ಶ್ರೀರಾಮ ಮಂದಿರ ನಿರ್ಮಾಣಕ್ಕೆನಿಧಿ ಸಮರ್ಪಣೆಗಾಗಿ ಕೋರಿದ ನಟಿ ಪ್ರಣೀತಾ

ಬೆಂಗಳೂರು: ಅಯೋಧ್ಯೆಯಲ್ಲಿನ ಸುದೀರ್ಘ ವಿವಾದ ಇತ್ಯರ್ಥಗೊಂಡ ಹಿನ್ನೆಲೆಯಲ್ಲಿ ಅಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು, ಅದಕ್ಕಾಗಿ ಟ್ರಸ್ಟ್​ ನಿರ್ಮಿಸಿ, ಯೋಜನೆಗಳನ್ನು ರೂಪಿಸಿರುವುದು ಈಗ ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯವೇ.

ಇತ್ತೀಚಿನ ಬೆಳವಣಿಗೆ ಎಂದರೆ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಭಕ್ತರಿಂದಲೂ ದೇಣಿಗೆ ಸಂಗ್ರಹಿಸುತ್ತಿರುವುದು. ಆ ನಿಟ್ಟಿನಲ್ಲಿ ವಿಶ್ವಹಿಂದೂಪರಿಷತ್ ಕೂಡ ಕಾರ್ಯನಿರತವಾಗಿದೆ. ಮಾತ್ರವಲ್ಲ ಶ್ರೀರಾಮಮಂದಿರಕ್ಕಾಗಿ ನಿಧಿ ಸರ್ಮಪಣೆ ಎಂಬ ಅಭಿಯಾನ ನಡೆಯುತ್ತಿದ್ದು, ಈಗಾಗಲೇ ಹಲವರು ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ತಮ್ಮ ಕೈಲಾದ ನೆರವು ನೀಡಲಾರಂಭಿಸಿದ್ದಾರೆ.

ಈಗ ನಟಿ ಪ್ರಣೀತಾ ಸುಭಾಷ್​ ಶ್ರೀರಾಮಮಂದಿರಕ್ಕಾಗಿ ನಿಧಿ ಸರ್ಮಪಣೆ ಮಾಡಿರುವುದಲ್ಲದೆ, ಇತರರೂ ನಿಧಿ ಸಮರ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ನಾನು ಅಯೋಧ್ಯೆಯ ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ, ರಾಮ ಮಂದಿರ ನಿಧಿ ಸಮರ್ಪಣ ಅಭಿಯಾನದ ಅಂಗವಾಗಿ 1 ಲಕ್ಷ ರೂ. ನೀಡಿದ್ದೇನೆ. ಶ್ರೀರಾಮ ಮಂದಿರ ನಿರ್ಮಾಣದಂಥ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವೂ ನಿಧಿ ಸಮರ್ಪಿಸುವ ಮೂಲಕ ಕೈಜೋಡಿಸಬೇಕು ಎಂದು ಪ್ರಣೀತಾ ಕೋರಿಕೊಂಡಿದ್ದಾರೆ.

Leave a Reply

Your email address will not be published.