ಚಾಮರಾಜನಗರ : ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಇತರ 40 ಕ್ಕೂ ಕಚೇರಿಗಳನ್ನೊಳಗೊಂಡ ಜಿಲ್ಲಾಡಳಿತ ಭವನದಲ್ಲಿ ಭ್ರಷ್ಟಚಾರದ ಕೂಪವಾಗಿದೆ ಎಂದರೆ ತಪ್ಪಾಗಲಾರದು. ಭ್ರಷ್ಟಾಚಾರದ ಕೂಪವಾಗಿದೆ ಎಂಬುದಕ್ಕೆ ಜಿಲ್ಲಾಡಳಿತ ಭವನದಲ್ಲಿನ ಕಾರ್ಮಿಕ ಇಲಾಖೆಯಲ್ಲಿನ ಇಬ್ಬರು ಮಿಕಗಳು ಎಸಿಬಿ ಬಲೆಗೆ ಬಿದ್ದಿವೆ. ಸರಕಾರದಿಂದ ಕೊಡಮಾಡಲಾಗುವ ವಿವಾಹ ಸಹಾಯ ಧನ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಮಹಿಳೆಯರನ್ನು ಎಸಿಬಿ ಅಧಿಕಾರಿಗಳು ಹಣದ ಸಮೇತ ಬಂಧಿಸಿದ್ದಾರೆ.
3 ಸಾವಿರ ರೂ. ಲಂಚದ ಹಣ ಪಡೆಯುತ್ತಿದ್ದ ವೇಳೆ ಸೀನಿಯರ್ ಲೇಬರ್ ಇನ್ಸ್ ಪೆಕ್ಟರ್ ಗೀತಾ ಮತ್ತು ಕಂಪ್ಯೂಟರ್ ಆಪರೇಟರ್ ಮಾಲತಿ ಎಸಿಬಿ ಬಲೆಗೆ ಬಿದ್ದಿರುವ ಕಾರ್ಮಿಕ ಇಲಾಖೆ ಉದ್ಯೋಗಿಗಳಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ರಾಮಸಮುದ್ರದ ದೊಡ್ಡ ಬೀದಿ ವಾಸಿ ಪ್ಲಂಬರ್ ಕೆಲಸ ಮಾಡುವ ಚೇತನ್ ಅವರು ನೀಡಿದ ದೂರಿನ ಮೇರೆಗೆ ಗುರುವಾರ ಸಂಜೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇವರಿಬ್ಬರನ್ನು ಬಂಧಿಸಿದ್ದಾರೆ.
ಚೇತನ್ ಅವರು ರೇಣುಕಾ ಎಂಬುವರನ್ನು ಕಳೆದ ವರ್ಷ ವಿವಹವಾಗಿದ್ದು, ಸರಕಾರದಿಂದ ನೀಡುವ ಮದುವೆಯ ಸಹಾಯ ಧನಕ್ಕಾಗಿ ಚಾಮರಾಜನಗರದಲ್ಲಿನ ಕಾರ್ಮಿಕ ಇಲಾಖೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು.
ಚಾಮರಾಜನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಕಾರ್ಮಿಕ ಇಲಾಖೆಯ ಕಂಪ್ಯೂಟರ್ ಆಪರೇಟರ್ ಆಗಿರುವ ಮಮತಾ ಅವರು ಚೇತನ್ ಅವರಿಗೆ ದೂರವಾಣಿ ಕರೆ ಮಾಡಿ ನೀವು ಸಲ್ಲಿರುವ ಸಹಾಯ ಧನ ಪಡೆಯಲು ಸೂಕ್ತ ದಾಖಲಾತಿ ತರುವಂತೆ ತಿಳಿಸಿದ್ದರು. ಚೇತನ್ ಸದರಿ ಕಚೇರಿಗೆ ಹೋದಾಗ 3 ಸಾವಿರ ರೂ. ಹಣಕ್ಕೆ ಬೇಡಿಕೆಯನ್ನು ಇವರು ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳಿಗೆ ಚೇತನ್ ನೀಡಿದ ದೂರಿನ ಮೇರೆಗೆ ಗುರುವಾರ ಸಂಜೆ ಬಮಧಿತರಿಬ್ಬರು ಹಣ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ಇವರನ್ನು ಹಣದ ಸಮೇತ ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ದಾಳಿ ಕಾರ್ಯಾಚರಣೆ ಎಸಿಬಿ ದಕ್ಷಿಣ ವಲಯದ ಮೈಸೂರಿನ ಪ್ರಭಾರ ಪೊಲೀಸ್ ಅಧೀಕ್ಷಕ ಜಯಪ್ರಕಾಶ್ ಮಾರ್ಗದರ್ಶನದಲ್ಲಿ ಚಾಮರಾಜನಗರ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಉಪಾಧೀಕ್ಷಕರಾದ ಸದಾನಂದ ಎ. ತಿಪ್ಪಣ್ಣವರ್, ನಿರೀಕ್ಷಕರಾದ ಕಿರಣ್ ಕುಮಾರ್, ಎಲ್. ದೀಪಕ್ ಹಾಗೂ ಸಿಬ್ಬಂದಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. * ಎಸಿಬಿ ಇಲಾಖೆ ಪ್ರಾರಂಬವಾದಾಗಿನಿಂದ ಇಲ್ಲಿಯ ತನಕ ಜಿಲ್ಲಾಡಳಿತ ಭವನ ಪ್ರವೇಶಿಸಿದ್ದರೂ ಭ್ರಷ್ಟ ಮಿಕಗಳು ಸಿಕ್ಕಿರಲಿಲ್ಲ..ಎಸಿಬಿ ಡಿವೈಸ್ಪಿ ನೇತೃತ್ವದ ತಂಡ ಚಾಮರಾಜನಗರ ಜಿಲ್ಲಾಡಳಿತ ಭವನ ಪ್ರವೇಶಿಸಿ ಭ್ರಷ್ಟರ ಬಲಿ ಹಾಕಿರುವುದು ಇದೆ ಮೊದಲು ಎಂದು ತಿಳಿದು ಬಂದಿದೆ.