ಚಿತ್ರದುರ್ಗ ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಏಳು ದಿನಗಳ ಕಾಲ 21ನೇ ಬ್ರಹ್ಮೋತ್ಸವ ಕಾರ್ಯಕ್ರಮವನ್ನು ದೇವಸ್ಥಾನದಲ್ಲಿ ಜರುಗಿಸಲಾಯಿತು. ಇದರ ನೇತೃತ್ವವನ್ನು ವಿಷ್ಣು ಭಟ್ಟಾದ್ರಿಪಾದ ಕೇರಳದ ತಂತ್ರಿಗಳು ನೆರವೇರಿಸಿದ್ದಾರೆ.
ಈ ಸಂದರ್ಭದಲ್ಲಿ ಪೂಜೆ ಹಾಗೂ ಉತ್ಸವ ಬಲಿ ಧ್ವಜಾರೋಹಣ ಪೂಜೆಯನ್ನು ಕೇರಳದ ವಿಷ್ಣು ಭಟ್ಟಾದ್ರಿಪಾದ ಹಾಗೂ ಸಂಗಡಿಗರಿಂದ ಪೂಜೆಯನ್ನು ನೆರವೇರಿಸಲಾಯಿತು ಅಯ್ಯಪ್ಪಸ್ವಾಮಿಯ ಧ್ವಜವನ್ನು ಹರಾಜಾಗಿದ್ದು, ಇದನ್ನು ಮೆದೆಹಳ್ಳಿ ರಸ್ತೆಯಲ್ಲಿರುವ ಪ್ರದೀಪ್ ಪೂಜಾ ಭಂಡಾರದಲ್ಲಿ 25118 ಹರಾಜಿನಲ್ಲಿ ಪಡೆದಿದ್ದಾರೆ.
ಡಿ.27 ರಂದು ಚಿತ್ರದುರ್ಗ ಜನತೆಗೆ ಅನ್ನದಾನ ಕಾರ್ಯಕ್ರಮ ಇರುತ್ತದೆ ಈ ಎಲ್ಲಾ ಪೂಜೆಗಳಿಗೆ ಚಿತ್ರದುರ್ಗ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶರಣ್ ಕುಮಾರ್ ಮನವಿ ಮಾಡಿದ್ದಾರೆ.