ಚಿತ್ರದುರ್ಗ, ನಿತ್ಯವಾಣಿ, ಏ 2 ,: ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ನಿ 2020-21 ಸಾಲಿನಲ್ಲಿ `3.69ಕೋಟಿತೆರಿಗೆ ಮುಂಚಿನ ವರಮಾನ ಗಳಿಸಿರುತ್ತದೆ ಎಂದು ತಿಳಿಸಲು ಹರ್ಷಿಸುತ್ತೇವೆ. `33 ಕೋಟಿ ಸ್ವಂತ ಬಂಡವಾಳ, `132 ಕೋಟಿ ಡಿಪಾಜಿಟ್ ಹೊಂದಿದ್ದು, `90 ಕೋಟಿ ಸಾಲ ಪಾವತಿಸಿದ್ದು, `62 ಕೋಟಿಗಳನ್ನು ಹೂಡಿಕೆಗಳಲ್ಲಿ ತೊಡಗಿಸಲಾಗಿದೆ. ಬ್ಯಾಂಕಿನ ಒಟ್ಟಾರೆ ಅನುತ್ಪಾದಕ ಆಸ್ತಿಯು ಶೇ.1.90% ಇದ್ದು, ನಿವ್ವಳ ಅನುತ್ಪಾದಕ ಆಸ್ತಿಯ ಪ್ರಮಾಣವು 0.0% ಇರುತ್ತದೆ.ಬ್ಯಾಂಕಿನ ಒಟ್ಟಾರೆ ವ್ಯವಹಾರವು `222 ಕೋಟಿಗಳಿರುತ್ತದೆ. ಬ್ಯಾಂಕ್ ಸಾಧಿಸಿರುವ ಪ್ರಗತಿಯನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ