ಹೊಸ ಕಾಯ್ದೆ ಜಾರಿಗೊಳಿಸಿದ ಬಿಬಿಎಂಪಿ

ಹೊಸ ಕಾಯ್ದೆ ಜಾರಿಗೊಳಿಸಿದ ಬಿಬಿಎಂಪಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಇಂದಿನಿಂದ ಹೊಸ ಕಾಯ್ದೆ ಜಾರಿಯಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಎರಡೂ ಸದನಗಳಲ್ಲಿ ಒಪ್ಪಿಗೆ ನೀಡಿ ಕಾಯ್ದೆಗೆ ಅನುಮೋದನೆ ಪಡೆಯಲಾಗಿದ್ದು, ಈಗ ಹೊಸ ಕಾಯ್ದೆ ಬಂದಿದೆ. ವಾರ್ಡ್‍ಗಳ ಸಂಖ್ಯೆ ಹೆಚ್ಚಳವಾಗಬೇಕಿದೆ. ಹೊಸ ಪ್ರದೇಶಗಳ ಸೇರ್ಪಡೆಗೆ ಅವಕಾಶವಿದೆ. ಹೀಗಾಗಿ ನಗರದ ಹೊರವಲಯಗಳಿಗೆ ಗುಡ್ ನ್ಯೂಸ್ ಸಿಗಲಿದೆ.

ಬಿಬಿಎಂಪಿ ಕಾಯ್ದೆ ಸೋಮವಾರದಿಂದ ಜಾರಿ: ಕಾಯ್ದೆಯಲ್ಲಿ ಏನೇನಿದೆ?

ನಗರದಲ್ಲಿ 8 ವಲಯಗಳಿದ್ದು ಅದನ್ನು 15 ವಲಯಗಳನ್ನಾಗಿ ಮಾಡಬಹುದು. ವಲಯ ಡಿ ಮಾರ್ಕೆಷನ್ ಕಮೀಷನ್ ರಚನೆಗೆ ಅವಕಾಶವಿದೆ. ವಲಯ ವ್ಯಾಪ್ತಿಯ ವಾರ್ಡ್‍ಗಳ ಸಂಖ್ಯೆಯನ್ನು ಸಮಿತಿಯ ಸದಸ್ಯರು ನಿರ್ಧಾರ ಮಾಡಲಿದ್ದಾರೆ.

ಜಂಟಿ ಆಯುಕ್ತರು ಆಗ ವಲಯ ಆಯುಕ್ತರಾಗಲಿದ್ದಾರೆ. ರಾಜ್ಯ ಸರ್ಕಾರದ ಕಾರ್ಯದರ್ಶಿ ಅಧೀನದಲ್ಲಿ ಜೋನಲ್ ಕಮೀಷನರ್ ಕಾರ್ಯ ನಿರ್ವಹಿಸಲಿದ್ದಾರೆ. ಸೆಕ್ರೆಟರಿ ಲೆವಲ್ ಅಧಿಕಾರಿಗಳ ನೇಮಕ, ವಾರ್ಡ್ ಸಂಖ್ಯೆಗಳಹೆಚ್ಚಳ ಆಗಬೇಕಿದೆ, ಯಾವ ಆಧಾರದಲ್ಲಿ ಪ್ರದೇಶಗಳ ಸೇರ್ಪಡೆ ಮಾಡಬೇಕೆಂಬ ಅಂತಿಮ ತೀರ್ಮಾನ ಸರ್ಕಾರ ಕೈಗೊಳ್ಳಲಿದೆ ಎಂದರು.

ಯಾವ ಆಧಾರದಲ್ಲಿ ಪ್ರದೇಶಗಳನ್ನು ಬಿಬಿಎಂಪಿಗೆ ಸೇರ್ಪಡೆ ಮಾಡಬೇಕು ಎಂಬುದರ ಬಗ್ಗೆ ತೀರ್ಮಾನವಾಗಬೇಕಿದ್ದು, ವಾರ್ಡ್‍ಗಳ ಸೇರ್ಪಡೆ ಅಂತಿಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದರು.

ವಾರ್ಡ್ ಸಂಖ್ಯೆ ಹೆಚ್ಚಳ ವಿಚಾರಕ್ಕೆ ಸರ್ಕಾರ ಅನುಮೋದನೆ ನೀಡಬೇಕು. ಕರಡು ಪ್ರತಿ ರಚನೆ ಮಾಡಿ ಸಾರ್ವಜನಿಕರ ಅಭಿಪ್ರಾಯ ಪಡೆದ ನಂತರ ಅಧಿಸೂಚನೆ ಹೊರಬೀಳಲಿದೆ ಎಂದು ತಿಳಿಸಿದರು.

ಸದ್ಯ ಈ ಸಂಬಂಧಿತ ಬೈಲಾ-ಆಯಕ್ಟ್ ಎರಡೂ ಪಾಲಿಕೆಯ ಮುಂದಿದೆ. ಎರಡನ್ನೂ ಪರಾಮರ್ಶಿಸಿದಾಗ ಕಾಯ್ದೆ ಅಂತಿಮವಾಗಲಿದೆ. ತಾಜಾ ನಿದರ್ಶನವೆಂದರೆ ಆಯುಕ್ತರ ಅನುಮತಿ ಪಡೆದು ಜಾಹಿರಾತು ಹಾಕಲು ಅವಕಾಶವಿದೆ ಎಂದು ಹೇಳಿದರು. ಮಾಡಲ್ ಬಿಲ್ಡಿಂಗ್ ಬೈಲಾ ಕೇಂದ್ರ ಸರ್ಕಾರ ನೀಡಿದ್ದು, ಇದನ್ನು ಅಳವಡಿಸಿಕೊಳ್ಳಲಾಗುತ್ತಿದೆ.

1976ರಿಂದ ಕೆಎಂಸಿ ಆಯಕ್ಟ್ ಬಂದಿತ್ತು. ಇದರಡಿ ಎಲ್ಲ ಮಹಾನಗರ ಪಾಲಿಕೆಗಳು ನಡೆಯುತ್ತಿತ್ತು. ಆದರೆ ಈಗ ಹೊಸ ಕಾಯ್ದೆ ಬಂದಿದೆ ಎಂದರು.

ಹೊಸ ಕಾಯ್ದೆ ಪ್ರಕಾರ ಸಮಿತಿ ರಚನೆಯಾದ ಮೇಲೆ 198ರಿಂದ 243 ವಾರ್ಡ್‍ಗಳು ಆಗಲಿವೆ. ಒಂದು ಕಿ.ಮೀ ವ್ಯಾಪ್ತಿಯಲ್ಲಿ ನಗರದ ಹೊರವಲಯವನ್ನು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ. ಪ್ರತಿ ವಾರ್ಡ್ ಕಮಿಟಿಯಲ್ಲಿ ಪರಿಶಿಷ್ಟ ಜಾತಿ/ ಪಂಗಡದವರು, ಮಹಿಳಾ ಸದಸ್ಯರು ಇರುತ್ತಾರೆ. ಮುಖ್ಯ ಆಯುಕ್ತರು ಈ ಸದಸ್ಯರನ್ನು ನೇಮಕ ಮಾಡಲಿದ್ದಾರೆ.

Leave a Reply

Your email address will not be published.