ನಿತ್ಯವಾಣಿ,ಚಳ್ಳಕೆರೆ 05: ಜೀವನದ ಪ್ರತಿಯೊಂದು ಘಟನಾವಳಿಗಳನ್ನು ಮೆಲುಕು ಹಾಕುವ ಸುದಿನ ಇಂದಾಗಿದೆ ಅವರು ರಚಿಸಿದ ಸಂವಿಧಾನ ಇಂದು ಪ್ರಪಂಚದ ಎಲ್ಲಾ ವರ್ಗದ ಧರ್ಮಿಯರು ಒಪ್ಪುವಂತ ಮಹತ್ವದ ಸಂವಿಧಾನವಾಗಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದರು. ವಿಡಿಯೋ
ನಗರದ ತಾಲೂಕು ಕಚೇರಿ ಮುಂಬಾಗದ ಅಂಬೇಡ್ಕರ್ ವೃತ್ತದ ಬಳಿ ತಾಲೂಕು ಆಡಳಿತ ಹಾಗೂ ಸಮಸ್ತ ದಲಿತ ಸಂಘಟನೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ 65ನೇ ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಬಾಬಾ ಸಾಹೇಬ್ ರ ಹಾದಿಯಲ್ಲಿ ನಡೆಯದಿದ್ದರು ಅವರ ಹಾಕಿಕೊಟ್ಟ ಮಾರ್ಗಗಳ ಮೂಲಕ ಸಂವಿಧಾನದ ಹಕ್ಕುಗಳನ್ನು ಪಡೆಯುವ ಮೂಲಕ ಅವರ ನಿಲುವಿಗೆ ಬದ್ದರಾಗಬೇಕು, ಅಂಬೇಡ್ಕರ್ ಕಾಲವಾದ ದಿನಗಳಲ್ಲಿ ಪ್ರಪಂಚದ 193ದೇಶಗಳು ಮರುಗಿದ್ದವು ಅಂತಹ ಮಹಾನ್ ವ್ಯಕ್ತಿಗಳು ಬರೆದ ಕೊಟ್ಟ ಸಂವಿಧಾನ ನಾವು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಎಸ್‍ಎ ಸಂಚಾಲಕ ಟಿ.ವಿಜಯ್ ಕುಮಾರ್, ಗಾಂಧಿನಗರದ ಯುವ ಮುಖಂಡ ಎಲ್.ಸಿದ್ದು, ಹೆಚ್.ಸಮರ್ಥರಾಯ್, ಬಿ.ಪಿ.ಪ್ರಕಾಶ್‍ಮೂರ್ತಿ, ಕೆ.ವೀರಭದ್ರಯ್ಯ, ಎಂ.ಶಿವಮೂರ್ತಿ, ಡಿ.ಚಂದ್ರಪ್ಪ, ವೆಂಕಟೇಶ್, ಟಿ.ವಿನೋದ್‍ಕುಮಾರ್, ಜಿ.ಅನಿಲ್‍ಕುಮಾರ್, ಹಳೆಟೌನ್ ಬದ್ರಿ, ಸಿ.ಶ್ರೀನಿವಾಸ್, ಡಿ.ಟಿ.ಭೂತಲಿಂಗಪ್ಪ, ಭೀಮಣ್ಣ, ನಾಗರಾಜ್, ಮಾರಣ್ಣ. ಲಿಂಗರಾಜ್, ಇಓ.ಮಡುಗಿನ ಬಸಪಪ್ಪ, ಸಹಾಯಕ ಅಧಿಕಾರಿ ಸಂತೋಶ್, ಬಿಸಿಎಂ ಅಧಿಕಾರಿ ಜಗನ್ನಾಥ್, ಬಿಇಓ.ಕೆ.ಎಸ್.ಸುರೇಶ್, ಆರೋಗ್ಯ ಸಹಾಯಕ ಅಧಿಕಾರಿ ತಿಪ್ಪೆಸ್ವಾಮಿ, ಸಮಾಜ ಕಲ್ಯಾಣ ಅಧಿಕಾರಿ ಚಿಂದಾನಂದಪ್ಪ, ಸಿಡಿಪಿಓ ಮೋಹನ್ ಕುಮಾರಿ, ಕಾರ್ಮಿಕ ಅಧಿಕಾರಿ ಕುಸುಮ, ಪೌರಾಯುಕ್ತ ಪಿ.ಪಾಲಯ್ಯ, ಇತರ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಚುನಾವಣೆ ನೀತಿ ಸಂಹಿತೆ ಜಾರಿಯಿಲ್ಲಿರುವುದರಿಂದ ರಾಜಾಕೀಯ ಪಕ್ಷದ ಚುನಾಯಿತ ಪ್ರತಿನಿಧಿಗಳಾದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಹಾಗೂ ನಗರಸಭೆ ಸದಸ್ಯರುಗಳು ಸರಕಾರಿ ಸಭೆಗೆ ಹಾಜರಾಗದೇ ಕೇವಲ ಅಂಬೇಡ್ಕರ್ ಪ್ರತಿಮೆಗೆ ಹೂವು ಮಾಲೆ ಹಾಕಿ ಗೌರವ ಸಲ್ಲಿಸಿದರು,