ನಿತ್ಯವಾಣಿ, ಭರಮಸಾಗರ, (ಆ.1) : ” ಆದಿಗುರು ಶಂಕರಾಚಾರ್ಯರಿಂದ ಆರಂಭವಾದ ಗುರುಪೂರ್ಣಿಮೆ ಆಚರಣೆ ಅತ್ಯಂತ ಮಹತ್ವದ್ದಾಗಿದೆ ‘ಗು’ ಎಂದರೆ ಕತ್ತಲೆ ‘ರು’ಎಂದರೆ ದೂಡು ಎಂದರ್ಥ, ಜಗತ್ತಿನ ಕತ್ತಲೆಯನ್ನು ಬೆಳಗಲು ಸೂರ್ಯನ ಬೆಳಕು ಬೇಕು ಹಾಗೆಯೇ ಮನುಷ್ಯನ ಅಜ್ಞಾನವನ್ನು ನೀಗಲು ಗುರುವಿನ ಆಶೀರ್ವಾದ ಬೇಕು” ಎಂದು ಯೋಗ ಗುರುಗಳಾದ ಎಂ.ತಿಪ್ಪೇಸ್ವಾಮಿ ತಿಳಿಸಿದರು.
ಅವರು ಇಂದು ಗುರುಪೂರ್ಣಿಮೆ ಮಾಸದ ಅಂಗವಾಗಿ ಭರಮಸಾಗರದ ಅಳಗವಾಡಿ ಆಯುರ್ವೇದ ಚಿಕಿತ್ಸಾ ಕೇಂದ್ರದಲ್ಲಿ ಓಂಕಾರ ಯೋಗ ಕೇಂದ್ರ ಭರಮಸಾಗರ ಇವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ನುಡಿಗಳಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಳಗವಾಡಿ ಆಯುಷ್ ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿ ಡಾ.ನಾರದಮುನಿ ಮಾತನಾಡಿ ” ಕೊರೋನಾ ಮೊದಲನೆ ಹಾಗೂ ಎರಡನೇ ಅಲೆಯನ್ನು ತಡೆಯಲು ಆಯುರ್ವೇದ ಮತ್ತು ಯೋಗ ತುಂಬಾ ಪ್ರಮುಖ ಪಾತ್ರವಹಿಸಿದೆ ನೂರಾರು ರೋಗಿಗಳು ಯೋಗಭ್ಯಾಸ ದಿಂದ ಗುಣಮುಖರಾಗಿದ್ದಾರೆ. ಇದೇ ಅಭ್ಯಾಸ ಮುಂದುವರಿಸಿದರೆ ನಾವು ಕೊರೋನಾ ಮೂರನೇ ಅಲೆಯ ಬಗ್ಗೆ ಭಯ ಪಡದೆ ತಡೆಯಬಹುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಓಂಕಾರ ಯೋಗ ಕೇಂದ್ರದ ಸದಸ್ಯರಾದ ಸುರೇಶ್ ಬಾಬು, ರುದ್ರೇಶ್, ರಾಜಣ್ಣ ಧನರಾಜ್, ಕಲ್ಲೇಶಪ್ಪ, ಸೂರಪ್ಪ, ಶ್ರೀಮತಿ ಪುಷ್ಪ, ನಿರ್ಮಲಾ, ಲಕ್ಷ್ಮಿ, ಜಯಮ್ಮ, ರೋಪಾ ಹಾಗೂ ಆಯುಷ್ ಚಿಕಿತ್ಸಾ ಕೇಂದ್ರದ ಸಿಬ್ಬ ಭಾಗವಹಿಸಿದ್ದರು.