ಬೆಂಗಳೂರು,ಮೇ.2- ವಿವಿಧ ಬ್ಯಾಂಕ್ಗಳ ಎಟಿಎಂಗಳಲ್ಲಿ ಮೋಸದಿಂದ ಹಣ ಡ್ರಾ ಮಾಡುತ್ತಿದ್ದ ಉತ್ತರ ಪ್ರದೇಶದ ವ್ಯಕ್ತಿಯನ್ನು ಉತ್ತರ ವಿಭಾಗದ ರಾಜಾಜಿನಗರ ಠಾಣೆ ಪೊಲೀಸರು ಬಂಸಿ 52 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ. ದೀಪಕ್ (20) ಬಂತ ವಂಚಕ. ಈತನಿಂದ ವಿವಿಧ ಬ್ಯಾಂಕ್ಗಳ 48 ಎಟಿಎಂ ಕಾರ್ಡ್ ಹಾಗೂ ಹಣ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತಃ ಉತ್ತರ ಪ್ರದೇಶ ರಾಜ್ಯದವನಾದ ಈ ಆರೋಪಿ ಬೆಂಗಳೂರಿಗೆ ಬಂದು ದೊಡ್ಡಕಲ್ಲಸಂದ್ರದಲ್ಲಿ ರೂಮ್ ಮಾಡಿಕೊಂಡಿದ್ದನು. ಈತ ತಮ್ಮ ಊರಿನಿಂದ ಬರುವಾಗ ಪರಿಚಯದವರು ವಿವಿಧ ಬ್ಯಾಂಕುಗಳಲ್ಲಿ ತೆರೆದಿರುವ ಖಾತೆಯ 48 ಎಟಿಎಂ ಕಾರ್ಡ್ಗಳನ್ನು ಕಮಿಷನ್ ನೀಡುವುದಾಗಿ ಪಡೆದುಕೊಂಡಿದ್ದಾನೆ.
ನಗರದ ದೊಡ್ಡಕಲ್ಲಸಂದ್ರ, ಬಿಟಿಎಂ ಲೇಔಟ್, ರಾಜಾಜಿನಗರದಲ್ಲಿನ ವಿವಿಧ ಬ್ಯಾಂಕ್ನ ಎಟಿಎಂ ಸೆಂಟರ್ಗಳಿಗೆ ಹೋಗಿ, ಎಟಿಎಂ ಮಿಷನ್ನಲ್ಲಿ ಕಾರ್ಡ್ ಹಾಕಿ ಹಣ ಡ್ರಾ ಮಾಡಲು ಪಿನ್ ಒತ್ತಿ ನಂತರ ಹಣ ಬರುವ ಜಾಗದಲ್ಲಿ ಕೈಬೆರಳುಗಳನ್ನು ಅಡ್ಡ ಇಟ್ಟುಕೊಂಡು ಹಣ ಪಡೆದುಕೊಂಡಾಗ ಸರ್ವರ್ ಹ್ಯಾಂಗ್ ಆಗುತ್ತದೆ.
ಆ ವೇಳೆ ಆನ್ಲೈನ್ ಮೂಲಕ ಸಂಬಂಧಪಟ್ಟ ಬ್ಯಾಂಕ್ಗೆ ಹಣ ಬಂದಿರುವುದಿಲ್ಲವೆಂದು ದೂರು ನೀಡಿ ನಂತರ ಆ ಹಣವನ್ನು ಪುನಃ ಸಂಬಂಸಿದ ಖಾತೆಗೆ ಬ್ಯಾಂಕ್ನಿಂದ ಜಮಾ ಮಾಡಿಸಿಕೊಳ್ಳುತ್ತಿದ್ದನು.ಹಲವು ದಿನಗಳಿಂದ ವಿವಿಧ ಬ್ಯಾಂಕ್ಗಳ ಎಟಿಎಂಗಳಲ್ಲಿ ಮೋಸದಿಂದ ಹಣ ಡ್ರಾ ಆಗುತ್ತಿರುವ ಬಗ್ಗೆ ಎಂಫಾಸಿಸ್ ಏಜೆನ್ಸಿಯ ಉಮಾಮಹೇಶ್ ಅವರ ಗಮನಕ್ಕೆ ಬಂದಿದೆ.
ಫೆ.23ರಂದು ರಾಜಾಜಿನಗರ ಠಾಣಾ ವ್ಯಾಪ್ತಿಯ ಪ್ರಕಾಶನಗರ, ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಸೆಂಟರ್ನಲ್ಲಿ ಮೋಸದಿಂದ ಹಣ ಪಡೆಯಲು ಪ್ರಯತ್ನಿಸಿರುವುದಾಗಿ ಮಾಹಿತಿ ಬಂದಿದೆ.
ಎಂಫಾಸಿಸ್ ಏಜೆನ್ಸಿಯವರು ಫೆ.24 ರಂದು ಬೆಳಗ್ಗೆ 11.30ರ ಸಮಯದಲ್ಲಿ ಎಟಿಎಂ ಪರಿಶೀಲಿಸಲು ಹೋದಾಗ ವ್ಯಕ್ತಿಯೊಬ್ಬ ಹಣ ಡ್ರಾ ಮಾಡಲು ಬಂದಿದ್ದು, ಅನುಮಾನಗೊಂಡ ಏಜೆನ್ಸಿಯವರು ಆತನನ್ನು ಹಿಡಿದು ವಿಚಾರಿಸಿ ರಾಜಾಜಿನಗರ ಪೆÇಲೀಸರಿಗೆ ಒಪ್ಪಿಸಿದ್ದಾರೆ.
ಪೆÇಲೀಸರು ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆಗೊಳಪಡಿಸಿದಾಗ ಎಟಿಎಂನಿಂದ ಹಣವನ್ನು ಮೋಸದಿಂದ ತೆಗೆದುಕೊಳ್ಳುತ್ತಿದ್ದುದ್ದಾಗಿ ಬಾಯ್ಬಿಟ್ಟಿದ್ದಾನೆ. ಆರೋಪಿಯು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ 19 ಎಟಿಎಂ ಕಾರ್ಡ್, ಎಸ್ಬಿಐ ಬ್ಯಾಂಕ್ನ 20, ಫೆಡರಲ್ ಬ್ಯಾಂಕ್- 4, ಎಚ್ಡಿಎಫ್ಸಿ-2, ಬ್ಯಾಂಕ್ ಆಫ್ ಬರೋಡಾ-2, ಆಕ್ಸಿಸ್ ಬ್ಯಾಂಕ್ನ 1 ಎಟಿಎಂ ಸೇರಿ ಒಟ್ಟು 48 ಎಟಿಎಂ ಕಾರ್ಡ್ಗಳನ್ನು ಬಳಸಿಕೊಂಡು ಸುಮಾರು 4 ರಿಂದ 5 ಲಕ್ಷ ರೂ. ಹಣವನ್ನು ವಂಚನೆಯಿಂದ ಡ್ರಾ ಮಾಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ. ಸ್ವಂತ ಊರಿಗೆ ಹೋದಾಗ ಎಟಿಎಂ ಕಾರ್ಡ್ಗಳನ್ನು ನೀಡಿದ್ದ ಖಾತೆದಾರರಿಗೆ ಕಮಿಷನ್ ನೀಡುತ್ತಿದ್ದಾಗಿ ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನು ಇಬ್ಬರು ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಕೆ.ಎಸ್.ವೆಂಕಟೇಶ್ನಾಯ್ಡು ಮಾರ್ಗದರ್ಶನದಲ್ಲಿ ರಾಜಾಜಿನಗರ ಠಾಣೆ ಇನ್ಸ್ಪೆಕ್ಟರ್ ವೆಂಕಟೇಶ್, ಪಿಎಸ್‌ಐ ಸುಬ್ರಮಣಿ ಮತ್ತು ಸಿಬ್ಬಂದಿ ತಂಡ ವಂಚಕನನ್ನು ಬಂಸುವಲ್ಲಿ ಯಶಸ್ವಿಯಾಗಿರುತ್ತಾರೆ.