ಶಾಸಕ ಜಿ ಹೆಚ್ ತಿಪ್ಪಾರೆಡ್ಡಿರವರಿಗೆ ಸಚಿವ ಸ್ಥಾನ….?

 ನಿತ್ಯವಾಣಿ,ಚಿತ್ರದುರ್ಗ,(ಅ.18) : ಚಿತ್ರದುರ್ಗ ನಗರದಲ್ಲಿ ಸೋಮವಾರ ಸಂಜೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗುವ ಮುಂಚೆ ಶಾಸಕ ತಿಪ್ಪಾರೆಡ್ಡಿ ರವರ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತ,ತಿಪ್ಪಾರೆಡ್ಡಿ ರವರು ಹಿರಿಯ ಶಾಸಕರು ಆರು ಬಾರಿ ಶಾಸಕರಾಗಿದ್ದಾರೆ, ಅವರಿಗೆ ಮಂತ್ರಿಗಿರಿ ಲಭಿಸಬೇಕಾಗಿದೆ ನಾನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಲ್ಲಿ ಚರ್ಚೆ ಮಾಡಿ ಮುಂದಿನ ಸಂಪುಟದಲ್ಲಿ ಸೇರಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ ಎಂದು ಸಣ್ಣ ಧ್ವನಿಯಲ್ಲಿ ಮಾತನಾಡಿದರು, ಈ ಮಾತಿಗೆ ನಮ್ಮ ನಿತ್ಯವಾಣಿ ಪತ್ರಿಕೆ ಸಂಪಾದಕರಾದ ಎಸ್ ಟಿ ನವೀನ್ ಕುಮಾರ್ ರವರು ಬಿ ಎಸ್ ಯಡಿಯೂರಪ್ಪ ನವರಿಗೆ ಬರುವಂತ ಎಲೆಕ್ಷನ್ ಬಹಳ ಸಮೀಪದಲ್ಲಿದೆ, ಕಾಲವಕಾಶ ತುಂಬಾ ಕಡಿಮೆ ಇದೆ ನೀವು ಯಾವಾಗ ಜಿ ಹೆಚ್ ತಿಪ್ಪಾರೆಡ್ಡಿ ರವರಿಗೆ ಸಚಿವ ಸ್ಥಾನ ಕೊಡುತ್ತೀರಿ ಇದು ಸಾಧ್ಯನಾ ಎಂದು ಕೇಳಿದ ಪ್ರಶ್ನೆಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು ನಾನು ಸಚಿವ ಸ್ಥಾನ ಕೊಡುತ್ತೇನೆ ಎಂದು ಹೇಳಿಲ್ಲ ಪ್ರಯತ್ನ ಮಾಡುತ್ತೇನೆ ಎಂದು ಉತ್ತರವನ್ನು ಪ್ರಶ್ನೆಯಾಗಿಯೇ ಇರುವಂತೆ ಮಾತನಾಡಿದರು.

Leave a Reply

Your email address will not be published.