ನಿತ್ಯ ವಾಣಿ ಚಿತ್ರದುರ್ಗ, (ಮೇ. 14) : ಈಗ ತಾನೆ ನಗರದ ಬಸವೇಶ್ವರ ಆಸ್ಪತ್ರೆ ಮುಂಭಾಗ ನ್ಯಾಷನಲ್ ಹೈವೇ ಯಲ್ಲಿ ಭಾರಿ ಅಪಘಾತವಾಗಿದೆ ಪಿಎನ್ ಸಿ ಕಂಪನಿಯ ರಸ್ತೆ ಕಾರ್ಮಿಕರ ಟ್ರ್ಯಾಕ್ಟ್ಯಾರ್ ಮೇಲೆ ಮಹಾರಾಷ್ಟ್ರ ಮೂಲದ ಲಾರಿಯೊಂದು ಡಿಕ್ಕಿ ಹೊಡೆದಿದೆ ಎರಡು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಒಬ್ಬರನ್ನು ಬಸವೇಶ್ವರ ಆಸ್ಪತ್ರೆಗೆ ಸಾಗಿಸಿದ್ದು ಅವರು ಕೂಡ ಚಿಂತಜನಕ ಪರಿಸ್ಥಿತಿ ಯಲ್ಲಿದ್ದಾರೆ, ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳಾದ ಸಿಪಿಐ ಪ್ರಕಾಶ್ ಎಸ್ಐ ಗೀತಾ ಪರಿಶೀಲಿಸುತ್ತಿದ್ದಾರೆ, ಲಾರಿ ಚಾಲಕ ಗಾಡಿಯನ್ನು ಬಿಟ್ಟು ಓಡಿ ಹೋಗಿದ್ದಾನೆ