ಆಟಲ್ ಭೂ ಜಲ ಯೋಜನೆಯ ಅರಿವು ಮೂಡಿಸುವ ಸಭೆ ನಡೆಸಲಾಯಿತು.

ನಿತ್ಯವಾಣಿ,ಹೊಸದುರ್ಗ,(ಜೂ.8) : ದೊಡ್ಡಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು ಸರ್ವ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಗೂಳಿಹಟ್ಟಿ (ರಿ) ಹಾಗೂ ದೊಡ್ಡಘಟ್ಟ ಗ್ರಾಮ ಪಂಚಾಯಿತಿ ಯವರ ಸಂಯುಕ್ತ ಆಶ್ರಯದಲ್ಲಿ ಆಟಲ್ ಭೂಜಲ ಯೋಜನೆಯ ಅರಿವು ಮೂಡಿಸುವ ಸಭೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಶ್ರೀ ರವಿಂದ್ರರವರು ಮಾತನಾಡುತ್ತ ಈ ಯೋಜನೆಯು ರಾಷ್ಟ್ರದ ವಿನೂತನ ಮಹತ್ವಕಾಂಕ್ಷಿಯ ಯೋಜನೆಯಾಗಿದ್ದು, ಸದರಿ ಯೋಜನೆಯನ್ನ ಮಾನ್ಯ ಪ್ರಧಾನಮಂತ್ರಿಗಳು ಡಿಸೆಂಬರ್ 25- 2019 ರಂದು ಚಾಲನೆ ನೀಡಿದ್ದಾರೆ . ಈ ಯೋಜನೆಯು ರಾಷ್ಟ್ರದ 7 ರಾಜ್ಯಗಳಲ್ಲಿ ಮಾತ್ರ ಅನುಷ್ಠಾನವಾಗುತ್ತಿದ್ದು, ನಮ್ಮ ರಾಜ್ಯದ 14 ಜಿಲ್ಲೆಗಳು ಸೆರ್ಪಡೆಗೊಂಡಿರುತ್ತವೆ. ಆದರಲ್ಲಿ ಚಿತ್ರದುರ್ಗ ಜಿಲ್ಲೆಯ 5 ತಾಲ್ಲೊಕಿನಲ್ಲಿ ಹೊಸದುರ್ಗ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಈ ಯೋಜನೆ ಅನುಷ್ಠಾನವಾಗುತ್ತಿದೆ.ಈ ಯೋಜನೆಗೆ ಕೇಂದ್ರ ಸರ್ಕಾರ 6000 ಕೋಟಿ ಹಣ ವಿಶ್ವ ಬ್ಯಾಂಕ್ ನೇರವಿನೊಂದಿಗೆ ಖರ್ಚುಮಾಡುತ್ತಿದೆ. ಮುಂದುವರೆದು ನೀರಿನ ಸಂರಕ್ಷಣೆ ಹಾಗೂ ಸದ್ಬಳಕೆ ಮತ್ತು ಭೂಮಿಯ ಅಂರ್ತಜಲಮಟ್ಟವನ್ನ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಯೋಜನೆಯ ಯಶಸ್ವಿಗೆ ಸಮೂದಾಯ ಭಾಗವಹಿಸುವಿಕೆ ಅತೀ ಮುಖ್ಯ ಎಂದರು. ಯೋಜನೆಯ ಉದ್ದೇಶ ಹಿಡೇರಿಕೆಗಾಗಿ ಬೇರೆ ಇತರೆ ಇಲಾಖೆಗಳನ್ನ ಸಂಯೋಜಿಸಿ ಈ ಇಲಾಖೆಗಳ ಯೋಜನೆಗಳನ್ನ ಸದರಿ ಯೋಜನೆಯಲ್ಲಿ ಒಗ್ಗೂಡಿಸಿ ಆಟಲ್ ಭೂಜಲ ಯೋಜನೆ ಅನುಷ್ಠಾನಗೊಳಿಸಲಾಗುವುದು. ಎಂದರು ಯೋಜನೆಯ ಅವಧಿ 5 ವರ್ಷಗಳಾಗಿದ್ದು , ಪ್ರಾರಂಭದಲ್ಲಿ ಬೆಸ್‍ಲೈನ್ ಡಾಟಾ ಸಂಗ್ರಹಿಸಿ ನಂತರ Wಚಿಣeಡಿ buಜgeಣ ತಯಾರಿಸಿ ತರುವಾಯ ಜಲ ಭದ್ರತಾ ಯೋಜನೆ ಮಾಡಿ ಸಮೂದಾಯಕ್ಕೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹಾಗೂ ನೀರು ಸಂರಕ್ಷಿಸುವ ಕಾರ್ಯಕ್ರಮಗಳನ್ನ ಹಂತ ಹಂತವಾಗಿ ಅನುಷ್ಠಾನ ಮಾಡಲಾಗುವುದು ಎಂದರು .
ಈ ಸಭೆಯಲ್ಲಿ ಸರ್ವ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅದ್ಯಕ್ಷರು , ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಿಬ್ಬಂದಿಗಳು ಗ್ರಾಮ ಪಂಚಾಯಿತಿ ಅದ್ಯಕ್ಷರಾದ ಮಾನ್ಯ ಶ್ರೀ ಶಿವಣ್ಣ ಮತ್ತು ಮಾನ್ಯ ಉಪಾದ್ಯಕ್ಷರು ಮಾನ್ಯ ಸದಸ್ಯರು ಹಾಗು ಪಿ ಡಿ ಒ ಶ್ರೀ ನಾಗರಾಜಪ್ಪ ನವರು ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published.