ಕೇಂದ್ರ ಸರ್ಕಾರದ ನಿರ್ಣಯದಿಂದ ಫುಲ್​ ಖುಷಿಯಾದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​

ನವದೆಹಲಿ:- ಕೊವಿಡ್​-19 ಲಾಕ್​ಡೌನ್​ ಹಂತಗಳೆಲ್ಲ ಮುಗಿದು ಇದೀಗ ದೇಶದಲ್ಲಿ ಅನ್​ಲಾಕ್​ನ ಮೂರು ಹಂತಗಳು ಪೂರ್ಣಗೊಂಡಿವೆ. ಇಂದು ಕೇಂದ್ರ ಸರ್ಕಾರ ಅನ್​ಲಾಕ್​-4 ರ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದ್ದು, ಷರತ್ತುಗಳೊಂದಿಗೆ ಸಭೆ, ಸಮಾರಂಭ ನಡೆಸಲು ಅನುಮತಿ ನೀಡಿದೆ. ಮೆಟ್ರೋ ಪ್ರಾರಂಭಕ್ಕೂ ಅವಕಾಶ ಕೊಟ್ಟಿದೆ.

ಕೊವಿಡ್​-19 ಕಾರಣದಿಂದ ಸ್ಥಗಿತಗೊಂಡಿದ್ದ ದೇಶದ ಪ್ರಮುಖ ನಗರಗಳ ಮೆಟ್ರೋವನ್ನು ಸೆ.7ರಿಂದ ಮರು ಆರಂಭಿಸಲು ಕೇಂದ್ರ ಸರ್ಕಾರ ಅನ್​ಲಾಕ್​ 4ನೇ ಹಂತದಲ್ಲಿ ಅನುಮತಿ ನೀಡಿದೆ. ಇದರಿಂದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಫುಲ್​ ಖುಷಿಯಾಗಿದ್ದಾರೆ.

Leave a Reply

Your email address will not be published.