ಬಿಜೆಪಿ ಸರ್ಕಾರವೇ 2ಎ ಮೀಸಲಾತಿ ಕೊಡುತ್ತದೆ : ವಚನಾನಂದ ಸ್ವಾಮಿಜೀ

ನಿತ್ಯವಾಣಿ ನ್ಯೂಸ್,  ಚಿತ್ರದುರ್ಗ, ನ. 6 : ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ನೇತೃತ್ವದಲ್ಲಿ ಈಗಾಗಲೇ ರಾಜ್ಯದ 18 ಜಿಲ್ಲೆಗಳಲ್ಲಿ ಕುಲಶಾಸ್ತ್ರ ಅಧ್ಯಯನ ಮುಗಿದಿದೆ. ಈ ಅಧ್ಯಯನ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ  ಮೀಸಲಾತಿ ಕಲ್ಪಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿಜೀ ತಿಳಿಸಿದರು.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಿಸಲಾತಿಗಾಗಿ ಕಳೆದ 28 ವರ್ಷಗಳಿಂದ ಹೋರಾಟವನ್ನು ನಡೆಸಲಾಗುತ್ತಿದೆ.                                                ಇದರಲ್ಲಿ ಜಯ ಸಿಗುತ್ತದೆ ಎಂಬ ನಂಬಿಕೆ ಇದೆ. ನಾವು ಪ್ರಾಣವನ್ನು ಬಿಟ್ಟೆವು ಮೀಸಲಾತಿ ಬೀಡುವುದಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಚಿವರೊಂದಿಗೆ ಮಾತನಾಡಲಾಗಿದೆ. ರಾಜ್ಯದ ಬಿಜೆಪಿ ಸರ್ಕಾರವೇ ನಮಗೆ 2ಎ ಮೀಸಲಾತಿ ಕೊಡುತ್ತದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.
ಪಂಚಮಸಾಲಿ ಸಮಾಜದ ಎಲ್ಲ ಭಾಂಧವರು ಮೊದಲು ವೀರಶೈವ ಲಿಂಗಾಯತ ಪಂಚಮಸಾಲಿ ಎಂಬ ಜಾತಿ ಪ್ರಮಾಣ ಪತ್ರ ಪಡೆಯಬೇಕು. ಈಗಾಗಲೇ ದಾವಣಗೆರೆ, ಗದಗ ಜಿಲ್ಲೆಯಲ್ಲಿ ಝಾತಿ ಪ್ರಮಾಣ ಪತ್ರ ಕೆಲವರಿಗೆ ಸಿಕ್ಕಿದೆ. ಈ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದರೆ ಮೀಸಲಾತಿ ಸಿಕ್ಕ ನಂತರ 3ಬಿಯಲ್ಲಿರುವ ಲಿಂಗಾಯತ ಒಳಪಂಗಡಗಳು ಮುಗಿಬಿದ್ದು, ನಿಜವಾದ ಪಂಚಮಸಾಲಿಗೆ ಅನ್ಯಾಯ ವಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿ ನ.23ರಿಂದ ಹಾವೇರಿಯಲ್ಲಿ ಜನಜಾಗೃತಿ ಯಾತ್ರೆ ಕೈಗೊಂಡು ಡಿ.11ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತದೆ. ಕೇಂದ್ರದಲ್ಲಿ ಒಬಿಸಿ ಮೀಸಲಾತಿ ನೀಡಬೇಕು ಮತ್ತು ರಾಜ್ಯದಲ್ಲಿ ಪಂಚಮಸಾಲಿಗೆ 2ಎ ಮೀಸಲಾತಿ ನೀಡಬೆಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಸ್ವಾಮಿಜೀ ತಿಳಿಸಿದರು.ಈ ಸಮಯದಲ್ಲಿ ಜಿಲ್ಲಾ ಅಧ್ಯಕ್ಷ ಶಿವಪ್ರಕಾಶ್ ಜೆ ಮಾತನಾಡುತ್ತಾ ಕೆಲವು ಜಿಲ್ಲೆಗಳಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ ಪಂಚಮಶಾಲಿ ಎಂದು ಸೇರ್ಪಡೆಯಾಗಿದೆ ಇನ್ನು ಮುಂದೆ ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿ ಕೂಡ ಜಾತಿ ಪ್ರಮಾಣ ಪತ್ರಕ್ಕೆ ಪಂಚಮ ಶಾಲಿ ಎಂದು ಸೇರಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು
ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಉಮಾ ರಮೇಶ್ ಖಂಜಾಚಿ ಮಂಜುಳ ಮುಖಂಡರಾದ ಶಿವಕುಮಾರ್, ನರೇಂದ್ರಬಾಬು, ವಿಶ್ವನಾಥ್, ಮಂಜುನಾಥ್, ಪ್ರಕಾಶ್ ಕರಿಬಸಪ್ಪ ಉಪಸ್ಥಿತರಿದ್ದರು.

Leave a Reply

Your email address will not be published.