದ ಸಮಾಜದ ಶಾಸಕರು ಈ ಸಂತಸದ ಸುದ್ದಿಯನ್ನು ತಂದಿದ್ದಾರೆ ಎಂದು ಐಮಂಗಲ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡುತ್ತಾ ಇನ್ನೂ ನಾವು ಆದೇಶ ಕೊಡುವವರೆಗೂ 15ನೇ ತಾರೀಖಿನವರೆಗೆ ಶಾಂತಿಯುತವಾಗಿ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುತ್ತೆವೆ ಎಂದು ತಿಳಿಸಿದರು