ನವದೆಹಲಿ: ಈಗಿರುವ ನಿಯಮಗಳ ಪ್ರಕಾರ ನಿಮ್ಮ ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವೇಳೆಯಲ್ಲಿ ಪ್ಯಾನ್ ಜೊತೆಗೆ ನಿಮ್ಮ ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯ. ಆಧಾರ್ ಗೆ ಪ್ಯಾನ್ ಲಿಂಕ್ ಮಾಡುವ ಟೈಮ್ ಲೈನ್ ಅನ್ನು 9 ತಿಂಗಳವರೆಗೆ ಅಂದರೆ 2020ರ ಜೂನ್ 30ರಿಂದ 2021ರ ಮಾರ್ಚ್ 31ರವರೆಗೆ ವಿಸ್ತರಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ಒಂದು ವೇಳೆ ನಿಮ್ಮ ಪ್ಯಾನ್ ಅನ್ನು ನಿಮ್ಮ ಆಧಾರ್ ನೊಂದಿಗೆ ಲಿಂಕ್ ಮಾಡಲು ವಿಫಲವಾದರೆ, ಆಗ ಏಪ್ರಿಲ್ 1, 2021 ರ ಹೊತ್ತಿಗೆ ನಿಮ್ಮ ಪ್ಯಾನ್ ನಿಷ್ಕ್ರಿಯವಾಗುತ್ತದೆ. ಮಾರ್ಚ್ 31, 2021ರ ಟೈಮ್ ಲೈನ್ ನಂತರ ಆಧಾರ್ ಜೊತೆ ಪಾನ್ ಲಿಂಕ್ ಮಾಡಿದರೆ ಆಧಾರ್ ಸಂಖ್ಯೆ ಸ್ವೀಕೃತಿ ದಿನಾಂಕದಿಂದ ಪಾನ್ ಜಾರಿಯಾಗಲಿದೆ ಎಂದು ಸರ್ಕಾರ 2020ರ ಫೆಬ್ರವರಿ 13ರಂದು ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ಹಾಗಾದ್ರೇ ಪ್ಯಾನ್-ಆಧಾರ್ ಅನ್ನು ಹೇಗೆ ಲಿಂಕ್ ಮಾಡುವುದು:
1. ಇ-ಫೈಲಿಂಗ್ ವೆಬ್‌ಸೈಟ್ ಮೂಲಕ
- ಆದಾಯ ತೆರಿಗೆ ಸೈಟ್ಗೆ ಭೇಟಿ ನೀಡಿ
- ಆಧಾರ್ ಕಾರ್ಡ್‌ನಲ್ಲಿ ಉಲ್ಲೇಖಿಸಿರುವಂತೆ ಪ್ಯಾನ್, ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ
- ಆಧಾರ್ ಕಾರ್ಡ್‌ನಲ್ಲಿ ಜನ್ಮ ವರ್ಷವನ್ನು ಮಾತ್ರ ಉಲ್ಲೇಖಿಸಿದ್ದರೆ ಚೌಕವನ್ನು ಟಿಕ್ ಮಾಡಿ
- ಕ್ಯಾಪ್ಚಾ ಕೋಡ್ ನಮೂದಿಸಿ. (ದೃಷ್ಟಿ ಸವಾಲಿನ ಬಳಕೆದಾರರು ಕ್ಯಾಪ್ಚಾ ಕೋಡ್ ಬದಲಿಗೆ ಒಟಿಪಿಗಾಗಿ ವಿನಂತಿಸಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಕಳುಹಿಸಲಾಗುವುದು)
- ‘ಲಿಂಕ್ ಆಧಾರ್’ ಬಟನ್ .
- ನಾಗರಿಕರು ತಮ್ಮ ಪ್ಯಾನ್-ಆಧಾರ್ ಕಾರ್ಡ್‌ಗಳನ್ನು ಆದಾಯ ತೆರಿಗೆ ಇಲಾಖೆ, ಎನ್‌ಎಸ್‌ಡಿಎಲ್ ಇ-ಗವರ್ನೆನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಮತ್ತು ಯುಟಿಐ ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಅಂಡ್ ಸರ್ವೀಸಸ್ ಲಿಮಿಟೆಡ್ (ಯುಟಿಐಐಟಿಎಲ್) ವೆಬ್‌ಸೈಟ್‌ಗಳಲ್ಲಿ ತಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಒದಗಿಸುವ ಮೂಲಕ ಲಿಂಕ್ ಮಾಡಬಹುದು.
- (https://www1.incometaxindiaefiling.gov.in/e-FilingGS/Services/LinkAadhaarHome.html)
2. ಪ್ಯಾನ್-ಆಧಾರ್ ಲಿಂಕ್ ಎಸ್‌ಎಂಎಸ್:
- ಎಸ್ ಎಂಎಸ್ ಮೂಲಕ ಪ್ಯಾನ್ ಜೊತೆ ಆಧಾರ್ ಲಿಂಕ್ : ಸಣ್ಣ ಎಸ್ ಎಂಎಸ್ ಕಳುಹಿಸುವ ಮೂಲಕ ನೀವು ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಬಹುದು. ಎನ್ ಎಸ್ ಡಿಎಲ್ ಇ-ಗವರ್ನೆನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಅಥವಾ ಯುಟಿಐ ಇನ್ ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಅಂಡ್ ಸರ್ವೀಸಸ್ ಲಿಮಿಟೆಡ್ (ಯುಟಿಐಐಟಿಎಸ್ ಎಲ್) ಎರಡಕ್ಕೂ ಎಸ್ ಎಂಎಸ್ ಕಳುಹಿಸುವ ಮೂಲಕ ನೀವು ಕೂಡಲೇ ಪ್ಯಾನ್ ನೊಂದಿಗೆ ಆಧಾರ್ ಲಿಂಕ್ ಮಾಡಬಹುದು. ಹಾಗೆ ಮಾಡಲು UIDPAN ಎಂದು ಟೈಪ್ ಮಾಡಿ 567678 ಅಥವಾ 56161 ಗೆ ಕಳುಹಿಸಿ. ಇದಕ್ಕಾಗಿ ಮೊಬೈಲ್ ಆಪರೇಟರ್ ವಿಧಿಸಿರುವ ಂತೆ ಎಸ್ ಎಂಎಸ್ ಶುಲ್ಕಗಳು ಅನ್ವಯವಾಗಬಹುದು.
3. ಪ್ಯಾನ್-ಆಧಾರ್ ಲಿಂಕ್ ಸ್ಥಿತಿ:
- www.incometaxindiaefiling.gov.in/aadhaarstatus ಗೆ ಭೇಟಿ ನೀಡಿ
- ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ
- ‘ವ್ಯೂ ಲಿಂಕ್ ಆಧಾರ್ ಸ್ಥಿತಿ’
- ಲಿಂಕ್ ಮಾಡುವ ಸ್ಥಿತಿಯನ್ನು ಮುಂದಿನ ಪರದೆಯಲ್ಲಿ ಪ್ರದರ್ಶಿಸಲಾಗುತ್ತದೆ
ಪ್ರಸ್ತುತ ಆದಾಯ ತೆರಿಗೆ ಕಾನೂನುಗಳ ಪ್ರಕಾರ, ಎರಡು ದಾಖಲೆಗಳನ್ನು ಲಿಂಕ್ ಮಾಡದಿರುವುದು ನಿಮ್ಮ ಪ್ಯಾನ್ ಕಾರ್ಡ್ ‘ನಿಷ್ಕ್ರಿಯ’ ಆಗಲು ಕಾರಣವಾಗುತ್ತದೆ. ಲಿಂಕ್ ಮಾಡದ ಯಾವುದೇ ಪ್ಯಾನ್ ಅನ್ನು ‘ನಿಷ್ಕ್ರಿಯ’ ಎಂದು ಘೋಷಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಈ ಹಿಂದೆ ಘೋಷಿಸಿತ್ತು. ಈಗ, ತನ್ನ ಇತ್ತೀಚಿನ ಅಧಿಸೂಚನೆಯಲ್ಲಿ, ಅಂತಹ ಪ್ಯಾನ್ ಕಾರ್ಡ್‌ದಾರರು ಆದಾಯ ತೆರಿಗೆ ಕಾಯ್ದೆಯಡಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಐಟಿ ಇಲಾಖೆ ಸ್ಪಷ್ಟವಾಗಿ ಉಲ್ಲೇಖಿಸಿದೆ.