ಯಾವುದೇ ಆಧಾರ್ ಕೇಂದ್ರಕ್ಕೆ ಹೋಗದೆ ದೇಶದ ಜನತೆ ತಮ್ಮ ಆಧಾರ್ ಮಾಹಿತಿಯನ್ನು ಆನ್ಲೈನ್ನಲ್ಲಿ ಬದಲಾವಣೆಗಳನ್ನು ಮಾಡಬಹುದು. ನೀವು ಈಗ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ, ವಿಳಾಸ ಮತ್ತು ಭಾಷೆ ಆನ್ಲೈನ್ ಅನ್ನು ನವೀಕರಿಸಬಹುದು. ಆದರೆ, ಮನೆಯ ಯಜಮಾನರು / ಗಾರ್ಡಿಯನ್ ವಿವರಗಳು ಅಥವಾ ಬಯೋಮೆಟ್ರಿಕ್ ಅಪ್ಡೇಟ್, ಆಧಾರ್ನೊಂದಿಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವುದು – ಇಂತಹ ಇತರ ಅಪ್ಡೇಟ್ಗಳನ್ನು ಸ್ಥಳೀಯ ಆಧಾರ್ ಸೇವಾ ಕೇಂದ್ರ ಅಥವಾ ದಾಖಲಾತಿ / ನವೀಕರಣ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
ಕೋವಿಡ್ -19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ, ಆಧಾರ್ ಕಾರ್ಡ್ ವಿತರಿಸುವ ಸಂಸ್ಥೆಯಾದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತನ್ನ ಸೌಲಭ್ಯಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಮೂಲಕ ಜನರು ತಮ್ಮ ಮನೆಗಳಲ್ಲೇ ಗಮನಾರ್ಹ ವಿವರಗಳನ್ನು ನವೀಕರಿಸಲು ಅನುವು ಮಾಡಿಕೊಡುತ್ತದೆ. ಈ ಸಂಬಂಧ ಮಂಗಳವಾರ ಟ್ವೀಟ್ ಮಾಡಿರುವ ಯುಐಡಿಎಐ, ಜನರು 1947 ಆಧಾರ್ ಸಹಾಯವಾಣಿ ಸಂಖ್ಯೆಯನ್ನು ಡಯಲ್ ಮಾಡಬಹುದು ಮತ್ತು ಸಾಕಷ್ಟು ಸೇವೆಯನ್ನು ಪಡೆಯಬಹುದು ಎಂದೂ ಹೇಳಿದೆ. “ನಿಮ್ಮ ಮೊಬೈಲ್ ಅಥವಾ ಲ್ಯಾಂಡ್ಲೈನ್ನಿಂದ 1947 ಅನ್ನು ಡಯಲ್ ಮಾಡುವ ಮೂಲಕ ಈ ಪ್ರದೇಶದ ಅಧಿಕೃತ ಕೇಂದ್ರಗಳ ವಿಳಾಸದಂತಹ ವಿವರಗಳೊಂದಿಗೆ ನಿಮ್ಮ ಹತ್ತಿರದ ಆಧಾರ್ ಕೇಂದ್ರವನ್ನು ನೀವು ಪತ್ತೆಹಚ್ಚಬಹುದು. ನೀವು ಆಧಾರ್ ಆಯಪ್ ಬಳಸಿ ಸಹ ಆಧಾರ್ ಕೇಂದ್ರವನ್ನು ಕಂಡುಕೊಲ್ಳಬಹುದು” ಎಂದು ಯುಐಡಿಎಐ ಟ್ವೀಟ್ ಮಾಡಿದೆ.
ಜನರು ತಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರವನ್ನು ಆನ್ಲೈನ್ನಲ್ಲಿ ಪತ್ತೆಹಚ್ಚುವುದನ್ನು ಯುಐಡಿಎಐ ಸುಲಭಗೊಳಿಸಿದೆ. ಆಧಾರ್ ಕಾರ್ಡ್ ಹೊಂದಿರುವವರು ಇದಕ್ಕಾಗಿ ಈ ಮೂರು ಆಯ್ಕೆಗಳನ್ನು ಪಡೆಯಬಹುದು:
1) ರಾಜ್ಯದ ಆಧಾರದ ಮೇಲೆ ಹುಡುಕಿ: ರಾಜ್ಯದ ಅನುಸಾರ ಹುಡುಕಲು ಈ ಲಿಂಕ್ ಬಳಸಿ (https://appointments.uidai.gov.in/EACenterSearch.aspx?value=1)
2) ಪಿನ್ ಕೋಡ್ ಅನುಸಾರ ಪತ್ತೆ ಹಚ್ಚಬಹುದು – ( ಲಿಂಕ್ – https://appointments.uidai.gov.in/EACenterSearch.aspx?value=2)
3) ಸರ್ಚ್ ಬಾಕ್ಸ್ ಅನುಸಾರ ಪತ್ತೆ ಹಚ್ಚಬಹುದು – ( ಲಿಂಕ್ – https://appointments.uidai.gov.in/EACenterSearch.aspx?value=3&AspxAutoDetectCookieSupport=1)ಯುಐಡಿಎಐ ನಡೆಸುವ ಆಧಾರ್ ಸೇವಾ ಕೇಂದ್ರದಲ್ಲಿ ನೀವು ಆನ್ಲೈನ್ನಲ್ಲಿ ಅಪಾಯಿಂಟ್ಮೆಂಟ್ ಅನ್ನು ಹೇಗೆ ಕಾಯ್ದಿರಿಸಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ..
ಈ UIDAI ಲಿಂಕ್ ಅನ್ನು ಕ್ಲಿಕ್ ಮಾಡಿ ( ಲಿಂಕ್ – https://appointments.uidai.gov.in/(X(1)S(eetddb45ihd24s55t3l3yjiq))/bookappointment.aspx?AspxAutoDetectCookieSupport=1)
ನಗರ / ಸ್ಥಳ ಆಯ್ಕೆಮಾಡಿ
ಅಪಾಯಿಂಟ್ಮೆಂಟ್ ಬುಕ್ ಮಾಡಲು ಮುಂದುವರಿಯಿರಿ
ನಿಮ್ಮ ಮೊಬೈಲ್ ನಂಬರನ್ನು ನಮೂದಿಸಿರಿ
-
- ಕ್ಯಾಪ್ಚಾ ಕೋಡ್ ನಮೂದಿಸಿ
-
- ನಿಮ್ಮ ಮೊಬೈಲ್ನಲ್ಲಿ ನೀವು ಓಟಿಪಿ ಪಡೆಯುತ್ತೀರಿ
-
- ಓಟಿಪಿ ಸಲ್ಲಿಸಿ
-
- ನಿಮ್ಮ ಆಧಾರ್ ವಿವರಗಳನ್ನು ಭರ್ತಿ ಮಾಡಿ
-
- ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಿ
-
- ನಿಮ್ಮ ಆದ್ಯತೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ
- ನೀವು ಬುಕಿಂಗ್ ಅಪಾಯಿಂಟ್ಮೆಂಟ್ ಸಂಖ್ಯೆಯನ್ನು ಪಡೆಯುತ್ತೀರಿ
ಈಗ ನೀವು ನಿಮ್ಮ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಬದಲಾವಣೆಗಳನ್ನು ಮಾಡಬಹುದು. ಆನ್ಲೈನ್ನಲ್ಲಿ ಸೇವೆಯನ್ನು ಕಾಯ್ದಿರಿಸಲು ಇದು ನಿಮಗೆ ಅನುಕೂಲಕರ ಮಾತ್ರವಲ್ಲ, ಇದು ನಿಮಗೆ ಸಾಕಷ್ಟು ಸಮಯವನ್ನು ಉಳಿಸುತ್ತದೆ.
ಇನ್ನೊಂದೆಡೆ, ವಿವರಗಳ ಆನ್ಲೈನ್ ನವೀಕರಣಕ್ಕಾಗಿ, ಆನ್ಲೈನ್ ಆಧಾರ್ ನವೀಕರಣ ವಿನಂತಿಗಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಕಡ್ಡಾಯವಾಗಿದೆ ಎಂಬುದನ್ನು ನೀವು ಗಮನಿಸಬೇಕಾಗಿದೆ. ನಿಮ್ಮ ನೋಂದಾಯಿತ ಮೊಬೈಲ್ನಲ್ಲಿ ಆಧಾರ್ ದೃಢೀಕರಣಕ್ಕಾಗಿ ನೀವು ಓಟಿಪಿ ಸ್ವೀಕರಿಸುತ್ತೀರಿ.