ನಿತ್ಯವಾಣಿ, ಚಿತ್ರದುರ್ಗ,(ಡಿ.4) : ಇಂದು ಬೆಳಗಿನ ಜಾವ ಸುಮಾರು 1.30 ರಿಂದ 02.00 ರಲ್ಲಿ ಹೊಸ ಹೈವೇ ಎನ್ ಹೆಚ್ 48 ದೊಡ್ಡ ಸಿದ್ದವನಹಳ್ಳಿ ಹತ್ತಿರ ಎರಡು ಲಾರಿಗಳ ಮಧ್ಯೆ ಭಯಾನಕವಾದ ಅಪಘಾತವಾಗಿದೆ ಇದರಲ್ಲಿ ನಾಲ್ಕು ಜನ ಮರಣ ಹೊಂದಿದ್ದು, ವಿಡಿಯೋ
ಗದಗ್ ಜಿಲ್ಲೆಯಿಂದ ಲಾರಿಯೊಂದು ನೀರುಳ್ಳಿ ಅದನ್ನು ತೆಗೆದುಕೊಂಡು ಬೆಂಗಳೂರು ಕಡೆಗೆ ಹೋಗುತ್ತಿರುವಾಗ ಲಾರಿ ಪಂಚರಾಗಿ ನಿಂತಿದ್ದು ಲಾರಿಯ ಕ್ಲೀನರ್ ಮತ್ತು ಇನ್ನೊಬ್ಬರು ಪಂಚರ್ ಹಾಕುತ್ತಿರುವಾಗ ಹಿಂಭಾಗದಿಂದ ಬಂದಂತಹ ಗ್ಯಾಸ್ ಲಾರಿಯೊಂದು ಏಕಾಏಕಿ ಬಂದು ನಿಂತಿದ್ದ ಲಾರಿಗೆ ಗುದ್ದಿದೆ
ಇದರ ಪರಿಣಾಮ ಲಾರಿಯ ಕೆಲಸ ಮಾಡುತ್ತಿದ್ದ ಇಬ್ಬರು ಮತ್ತು ಅದನ್ನು ನೋಡುತ್ತಿದ್ದ ಇಬ್ಬರು ಸ್ಥಳದಲ್ಲೇ ಒಟ್ಟು ನಾಲ್ಕು ಜನ ಸಾವನ್ನಪ್ಪಿದ್ದಾರೆ, ಈ ಅಪಘಾತವು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವ್ಯಾಪ್ತಿಗೆ ಬರುತ್ತಿದ್ದು ವಿಷಯ ತಿಳಿದ ಕೂಡಲೇ ಸುರಿಯುತ್ತಿರುವ ಮಳೆಯಲ್ಲಿಯೇ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ರಾಧಿಕಾ ರವರು ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ ಬಾಲಚಂದ್ರ ನಾಯಕ್ ಸಿಬ್ಬಂದಿಗಳ ಜೊತೆ ಕಾರ್ಯಾಚರಣೆಯನ್ನು ನಡೆಸಿ ತನಿಖೆಯನ್ನು ಮಾಡುತ್ತಿದ್ದಾರೆ