ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ತಾಲ್ಲೂಕಿನ ಕೂನಬೇವು ಮತ್ತು ತುರುವನೂರು ಗ್ರಾಮಗಳಲ್ಲಿ ಬೆಳೆವಿಮೆ 2019ರ ಹಿಂಗಾರು ಬೆಳೆವಿಮೆ ಕಡ್ಲೆ ಬೆಳೆ ಬಾಬ್ತು ಮತ್ತು ಅದೇ ವರ್ಷದ ಸೂರ್ಯಕಾಂತಿ, ಮೆಕ್ಕೆಜೋಳದ ಬಾಬ್ತು 2020ರ ಮುಂಗಾರು ಹೆಸರು ಶೇಂಗಾ, ಮೆಕ್ಕೆಜೋಳ, ಈರುಳ್ಳಿ ಬೆಳೆವಿಮೆ ಹಣ ಪಾವತಿಸಿ ಒಂದು ವರ್ಷವೇ ಕಳೆದರು ಬೆಳೆ ನಷ್ಟದ ಪ್ರಮಾಣದ ವರದಿ ನಮಗೆ ತಲುಪಿಲ್ಲ ಎಂದು ವಿಮಾ ಕಂಪನಿಯವರು ರೈತರಿಗೆ ತಿಳಿಸುತ್ತಿದ್ದು, ಇಲಾಖೆಯವರು ಸಮೀಕ್ಷೆ ಮಾಡುತ್ತಿದ್ದು, ವಿಳಂಭವಾಗದೆ ಬೆಳೆವಿಮೆ ಪರಿಹಾರವನ್ನು ರೈತರ ಖಾತೆ ಹಾಕುವಂತೆ ಕೊಂಚೆ ಶಿವರುದ್ರಪ್ಪ ನೇತೃತ್ವದಲ್ಲಿ ಚಳುವಳಿಯ ಮುಖಾಂತರ ಅಪರ ಜಿಲ್ಲಾಧಿಕಾರಿ ಸಂಗಪ್ಪನವರಿಗೆ ಮನವಿ ಸಲ್ಲಿಸಿದರು. ಅಧಿಕಾರಿಗಳು ಕ್ರಮ ವಹಿಸುವ ಭರವಸೆ ನೀಡಿದರು. 15 ದಿನಗಳ ಗಡುವನ್ನು ಅಧಿಕಾರಿಗಳಿಗೆ ನೀಡಿದರು. ಪ್ರತಿಭಟನೆಯಲ್ಲಿ ತುರುವನೂರು, ಕೂನಬೇವ್ ರೈತರಾದ ಜಿ.ತಿಪ್ಪೇಸ್ವಾಮಿ, ಬಸವರಾಜ್ ಅಲ್ಲಾಡಿ, ಅಂಪಮ್ಮ, ಜಯಣ್ಣ, ಶರತ್‍ಬಾಬು, ವಕೀಲರಾದ ಶ್ವೇತ, ಭೋಗೇಶಪ್ಪ, ದಾಸಪ್ಪ, ಗೋವಿಂಗಪ್ಪ, ಹನುಮಂತಪ್ಪ, ಗೌರಮ್ಮ, ಶಾಂತಮ್ಮ, ಯಶೋಧಮ್ಮ ಮುಂತಾದ ನೂರು ಜನ ರೈತರು ಭಾಗವಹಿಸಿದ್ದರು.