ಆಯುಷ್ ಇಲಾಖೆಯಿಂದ ನೀಡುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಗಳ ಬಳಕೆಯನ್ನು ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಸಮರ್ಪಕವಾಗಿ ಬಳಸಿ ಎಂದು ಕೆ. ಮಂಜುನಾಥ್ 

ನಿತ್ಯವಾಣಿ,ಚಿತ್ರದುರ್ಗ,( ಏ.5 ) : ಕಳೆದ ಸಾಲಿಗಿಂತ ಈ ವರ್ಷ ಕೋವಿಡ್-19 ವೈರಸ್ ಎರಡನೇ ಅಲೆಯು ಭೀಕರವಾಗಿದ್ದು, ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಜಿಲ್ಲೆಯ ನೌಕರರು, ಸಾರ್ವಜನಿಕರು, ಮುಂಜಾಗ್ರತಾ ಕ್ರಮವಾಗಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಈ ವರ್ಷವೂ ಸಹ *“ಸಂಶಮನಿವಟಿ ಹಾಗೂ ಆರ್ಕ್ ಈ ಅಜೀಬ್”* ಎಂಬ ರೋಗನಿರೋಧಕ ಶಕ್ತಿ ಉಳ್ಳ ಆಯುಷ್ ಔಷಧಿಗಳನ್ನು ಸಾರ್ವಜನಿಕರಿಗೆ ವಿತರಿಸಲು ಜಿಲ್ಲಾ ಆಯುಷ್ ಇಲಾಖೆ ಮುಂದಾಗಿದೆ.
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಎಲ್ಲಾ 36 ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಆಯುಷ್ ಔಷಧಿ ಲಭ್ಯವಿರುವಂತೆ ಆಯುಷ್ ಇಲಾಖೆ ಕ್ರಮಕೈಗೊಂಡಿದೆ. ಕರೋನಾ ಸಂಕಷ್ಟದ ಸಮಯದಲ್ಲಿ ಫ್ರೆಂಟ್ ಲೈನ್ ವರ್ಕರ್ಸ್ ಆಗಿ ಕೆಲಸ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಎಲ್ಲಾ ನೌಕರರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ.
ಕಳೆದ ವರ್ಷ ಇದೇ ಸಂದರ್ಭದಲ್ಲಿ ಆಯುಷ್ ಇಲಾಖೆ ವತಿಯಿಂದ ಸಂಶಮನಿ ವಟಿ ಮತ್ತು ಅರ್ಕ್ ಈ ಅಜೀಬ್ ಔಷಧಿಗಳನ್ನು ಎಲ್ಲಾ ಮುಂಚೂಣಿಯಲ್ಲಿರುವ ಇಲಾಖೆಗಳಿಗೆ ಒದಗಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡಲಾಗಿರುತ್ತದೆ. ಈ ಬಾರಿ ಆಯುಷ್ ಔಷಧಿಗಳನ್ನು ಜಿಲ್ಲೆಯ ನೌಕರರಿಗೆ ಸಾರ್ವಜನಿಕರಿಗೆ ವಿತರಿಸಲಾಗುವುದು ಆಯುಷ್ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
*ಔಷಧಿಗಳು ಸಿಗುವ ಸ್ಥಳ:*
ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಎಲ್ಲಾ 36 ಸರ್ಕಾರಿ ಆಯುರ್ವೇದ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಲ್ಲಿ ಆಯುಷ್ ಔಷಧಿ ಲಭ್ಯವಿದೆ. ಔಷಧಿಗಳು ಸಿಗುವ ಸ್ಥಳದ ವಿವಿರ ಇಂತಿದೆ.
ಚಿತ್ರದುರ್ಗ ತಾಲ್ಲೂಕಿನ* ಜೆ.ಎನ್.ಕೋಟೆ, ಅಳಗವಾಡಿ, ಕೊಳಾಳ್, ಡಿ.ಹೆಚ್.ಹಟ್ಟಿ, ಕೋಗುಂಡೆ.
ಹಿರಿಯೂರು ತಾಲ್ಲೂಕಿನ* ಹಿರಿಯೂರು, ಐಮಂಗಲ, ಬುರುಡುಕುಂಟೆ, ಸೊಂಡೆಕೆರೆ, ಮ್ಯಾಕ್ಲೂರಹಳ್ಳಿ, ಬ್ಯಾಡರಹಳ್ಳಿ.
ಚಳ್ಳಕೆರೆ ತಾಲ್ಲೂಕಿನ* ಚಳ್ಳಕೆರೆ, ಚಿಕ್ಕಮಧುರೆ, ಬೆಳೆಗೆರೆ, ನನ್ನಿವಾಳ, ಟಿ.ಪಿ.ಹಳ್ಳಿ, ಟಿ.ಎನ್.ಕೋಟೆ, ಮಲ್ಲೂರಹಳ್ಳಿ, ಅಬ್ಬೇನಹಳ್ಳಿ, ಹುಲಿಕುಂಟೆ, ಓಬಳಾಪುರ, ಹಿರೇಹಳ್ಳಿ, ಘಟಪರ್ತಿ, ಪಿ.ಎಂ.ಪುರ.
*ಮೊಳಕಾಲ್ಮುರು ತಾಲ್ಲೂಕಿನ* ದೇವಸಮುದ್ರ.
*ಹೊಳಲ್ಕೆರೆ ತಾಲ್ಲೂಕಿನ* ಚಿತ್ರಹಳ್ಳಿ, ಮಾಳೇನಹಳ್ಳಿ, ಬಿ.ಬಿ.ಹಳ್ಳಿ, ಗೂಳಿಹೊಸಹಳ್ಳಿ.
*ಹೊಸದುರ್ಗ ತಾಲ್ಲೂಕಿನ* ತಂಡಗ, ಆಲಘಟ್ಟ, ದೊಡ್ಡಘಟ್ಟ, ಡಿ.ಟಿ.ವಟ್ಟಿ,ಕೊಂಡುಕೊಳ್ಳಿ, ಬುಕ್ಸಾಗರ, ಹೆಬ್ಬಳ್ಳಿ
ನೌಕರರ ಸಂಘದ ಪದಾಧಿಕಾರಿಗಳು ನಿರ್ದೇಶಕರು ತಮ್ಮ ಕಚೇರಿ ಮುಖ್ಯಸ್ಥರ ಮೂಲಕ  ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ಸಂಖ್ಯೆಯ  ಮಾಹಿತಿಯನ್ನೂಳಗೊಂಡ  ಅರ್ಜಿ ಯೊಂದಿಗೆ ಆಯುಷ್ ಇಲಾಖೆಯ ಜಿಲ್ಲಾ ವೈದ್ಯಾಧಿಕಾರಿಗಳು ಮನವಿ ಮಾಡಿಕೊಂಡಲ್ಲಿ ಸಂಬಂಧಪಟ್ಟ ಕಚೇರಿಗೆ ಬೇಕಾಗುವಷ್ಟು ಔಷಧಿಗಳನ್ನು ನೀಡಲಾಗುತ್ತದೆ ಆಯುಷ್ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರೊನಾ ಇರುವುದರಿಂದ ನಿರ್ದೇಶಕರು ಮತ್ತು ಪದಾಧಿಕಾರಿಗಳು ತಾವು ಜವಾಬ್ದಾರಿಯಿಂದ ತಮ್ಮ ಇಲಾಖೆಗಳ ನೌಕರರಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗುವಂತಹ ಔಷಧಿಗಳನ್ನು ತಪ್ಪದೆ ಕೊಡಿಸುವ ಕೆಲಸ ಮಾಡಲು ಕೋರಿದೆ. ಈ ಬಗ್ಗೆ ಕಚೇರಿ ಮುಖ್ಯಸ್ಥರ ಮನವಿಯೊಂದಿಗೆ ನೌಕರರ ವಿವರಗಳನ್ನು ಸಲ್ಲಿಸಿದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಗಳನ್ನು ನೀಡುವುದಾಗಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳಾದ ವಿಶ್ವನಾಥ್ ರವರು ಭರವಸೆ ನೀಡಿದ್ದಾರೆ.

ಆಯುಷ್ ಇಲಾಖೆಯಿಂದ ನೀಡುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಗಳ ಬಳಕೆಯನ್ನು ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಸಮರ್ಪಕವಾಗಿ ಬಳಸಿ ಕರೋನಾ ಎರಡನೇ ಅಲೆಯ ಅಟ್ಟಹಾಸವನ್ನು, ಆರ್ಭಟವನ್ನು ತಡೆಯುವಲ್ಲಿ ನಿಯಂತ್ರಿಸುವಲ್ಲಿ ಸರ್ಕಾರ ಕೈಗೊಂಡಿರುವ ನಿರ್ಣಯ ಸಫಲವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗ ಅಧ್ಯಕ್ಷರು  ಕೆ ಮಂಜುನಾಥ್   ನಿತ್ಯವಾಣಿ ಪತ್ರಿಕೆಗೆ ತಿಳಿಸಿದ್ದಾರೆ ,                               ಈ ಸಂಧರ್ಭಧಲ್ಲಿ ಪ್ರದೀಪ್ ಕುಮಾರ್ ಜಿ ಆರ್  ಪ್ರಧಾನ ಕಾರ್ಯದರ್ಶಿ , ತಿಮ್ಮಾರೆಡ್ಡಿ ಕೆಟಿ ರಾಜ್ಯ ಪರಿಷತ್ ಸದಸ್ಯ, ವೀರೇಶ್ ಖಜಾಂಚಿ ,  ಲೋಕೇಶ್ ಗೌರವಾಧ್ಯಕ್ಷ  ಹಾಜರಿದ್ದರು

Leave a Reply

Your email address will not be published.