ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದ ವಿರೂಷ್ಕಾ ಗುಡ್‌ನ್ಯೂಸ್!

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಭಾರತದ ಸ್ಟಾರ್ ದಂಪತಿಗಳಲ್ಲಿ ಪ್ರಮುಖವಾದವರು. ಅಪ್ಪ-ಅಮ್ಮನಾಗುತ್ತಿರುವ ಬಗ್ಗೆ ಅವರು ಗುರುವಾರ ಘೋಷಣೆ ಮಾಡಿರುವ ಸುದ್ದಿ, ಸಾಮಾಜಿಕ ಜಾಲತಾಣದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ! 2021ರ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ವಿರೂಷ್ಕಾ ಖ್ಯಾತಿಯ ದಂಪತಿ, ಅನುಷ್ಕಾ ಬೇಬಿ ಬಂಪ್ ಪ್ರದರ್ಶಿಸುತ್ತಿರುವ ಚಿತ್ರದೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಈ ಪ್ರಗ್ನನ್ಸಿ ಘೋಷಣೆ ಹೊರಬಿದ್ದ 24 ಗಂಟೆಗಳಲ್ಲಿ ಇನ್‌ಸ್ಟಾಗ್ರಾಂನಲ್ಲಿ 15.3 ದಶಲಕ್ಷ ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ಈ ಮೂಲಕ ಅತ್ಯಂತ ಹೆಚ್ಚು ಲೈಕ್ಸ್ ಪಡೆದುಕೊಂಡ ಸೆಲೆಬ್ರಿಟಿ ಇಮೇಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Leave a Reply

Your email address will not be published.