ದೇಶಕ್ಕೆ ವಕೀಲರ ಕೊಡುಗೆ ಅಪಾರ: ಎಲ್. ಶ್ರೀನಿವಾಸ್ ಬಾಬು

ನಿತ್ಯವಾಣಿ,ಚಿತ್ರದುರ್ಗ:ಜಿಲ್ಲಾ ವಕೀಲರ ಸಂಘವು ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಮತ್ತು ವಕೀಲ ವೃತ್ತಿಯಲ್ಲಿ 25 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಹಿರಿಯ ವಕೀಲರಿಗೆ ಸನ್ಮಾನ ಸಮಾರಂಭವನ್ನು      ಎಲ್ ಶ್ರೀನಿವಾಸ್ ಬಾಬು. ಅಧ್ಯಕ್ಷರು ಕರ್ನಾಟಕ ವಕೀಲರ ಪರಿಷತ್ ಬೆಂಗಳೂರು    ಇವರು  ಉದ್ಘಾಟಿಸಿ ಮಾತಾಡುತ್ತಾ,   ವಕೀಲರು ದೇಶದ ಕಾನೂನು ಪರಿಪಾಲಕರು  ಹಾಗೂ    ವಕೀಲರು ಭಾರತ ಸಂವಿಧಾನವನ್ನು ಕಾಪಾಡುವಲ್ಲಿ ಪ್ರಮುಖಪಾತ್ರ ವಹಿಸುವರು,ಕಕ್ಷಿದಾರರಿಗೆ ನ್ಯಾಯ ಕೊಡಿಸುವಲ್ಲಿ ವಕೀಲರ ಪಾತ್ರ ಬಹುಮುಖ್ಯ ವಕೀಲರ ಕಲ್ಯಾಣಕ್ಕಾಗಿ ರಾಜ್ಯ ಪರಿಷತ್ ನಲ್ಲಿ ವಿಶೇಷ ಯೋಜನೆಯನ್ನು ರೂಪಿಸಲು ಮುಂದಾಗಿದ್ದೇವೆ ಕೊವಿಡ್ ನಲ್ಲಿ ಮೃತಪಟ್ಟ ಮತ್ತು ಕಷ್ಟ ನಷ್ಟ ಅನುಭವಿಸಿದ ವಕೀಲರುಗಳಿಗೆ ಪರಿಷತ್ತು ನೆರವು ನೀಡಿದೆ ರಾಜ್ಯದ ಎಲ್ಲಾ ವಕೀಲರ ಪರವಾಗಿ ವಕೀಲರ ಪರಿಷತ್ತುಸದಾ ಕಾರ್ಯೋನ್ಮಕವಾಗಿ ಕೆಲಸ ಮಾಡುತ್ತದೆ. ಎಂದು ತಿಳಿಸಿದರು. .ಕಾರ್ಯಕ್ರಮ ಕ್ಕೆ

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ವಿಶ್ರಾಂತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಮಾತನಾಡಿ ನಾವೆಲ್ಲರೂ ಭಾರತ ಸಂವಿಧಾನವನ್ನು ಪಡೆದುಕೊಂಡಿರುವುದು ನಮ್ಮೆಲ್ಲರ ಪುಣ್ಯ,ನಮ್ಮ ದೇಶದ ಸ್ವತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಬಾಬು ರಾಜೇಂದ್ರ ಪ್ರಸಾದ್ ರವರ ಜನ್ಮದಿನವನ್ನು ವಕೀಲರ ದಿನಾಚರಣೆಯನ್ನಾಗಿ ನಾವೆಲ್ಲರೂ ಆಚರಿಸುತ್ತಿದ್ದೇವೆ.
ನಮ್ಮ ದೇಶಕ್ಕೆ ಸಂವಿಧಾನದ ರಕ್ಷಣೆ ಅವಶ್ಯಕತೆ ನಾವೆಲ್ಲರೂ ಸಂವಿಧಾನವನ್ನು ಗೌರವಿಸಿದರೆ ಅದು ನಮ್ಮನ್ನು ಗೌರವಿಸುತ್ತದೆ. ಎಂದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪ್ರೇಮಾವತಿ ಮನಗೂಳಿ ಎಂ. ಮಾತನಾಡಿ ಜಿಲ್ಲಾ ವಕೀಲರ ಸಂಘವು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮಾಡುವುದು ನಮ್ಮೆಲರಿಗೂ ಸಂತೋಷದ ವಿಷಯ, ಕಿರಿಯ ವಕೀಲರುಗಳು ನ್ಯಾಯಾಲಯದ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ಹಿರಿಯ ವಕೀಲರ ಸಲಹೆ ಸೂಚನೆಗಳನ್ನು ಪಾಲಿಸಬೇಕು ಎಂದು ಕಿರಿಯ ವಕೀಲರುಗಳಿಗೆ ಸಲಹೆ ನೀಡಿದರು.
ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಸಿ. ಶಿವುಯಾದವ್ ಮಾತನಾಡಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ನ ಅಧ್ಯಕ್ಷರು ಆದ ಎಲ್.ಶ್ರೀನಿವಾಸ್ ಬಾಬು ರವರು ನಮ್ಮ ಆಹ್ವಾನವನ್ನು ಸ್ವೀಕರಿಸಿ ಆಗಮಿಸಿದ್ದಕ್ಕೆ ನಮ್ಮ ಸಂಘವು ಚಿರಋಣಿಯಗಿರುತ್ತದೆ ಅದೇರೀತಿ ರಾಜ್ಯ ಪರಿಷತ್ ನಮ್ಮ ಸಂಘದ ಏಳಿಗೆಗೆ ಪ್ರೋತ್ಸಾಹ ನೀಡುತ್ತದೆ ಎಂದು ನಾವೆಲ್ಲರೂ ನಂಬಿದ್ದೇವೆ ಎಂದರು.
ವಕೀಲರ ವೃತ್ತಿಯಲ್ಲಿ 25 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ವಕೀಲರುಗಳಿಗೆ ಸನ್ಮಾನಮಾಡಿ ಗೌರವಿಸಿದರು. ವಕೀಲರ ಪರಿಷತ್ತಿನಲ್ಲಿ ಜಿಲ್ಲಾ ವಾರು ಪ್ರಾತಿನಿಧ್ಯ ನೀಡಬೇಕು ಚಿತ್ರದುರ್ಗ ಜಿಲ್ಲೆ ಮದ್ಯ ಕರ್ನಾಟಕದಲ್ಲಿ ಇರುವುದರಿಂದ ಸುತ್ತ ಮುತ್ತ ಇರುವ ಜಿಲ್ಲೆಯ ಕಕ್ಷಿಗಾರರ ಹಿತ ದೃಷ್ಟಿಯಿಂದ ಜಿಲ್ಲೆಯಲ್ಲಿ ಹೈಕೋರ್ಟ್ ಪೀಠವನ್ನು ಸ್ಥಾಪಿಸಬೇಕು
ಈ ಸಾರಿ ಕರ್ನಾಟಕ ರಾಜ್ಯ ವಕೀಲರ ಸಮಾವೇಶವನ್ನು ಚಿತ್ರದುರ್ಗದಲ್ಲಿ ನಡೆಸಬೇಕು ಎಂದು ಮನವಿ ಮಾಡಿದರು
ಅದೇ ರೀತಿ ನೂತನವಾಗಿ ಕಾನೂನು ಪದವಿಯನ್ನು ಪೂರ್ಣಗೊಳಿಸಿ ವಕೀಲ ವೃತ್ತಿ ಪ್ರಾರಂಭಿಸಲು ಆಗಮಿಸರುವ ಯುವ ವಕೀಲರುಗಳಿಗೆ ಪುಷ್ಪ ಗುಚ್ಚ ನೀಡಿ ಸ್ವಾಗತಿಸಿದರು .ಕಾರ್ಯಕ್ರಮದಲ್ಲಿ ನ್ಯಾಯಾಧೀಶರುಗಳಾದ ಬನ್ನಿಕಟ್ಟಿ ಹನುಮಂತಪ್ಪ ಆರ್. ಶಂಕ್ರಪ್ಪ ನಿಂಬಣ್ಣ ಕಲ್ಕಣಿ. ಸಿ.ಎಸ್. ಜಿತೇಂದ್ರನಾಥ್. ಹೆಚ್. ಎಂ. ದೇವರಾಜ್. ಬಿ.ಕೆ.ಗಿರೀಶ್. ಶ್ರೀಮತಿ ಲತಾ.ಕೆ.ನೇಮಿಚಂದ್ ದೇಸಾಯಿ. ಶ್ರೀಮತಿ ಶಿಲ್ಪಾ. ಹಾಗೂ ಸಂಘದ ಉಪಾಧ್ಯಕ್ಷರಾದ ಜಿ. ಸಿ. ದಯಾನಂದ್. ಪ್ರಧಾನ ಕಾರ್ಯದರ್ಶಿ ಎಂ. ಮೂರ್ತಿ. ಖಜಾಂಚಿ ಕೆ.ಎಂ.ಅಜ್ಜಯ್ಯ. ಜಂಟಿಕಾರ್ಯದರ್ಶಿ ಬಿ.ಆರ್. ವಿಶ್ವನಾಥ್ ರೆಡ್ಡಿ.ಕಾರ್ಯಕಾರಿಣಿ ಸಮಿತಿ ಸದಸ್ಯರು, ಮಾಜಿ ಅದ್ಯಕ್ಷರು ವಕೀಲರುಗಳಾದ ಎಸ್ ವಿಜಯ್ ಕುಮಾರ್ ಬಿ. ಟಿ. ಮಹಾಬಲೇಶ್ವರ. ಫಾತ್ಯರಾಜನ್. ಬಿ.ಕೆ.ರಹಮತ್ ಉಲ್ಲಾ.ಪಿ.ಎಂ. ಹನುಮಂತರಾಯ
ಎ.ಸಿ. ರಘು.ಎಸ್. ವಿಜಯ್ ಕುಮಾರ್. ಪಿ.ಆರ್. ವೀರೇಶ್.
ಎಂ.ಕೆ. ಲೋಕೇಶ್. ವೈ. ತಿಪ್ಪೇಸ್ವಾಮಿ. ಟಿ. ಹನುಮಂತಪ್ಪ
ಮತ್ತು ಮಹಿಳಾ ವಕೀಲರುಗಳು ಭಾಗವಹಿಸಿದ್ದರು. ಶ್ರೀನಿವಾಸ ಬಾಬು ಮತ್ತು ನ್ಯಾಯಮೂರ್ತಿ ಬಿಲ್ಲಪ್ಪನವರನ್ನು ಡಿಸಿ ವೃತ್ತದಿಂದ ಕಾರ್ಯಕ್ರಮದ ವೇದಿಕೆಗೆ ಡೊಳ್ಳು ವಾದ್ಯಗಳ ಮೂಲಕ ಸಂಘದ ಅಧ್ಯಕ್ಷರಾದ ಸಿ. ಶಿವುಯಾದವ್ ರವರ ಅದ್ಯಕ್ಷತೆಯಲ್ಲಿ ಕರೆತರಲಾಯಿತು. ಕಾರ್ಯಕ್ರಮವನ್ನು
ಸಂಘದ ಪದಾಧಿಕಾರಿ ಎ. ಎಸ್. ನಜೀಬುಲ್ಲಾ ನಿರೂಪಿಸಿದರು ವಕೀಲರು ನ್ಯಾಯಾಧೀಶರು ಮತ್ತು ಅವರ ಕುಟುಂಬದ ಸದಸ್ಯರು ಬಾಗವಹಿಸಿದ್ದರು

Leave a Reply

Your email address will not be published.