ಹಾವು ಮುಂಗಸಿ ಅಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಯ ಯಡಿಯೂರಪ್ಪ ರಾಜಕೀಯ ಉದ್ದೇಶದಿಂದ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಬಿ.ಎನ್.ಚಂದ್ರಪ್ಪ ಆರೋಪಿಸಿದರು.
ನಗರದ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಕಾಂಗ್ರೇಸ್ ನೊಂದಿಗೆ ಕೈ ಜೋಡಿಸಿ ಆಧಿಕಾರ ಪಡೆದಿದ್ದ ಕುಮಾರಸ್ವಾಮಿ ಯಡಿಯೂರಪ್ಪ ಅವರ ಮೇಲೆ ಕೆಂಡಕಾರುತ್ತಿದ್ದರು.ಪ್ರತಿದಿನ ರಾಜಕೀಯ ಕೆಸರೆರಚಾಟ ಮಾಡುತ್ತಿದ್ದರು. ಆದರೆ ಇಂದು ರಾಜಕೀಯ ಉದ್ದೇಶದಿಂದ ಪರಸ್ಪರ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದರು.
ದೇಶದಲ್ಲಿ ರೈತರು ನಲುಗಿ ಹೋಗಿದ್ದಾರೆ. ಭಾರತದ ಇತಿಹಾಸದಲ್ಲಿ ಈ ರೀತಿಯ ರೈತರ ಚಳುವಳಿ ನಡೆದಿರಲಿಲ್ಲ. 25 ಜನರು ಚಳಿಯಿಂದ ಸಾವನ್ನಪ್ಪಿದ್ದಾರೆ. ಪ್ರಧಾನಿಯ ನಿಲುವು ಎಂತಹದ್ದು ಎಂಬುದನ್ನು ಜನರೇ ಗಮನಿಸಿ ಚುನಾವಣೆಗಳಲ್ಲಿ ಮತಹಾಕಿ ಅಧಿಕಾರಕ್ಕೆ ತರಬೇಕು ಎಂದರು.
ರಾಜ್ಯದ ಅಭಿವೃದ್ಧಿಗೆ ಸಂಸದರ ಕೂಗು ಎನು ಎಂದು ಪ್ರಶ್ನಿಸಿದ ಅವರು, 25 ಜನ ಸಂಸದರು ಪ್ರಧಾನಿಯವರ ಮೇಲೆ ಎಂದಾದರೂ ಒತ್ತಡ ಹಾಕಿದ್ದಿರಾ. ಕೊರೊನಾದಿಂದ ಜನತೆ ನಲುಗಿ ಹೋಗಿದ್ದಾರೆ ಇದಕ್ಕೆ ಅನುಧಾನ ತರಲು ಏಕೆ ಮಾತಾಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಏಕೆ ಮಾತಾಡಿಲ್ಲ ಎಂದು ಪ್ರಶ್ನಿಸಿದರು
ಬಿದ್ದಿರುವ ಸಣ್ಣದೊಂದು ಸೇತುವೆ ದುರಸ್ತಿ ಮಾಡಿಸಿ ಅದರ ಮುಂದೆ ನಿಂತು ಪೊಟೊ ತೆಗೆಸಿಕೊಳ್ಳುವ ಹವ್ಯಾಸ ಬಿಟ್ಟು, ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು ಎಂಬುದನ್ನು ತೋರಿಸಿಕೊಡಿ ಎಂದು ಮಾಜಿ ಸಂಸದ ಚಂದ್ರಪ್ಪ ಹಾಲಿ ಸಂಸದ ನಾರಾಯಣಸ್ವಾಮಿ ಹೆಸರನ್ನು ಹೇಳದೆ ಕುಟುಕಿದರು.
ಅಧಿಕಾರಕ್ಕೆ ಬಂದು ಇಷ್ಟು ದಿನ ಆದರೂ ಕೂಡ ಜಿಲ್ಲೆಯ ಅಭಿವೃದ್ಧಿಗೆ ಯಾವುದೆ ಕೆಲಸ ನಡೆದಿಲ್ಲ. ನಾನು ಸಂಸದನಾಗಿ ಮಂಜೂರು ಮಾಡಿಸಿ ತಂದ ಅನುಧಾನದಲ್ಲೇ ಇಂದು ಕಾಮಗಾರಿಗಳು ನಡೆಯುತ್ತಿದ್ದು, ಯಾವುದೇ ಹೊಸ ಅನುಧಾನವನ್ನು ತಂದಿಲ್ಲ. ಅದರೂ ಕೂಡ ಪೋಟೋ ತೆಗೆಸಿಕೊಂಡು ಪ್ರಚಾರ ಪ್ರಿಯರಾಗಿದ್ದಾರೆ ಎಂದು ದೂರಿದರು.
ಜಿಲ್ಲೆಗೆ ಈ ಮೊದಲೇ ಮಂಜೂರು ಆಗಿದ್ದ ಆಸ್ಪತ್ರೆಯನ್ನು ನಾನೇ ಮಂಜೂರು ಮಾಡಿಸಿದೆ ಎಂದು ಹೇಳುವುದು ಎಷ್ಟು ಸರಿ. ನಾನೇ ಮಾಡಿದೆ ಎಂಬುದನ್ನು ಬಿಡಿ ಜನತೆ ನಿಮ್ಮನ್ನು ಕೆಲಸ ಮಾಡಲು ಮತ ಹಾಕಿದ್ದಾರೆ ಎಂಬುದನ್ನು ತಿಳಿದು ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಕಾಂಗ್ರೇಸ್ ವಿಕೇಂದ್ರೀಕರಣ ವ್ಯವಸ್ಥೆಗೆ ಹೊಸ ಅರ್ಥವನ್ನು ನೀಡುವ ಮೂಲಕ ಗ್ರಾ.ಪಂ.ಚುನಾವಣೆ ನಡಸುವ ಮೂಲಕ ಹೊಸ ಅಯಾಮವನ್ನು ಹುಟ್ಟಿಹಾಕಿದೆ ಎಂದು ಹೇಳಿದ ಅವರು, ಯುಪಿಎ ಸರ್ಕಾರ ನೀಡಿರುವ ಉದ್ಯೋಗ ಖಾತ್ರಿ ಯೋಜನೆಯನ್ನು ಈಗಲೂ ಜನತೆ ನೆನೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂ.ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಸರ್ಕಾರ ಬಂದಾಗಿನಿಂದ ಜನರನ್ನು ಹೊಡೆದಾಳುವ ನೀತಿಯನ್ನು ಅನುಸರಿಸಿಕೊಂಡು ಬಂದು ರೈತರ ವಿರುದ್ದವಾದ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಜಾತಿಯ ಸೌಹರ್ದತೆಯಲ್ಲಿ ನಂಬಿಕೆ ಇಲ್ಲದ ಬಿಜೆಪಿಯವರಿಗೆ ಮತ ಕೆಳಲು ಹಕ್ಕು ಇಲ್ಲ ಎಂದು ದೂರಿದರು.
ಬಿಜೆಪಿ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಬಹಳಷ್ಟು ಭ್ರಷ್ಟಾಚಾರ ತಾಂಡವ ಆಡುತ್ತಿದೆ.ಹಿಂಭಾಗಿಲಿನಿಂದ ಬಂದು ಆಧಿಕಾರ ಹಿಡಿದು ಮೊಜಿನಲ್ಲಿ ತೆಲುವು ಬಿಜೆಪಿಯವರು ಜನರ ಒಳಿತಿಗಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ.ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಹನುಮಲಿ ಷಣ್ಮುಖಪ್ಪ, ತಾಜ್‍ಪೀರ್, ಜಿ.ಎಸ್.ಮಂಜುನಾಥ್, ಆರ್.ಕೆ.ನಾಯ್ಡು ಸಂಪತ್, ಮೈಲಾರಪ್ಪಸೇರಿದಂತೆ ಇತರರು ಹಾಜರಿದ್ದರು.
À್ಮು