ಪರಿಶಿಷ್ಟ ಜಾತಿ ಮತ್ತು ಪಂಗಡದರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ ::ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ಮುನಿಕೃಷ್ಣ

ಸರ್ಕಾರ ಬಡವರ ಪರವಾಗಿ ಕೆಲಸ ಮಾಡುವುದ್ದಲ್ಲದೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ, ಇವುಗಳನ್ನು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಮಾಡುವುದು ನಿಮ್ಮ ಕೆಲಸವಾಗಿದೆ ಇದರ ಬಗ್ಗೆ ಅಧಿಕಾರಿಗಳು ತಕರಾರು ಮಾಡಿದರೆ ನನ್ನ ಗಮನಕ್ಕೆ ತರುವಂತೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ಮುನಿಕೃಷ್ಣ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದರು.

ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಪರಿಶಿಷ್ಟ ಜಾತಿ ಮತ್ತು ಪಂಗಡದರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ ಅವುಗಳು ಅರ್ಹರಿಗೆ ಸಿಗುವಂತೆ ಮಾಡುವುದು ನಿಮ್ಮ ಕೆಲಸವಾಗಿದೆ. ಅಧಿಕಾರಿಗಳು ಸೌಲಭ್ಯವನ್ನು ನೀಡುವಲ್ಲಿ ವಿಳಂಭ ತಕರಾರು ಮಾಡಿದರೆ ನನ್ನ ಗಮನಕ್ಕಾಗಲಿ ಇಲ್ಲವೆ ಪಕ್ಷದ ವರಿಷ್ಠರ ಮೂಲಕ ನನ್ನ ಕಚೇರಿಯನ್ನು ಸಂಪರ್ಕಿಸಿ ತಿಳಿಸುವಂತೆ ಕಿವಿ ಮಾತು ಹೇಳಿದರು.

ಕಾಲ ಹಿಂದಿನಂತೇ ಇಲ್ಲ ದಲಿತರು ಬಿಜೆಪಿ ಪರವಾಗಿದ್ದಾರೆ ಎಂಬುದಕ್ಕೆ ಈಗ ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಜಯ ಸಾಧಿಸಿರುವುದೇ ಸಾಕ್ಷಿ. ಪರಿಶಿಷ್ಟರ ಸಮುದಾಯದವರಿಗೆ ಮೀಸಲಾತಿಯ ಹೊರತುಪಡಿಸಿಯೂ ಅವಕಾಶಗಳನ್ನು ನೀಡುವ ಬಗ್ಗೆ ಪಕ್ಷದ ನಾಯಕರು ಚಿಂತಿಸಬೇಕು. ಆಗ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬರಲಿದೆ ಸಮಾಜ ಕಲ್ಯಾಣ ಇಲಾಖೆಗೆ ಅತಿ ಹೆಚ್ಚು ಅನುದಾನ ನೀಡಲಾಗುತ್ತಿದೆ. ಸೌಲಭ್ಯ ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ. ಸರ್ಕಾರದ ಯೋಜನೆಗಳು ಕಟ್ಟಕಡೆಯ ಬಡವರು, ಶೋಷಿತ ಸಮುದಾಯದವರಿಗೆ ತಲುಪಿಸುವ ಕೆಲಸ ಮಾಡಬೇಕು’ ಎಂದು ಕಾರ್ಯಕರ್ತರಿಗೆ ಸಿ.ಮುನಿಕೃಷ್ಣ ಹೇಳಿದರು.

ಗಂಗಾಕಲ್ಯಾಣ, ಭೂ ಒಡೆತನ ದಂತಹ ಹಲವಾರು ಯೋಜನೆಗಳು ಅನುಷ್ಠಾನದಲ್ಲಿವೆ, ಇದರ ಬಗ್ಗೆ ಪೂರ್ಣ ವಾದ ಮಾಹಿತಿಯನ್ನು ಪಡೆಯುವುದರ ಮೂಲಕ ನಿಗಮಕ್ಕೆ ಅರ್ಜಿಯನ್ನು ಹಾಕುವುದರ ಮೂಲಕ ಆರ್ಥಿಕವಾಗಿ ಮುಂದೆ ಬರಬೇಕಿದೆ, ಕೆಲವಡೆಗಳಲ್ಲಿ ಹಂಚಿಕೆ ಮಾಡಲು ಭೂಮಿ ಇಲ್ಲ ಎನ್ನಲಾಗುತ್ತಿದೆ ಇದರ ಬಗ್ಗೆ ಸಂಬಂಧಪಟ್ಟವರ ಜೊತೆ ಮಾತನಾಡಿದ್ದೇನೆ, ಭೂಮಿ ಸಿಗುವವರೆಗೂ ಅರ್ಜಿ ಪಡೆಯುವುದನ್ನು ನಿಲ್ಲಿಸುವಂತೆಯೂ ಸಹಾ ತಿಳಿಸಿದಿರುವುದಾಗಿ ಹೇಳಿದ ಮುನಿಕೃಷ್ಣ ಈಗ ಕೋವಿಡ್-19 ಎಲ್ಲೆಡೆ ಹರಡಿದ್ದು ಇದರಿಂದ ನಿಗಮದ ವಿವಿಧ ಯೋಜನೆಗಳಿಗೆ ನೀಡುವಂತೆ ಸಹಾಯಧನವೂ ಸಹಾ ಕಡಿಮೆ ಮಾಡಲಾಗಿದೆ 5 ಲಕ್ಷ ಇದ್ದನ್ನು ಈಗ 1 ಲಕ್ಷಕ್ಕೆ ಇಳಿಸಲಾಗಿದೆ ಇದರ ಬಗ್ಗೆಯೂ ಸಹಾ ಮಾತನಾಡಿರುವುದಾಗಿ ತಿಳಿಸಿದರು.

ವಿರೋಧ ಪಕ್ಷದವರು ಬಿಜೆಪಿ ದಲಿತ, ಹಿಂದುಳಿದವರ ವಿರೋಧಿ ಎನ್ನುತ್ತಾ ಈ ಜನಾಂಗವನ್ನು ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಇದರ ಬಗ್ಗೆ ಪಕ್ಷದ ಹಾಗೂ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಸರಿಯಾದ ರೀತಿಯಲ್ಲಿ ತಿಳಿದು ಕೇಂದ್ರದ ನರೇಂದ್ರ ಮೋದಿ ಹಾಗೂ ರಾಜ್ಯದ ಯಡೆಯೂರಪ್ಪ ನೇತೃತ್ವದ ಸರ್ಕಾರ ಈ ವರ್ಗಕ್ಕೆ ಯಾವ ರೀತಿ ಕೆಲಸ ಮಾಡುತ್ತಿದೆ ಎನ್ನುವುದರ ಬಗ್ಗೆ ತಿಳಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಬಾಜಪ ಮುಖಂಡರಾದ ಸಿದ್ದೇಶ್ ಯಾದವ್, ಶಿವಣ್ಣಾಚಾರ್, ತಿಪ್ಪೇಸ್ವಾಮಿ, ಸಂಪತ್, ಪಾಂಡುರಂಗಪ್ಪ ಅಧ್ಯಕ್ಷ ಹಾಲಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

ಇದಾದ ನಂತರ ಅಧ್ಯಕ್ಷ ಮುನಿಕೃಷ್ಣ ನಗರದ ನ್ಯಾಯಾಲಯದ ಬಳಿ ಇರುವ ಅಂಬೇಡ್ಕರ್ ನಿಗಮದ ಕಚೇರಿಗೆ ಬೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಕೆಲವೊಂದು ಸೂಚನೆಗಳನ್ನು ನೀಡಿದರು.

 

Leave a Reply

Your email address will not be published.