ರಾಜಕೀಯಕ್ಕೆ ಬನ್ನಿ ಎಂದವರಿಗೆ ಸೋನು ಸೂದ್​ ಕೊಟ್ಟ ಉತ್ತರವಿದು!

ಲಾಕ್​ಡೌನ್​ ಶುರುವಾದ ಮೇಲೆ ಬಾಲಿವುಡ್​ ನಟ ಸೋನು ಸೂದ್​ ತಮ್ಮದೇ ರೀತಿಯಲ್ಲಿ ಒಂದಲ್ಲಾ ಒಂದು ಸಹಾಯವನ್ನು ಮಾಡುತ್ತಲೇ ಬಂದಿದ್ದಾರೆ. ಸೋಂಕಿತರಿಗೆ ಕ್ವಾರಂಟೈನ್​ ಮಾಡುವುದಕ್ಕೆ ಮೊದಲು ತಮ್ಮ ಹೋಟೆಲ್​ ಬಿಟ್ಟು ಕೊಟ್ಟರು, ನಂತರ ವಲಸೆ ಕಾರ್ಮಿಕರಿಗೆ ಬಸ್​ ಮಾಡಿ ತಮ್ಮ ತವರೂರಿರಿಗೆ ಕಳಸಿಕೊಟ್ಟರು, ತುಂಬಾ ದೂರ ಇರುವವರನ್ನು ಏರ್​ಲಿಫ್ಟ್​ ಸಹ ಮಾಡಿಸಿದರು. ಹೀಗೆ ಸತತವಾಗಿ ಸಾವಿರಾರು ಜನರಿಗೆ ಸಹಾಯವಾಗುವಂತಹ ಕೆಲಸ ಮಾಡುತ್ತಲೇ ಇದ್ದಾರೆ.ಎಲ್ಲಾ ಸರಿ, ಅವರು ಇಷ್ಟೆಲ್ಲಾ ಮಾಡುತ್ತಿರುವುದರ ಹಿಂದೆ ದುರುದ್ದೇಶವಿದೆಯಾ?ಈ ಸಹಾಯವನ್ನು ಮುಂದಿಟ್ಟುಕೊಂಡು ಮುಂದೊಂದು ದಿನ ರಾಜಕೀಯ ಪ್ರವೇಶ ಮಾಡುತ್ತಾರಾ? ರಾಜಕೀಯ ಪಕ್ಷ ಸೇರುವುದಕ್ಕೆ ಇದನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರಾ? ಎಂಬ ಹಲವು ಪ್ರಶ್ನೆಗಳು ಈ ಹಿಂದೆಯೇ ಕೇಳಿ ಬಂದಿದ್ದವು. ಇದೀಗ ಆ ವಿಚಾರಕ್ಕೆ ಸಂಬಂಧಿಸಿದಂತೆ ಸೋನು ಪ್ರತಿಕ್ರಿಯಿಸಿದ್ದಾರೆ. ಅವರು ನೀಡಿದ ಉತ್ತರ ರಾಜಕೀಯಕ್ಕೆ ಬರುವ ಮುನ್ಸೂಚನೆ ಎಂಬಂತೆ ಗೋಚರವಾಗುತ್ತದೆ.

Leave a Reply

Your email address will not be published.