ಇಂದಿನಿಂದ ಬೆಂಗಳೂರಿನ ರೈಲ್ವೆ ನಿಲ್ದಾಣವಾದಂತ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸಂಚಾರ ಆರಂಭಗೊಂಡಿದೆ. ಇಂತಹ ರೈಲು ಮೂಲಕ ಏರ್ಪೋರ್ಟ್ ತಲುಪೋದಕ್ಕೆ ಈಗ ಜಸ್ಟ್ ರೂ.10 ದರವಾಗಿದೆ. ಹೀಗಾಗಿ ರೈಲಿನ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳ ಬಯಸಿದ್ರೇ, ಈ ಕೆಳಕಂಡಂತಿದೆ ರೈಲು ಸಂಚಾರದ ವೇಳಾಪಟ್ಟಿದೆ.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ( ಬೆಂಗಳೂರು ಸಿಟಿ), ಯಶವಂತಪುರ, ಯಲಹಂಕ ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 10/- ದರದೊಂದಿಗೆ ರೈಲು ಸೇವೆ ಪ್ರರಂಭವಾಗಿದೆ.
ಟಿಕೆಟ್ ದರ ಕೇವಲ:- 10 ರೂಪಾಯಿ
ಪ್ರಯಾಣದ ಕಾಲ:- 45 ನಿಮಿಷ
——————————————
ಬೆಳಗ್ಗೆ ಹೊರಡುವ ರೈಲುಗಳು:-
05:50 ಮೆಜೆಸ್ಟಿಕ್ – ದೇವನಹಳ್ಳಿ
07:20 ಯಲಹಂಕ – ದೇವನಹಳ್ಳಿ
09:16 ಯಶವಂತಪುರ – ಬಂಗಾರಪೇಟೆ
ಸಂಜೆ ಹೊರಡುವ ರೈಲುಗಳು:-
18:50 ಮೆಜೆಸ್ಟಿಕ್ – ಬಂಗಾರಪೇಟೆ
20:05 ಮೆಜೆಸ್ಟಿಕ್ – ದೇವನಹಳ್ಳಿ
———————————————-
ಬೆಳಗ್ಗೆ ಬರುವ ರೈಲುಗಳು:-
06:22 ದೇವನಹಳ್ಳಿ – ಯಲಹಂಕ
07:50 ದೇವನಹಳ್ಳಿ – ಬೆಂಗಳೂರು ದಂಡು
08:25 ಬಂಗಾರಪೇಟೆ – ಯಶವಂತಪುರ
ಸಂಜೆ ಬರುವ ರೈಲುಗಳು:-
18:42 ಬಂಗಾರಪೇಟೆ – ಮೆಜೆಸ್ಟಿಕ್
20:38 ದೇವನಹಳ್ಳಿ – ಮೆಜೆಸ್ಟಿಕ್