ನಿತ್ಯವಾಣಿ, ಹಿರಿಯೂರು, (ಜೂ. 17) : ಹಿರಿಯೂರಿನಲ್ಲಿರುವ ಟೋಟಲ್ ಗ್ಯಾಸ್ ಬಂಕ್ ನಲ್ಲಿ ಪ್ರತೀದಿನವೂ ಆಟೋಚಾಲಕರು ಗ್ಯಾಸ್ ತುಂಬಿಸಿಕೊಳ್ಳುತ್ತೇವೆ ಆದರೆ ಕೋವಿಡ್ ಹಿನ್ನೆಲೆಯಲ್ಲಿ ಲಾಕ್ಡೌನ್ ಆದ ಸಂದರ್ಭದಲ್ಲಿ ಇಲ್ಲಿ ಗ್ಯಾಸ್ ತುಂಬಿಸುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಆಟೋ ಚಾಲಕರಿಗೆ ತುಂಬಾ ತೊಂದರೆ ಯಾಗಿದೆ ಅನಧಿಕೃತ ವಾಗಿ ಗ್ಯಾಸ್ ತುಂಬಿಸಿಕೊಳ್ಳುವಂತಿಲ್ಲ ಇದರಿಂದ ಆಟೋ ಓಡಿಸುವುದು ತುಂಬಾ ತೊಂದರೆಯಾಗಿದೆ ಮತ್ತು ನಮ್ಮ ಜೀವನಕ್ಕೆ ತೊಂದರೆ ಯಾಗುತ್ತಿದೆ ಎಂದು ಆಟೋ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಗ್ಯಾಸ್ ಬಂಕ್ ಮುಂದೆ ಪ್ರತಿಭಟನೆ ನಡೆಸಿದರು.ನಂತರ ತಾಲ್ಲೂಕು ಕಚೇರಿಗೆ ತೆರಳಿ ಡೆಪ್ಯುಟಿ ತಹಶೀಲ್ದಾರ್ ಚಂದ್ರಕುಮಾರ್ ಇವರಿಗೆ ಮನವಿ ನೀಡಿ ಸಮರ್ಪಕವಾಗಿ ಗ್ಯಾಸ್ ವಿತರಣೆಗೆ ಸಹಕಾರಿಸಬೇಕು ಎಂದು ಮನವಿ ಮಾಡಿದರು.ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ರಾದ ಬೈಲಪ್ಪ, ಕೆ ಮಹಂತೇಶ್, ವಜೀರ್, ಗೋವಿಂದ ರಾಜ್, ಪುನೀತ್ ಕುಮಾರ್ ಗಿರೀಶ್ ಪೂಜಾರಿ, ಸೋಮಶೇಖರ್ , ದಿಲೀಪ್ ಭಂಡಾರಿ, ಚಾಂದ್ ಬಾಷ, ಅಶೋಕ್ ಕಿರಣ್ ತಿಪ್ಪೇಸ್ವಾಮಿ ಸೈಯದ್ ರೋಪ್ ಗಂಗಾಧರ್ ಮತ್ತಿತರರು ಪಾಲ್ಗೊಂಡಿದ್ದರು.ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com