ಮಂಡಳಿಯ ಉನ್ನತ ಕೆಲಸ ಮಾಡಲು ನಾನು ಬದ್ಧ ::ಅಧ್ಯಕ್ಷ ಜೀವನಮೂರ್ತಿ

 

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಚಿತ್ರದುರ್ಗ::

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ರಚನೆ ಬಗ್ಗೆ ಅಧ್ಯಕ್ಷರು ವಿವರಿಸುತ್ತಾ ಸರ್ಕಾರವುಚಿತ್ರದುರ್ಗವನ್ನುಕೇಂದ್ರ ಸ್ಥಾನವನ್ನಾಗಿಸಿಕೊಂಡು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಸರ್ಕಾರಅಧಿಸೂಚನೆ ಸಂ: ಉ.ಎಲ್.ಬಿ.ಎಸ್.: 94 ಬೆಂಗಳೂರು, ದಿನಾಂಕ: 07-10-1994 ಮತ್ತುಕೃತೋಇ: 176:ಕೃಯೋಕಾ:93 ಬೆಂಗಳೂರು, ದಿನಾಂಕ: 04-01-1995 ರ ಮೇರೆಗೆ ದಿನಾಂಕ: 26-10-1995 ರಿಂದಜಾರಿಗೆ ಬರುವಂತೆ ರಚಿಸಿದೆ. ಸರ್ಕಾರಿಆದೇಶ ಸಂ: 244 ಕೃಯೋಕಾ:2000 ರ ಪ್ರಕಾರ ಈ ಮಂಡಳಿಯ ಕಾರ್ಯ ವ್ಯಾಪ್ತಿಯು ಕೃಷಿ ಇಲಾಖೆಯಿಂದಯೋಜನಾಇಲಾಖೆಯ ಆಡಳಿತ ವ್ಯಾಪ್ತಿಗೆ ವರ್ಗಾವಣೆ ಹೊಂದಿರುತ್ತದೆ. ಬಯಲುಸೀಮೆ ಪ್ರದೇಶದ ಸರ್ವಾಂಗೀಣಅಭಿವೃದ್ಧಿಗಾಗಿಒಂದು ಪ್ರತ್ಯೇಕವಾದ ಮಂಡಳಿಯ ರಚನೆಯಅಗತ್ಯತೆಕಂಡು ಬಂದಿದ್ದರಿಂದ, ಈ ಪ್ರದೇಶಗಳ ಕೃಷಿ ತತ್ಸಂಬಂಧಿತ ಚಟುವಟಿಕೆಗಳಾದ ಕೃಷಿ, ತೋಟಗಾರಿಕೆ, ಅರಣ್ಯ, ಪಶು ಸಂಗೋಪನೆ, ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳು ಹಾಗೂ ಇತ್ಯಾದಿಗಾಗಿ ಮಂಡಳಿಯ ನಿಧಿ ಮತ್ತು ಮಂಡಳಿಯು ಹೊಂದಿರುವಅಥವಾಅದರಲ್ಲಿ ನಿಹಿತವಾಗಿರುವಎಲ್ಲಾ ಸ್ವತ್ತನ್ನು ಈ ಅಧಿನಿಯಮದ ನೆರವೇರಿಕೆಗಾಗಿ ಕನಿಷ್ಠ ಶೇ.60 ಕ್ಕಿಂತಕಡಿಮೆಇಲ್ಲದಂತಹಒಟ್ಟಾರೆ ನಿಧಿಯ ಭಾಗವನ್ನು ಈ ಮೇಲ್ಕಂಡ ಉದ್ದೇಶಗಳಿಗೆ ಬಳಸತಕ್ಕದ್ದು ಹಾಗೂ ಉಳಿದ ಶೇ.40 ರಷ್ಟುಇತರೆಗ್ರಾಮೀಣಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಈ ಅಧಿಸೂಚನೆ ಪ್ರಕಾರರಾಜ್ಯದ 08 ಜಿಲ್ಲೆಗಳು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿದ್ದು, ಜಿಲ್ಲೆಗಳ ಪುನರ್ ವಿಂಗಡಣೆಯಾದ ನಂತರ ಮತ್ತೆ 06 ಜಿಲ್ಲೆಗಳನ್ನು ಸೇರಿಸಿಕೊಂಡು ಒಟ್ಟು 14 ಜಿಲ್ಲೆಗಳನ್ನೊಳಗೊಂಡ 57 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ 70 ವಿಧಾನಸಭಾ ಕ್ಷೇತ್ರಗಳು ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿರುತ್ತವೆ.ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಗೆ ಸರ್ಕಾರದಆದೇಶ ಸಂ: ಎಸ್.ಡಬ್ಲೂ ಎ:15: ಎಸ್.ಬಿ.ಎಸ್.:94, ದಿನಾಂಕ: 22-02-1996 ರ ಪ್ರಕಾರ 147 ಮಂಡಳಿಗೆ ಸದಸ್ಯರಾಗಿರುತ್ತಾರೆ.

ಮಂಡಳಿಯ ವ್ಯಾಪ್ತಿಯಲ್ಲಿಆದ್ಯತೆಯ ಮೇಲೆ ತೆಗೆದುಕೊಳ್ಳಬಹುದಾದ ಕಾಮಗಾರಿಗಳು ಈ ಕೆಳಕಂಡಂತಿರುತ್ತವೆ
ಆಧ್ಯತೆI ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳು

1. ವಿವಿದೋದ್ದೇಶದಿಂದಕೂಡಿದ ಕಾಮಗಾರಿಗಳು ಅಂದರೆರಸ್ತೆಯ ಮೇಲೆ ಹರಿಯುವ ಹಳ್ಳಕ್ಕೆ ಬಂದಾರ(ಅಚಿuse ತಿಚಿಥಿ) ನಿರ್ಮಿಸಿ, ಸುತ್ತಮುತ್ತಲ ಜಮೀನುಗಳ ಃoಡಿe ತಿeಟಟ ಗಳನ್ನು ಖeಛಿhಚಿಡಿgeಮಾಡಲು, ದನ ಕರುಗಳಿಗೆ ನೀರಿನ ವ್ಯವಸ್ಥೆ ಮತ್ತು ಸಾರ್ವಜನಿಕರಉಪಯೋಗಕ್ಕಾಗಿಊರಿಂದಊರಿಗೆ ಸಂಪರ್ಕ ಕಲ್ಪಿಸಿ, ಸಂಚರಿಸಲು ಅನುಕೂಲ ಕಲ್ಪಿಸುವಂತಹ ಕಾಮಗಾರಿಗಳು.
2. ಸರ್ಕಾರಿ ಜಮೀನುಗಳಲ್ಲಿ ಚೆಕ್‍ಡ್ಯಾಂ ನಿರ್ಮಾಣ, ಸಣ್ಣ ಕೆರೆಗಳ ಬದು ಮತ್ತುಕೋಡಿ ನಿರ್ಮಾಣ, ಮಳೆ ನೀರುತಡೆಗೋಡೆ, ಗೋಕಟ್ಟೆ ನಿರ್ಮಾಣ, ಕಲ್ಯಾಣಿಗಳ ಜೀರ್ಣೋದ್ಧಾರ ಮುಂತಾದ ಕಾಮಗಾರಿಗಳು.
ಆಧ್ಯತೆII
1. ದೊಡ್ಡ ಪ್ರಮಾಣದಲ್ಲಿ ಸೂಕ್ತ ಸರ್ಕಾರಿ ಜಾಗಗಳಲ್ಲಿ ಕಿರು ಕಾಲುವೆಗಳು (ಅoಟಿಣouಡಿ ಣಡಿeಟಿಛಿhes) ಇಂಗು ಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ಹೆಚ್ಚಿಸುವ ಕಾಮಗಾರಿಗಳು ಇತ್ಯಾದಿ; Pಡಿeಜಿeಡಿಚಿbಟಥಿ ತಿiಣh Pಟಚಿಟಿಣಚಿಣioಟಿ.
2. ಲಭ್ಯವಿರುವ ಸರ್ಕಾರಿಜಮೀನಿನಲ್ಲಿಅಥವಾ ಬೃಹತ್/ಮಧ್ಯಮ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ/ ಪಂಗಡದ ಸಮುದಾಯಕ್ಕೆ ಸೇರಿದ ವ್ಯಕ್ತಿ/ವ್ಯಕ್ತಿಗಳನ್ನು ಒಟ್ಟುಗೂಡಿಸಿ ಅರಣ್ಯೀಕರಣ, ತೋಟಗಾರಿಕೆ, ಸಮುದಾಯ ಕೃಷಿ, ಃoಡಿe ತಿeಟಟ ಸಹಾಯದಿಂದ ಹನಿ ನೀರಾವರಿ ಒದಗಿಸಿ ಆರ್ಥಿಕ ಮಟ್ಟ ಹೆಚ್ಚಿಸುವ ಕಾಮಗಾರಿಗಳು.

ಆಧ್ಯತೆIII ಇತರೆಅಭಿವೃದ್ಧಿ ಕಾಮಗಾರಿಗಳು
1. ರಸ್ತೆ ನಿರ್ಮಾಣ
2. ಚರಂಡಿ ನಿರ್ಮಾಣ
3. ಸರ್ಕಾರಿಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳು, ಅಂಗನವಾಡಿಗಳ ಕಟ್ಟಡಗಳು, ಪ್ರಾಥಮಿಕಆರೋಗ್ಯ ಕೇಂದ್ರಗಳ ನಿರ್ಮಾಣ.
4. ಸಾರ್ವಜನಿಕ ಹಿತದೃಷ್ಟಿಯಿಂದಕೂಡಿದ ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವಂತಹ ಅಥವಾ ಸರ್ಕಾರಿಜಮೀನಿನಲ್ಲಿ ಸಾರ್ವಜನಿಕ ಸಮುದಾಯ ಭವನ, ಸಾರ್ವಜನಿಕ ವ್ಯಾಯಾಮ ಶಾಲೆ ಮತ್ತು ಸಾರ್ವಜನಿಕಆರೋಗ್ಯಕೇಂದ್ರ(ಊeಚಿಟಣh ಅeಟಿಣeಡಿ) ಇತ್ಯಾದಿ.
5. ವಿಶೇಷ ಘಟಕ/ಗಿರಿಜನ ಉಪ ಯೋಜನೆಯಡಿಯಲ್ಲಿ ಸದರಿಜಾತಿ/ ಜನಾಂಗಕ್ಕೆಉಪಯೋಗವಾಗುವಂತಹ ಸಮುದಾಯ ಭವನ, ವ್ಯಾಯಾಮ ಶಾಲೆ ಮತ್ತು ಪ್ರಾಥಮಿಕಆರೋಗ್ಯಕೇಂದ್ರ(Pಡಿimಚಿಡಿಥಿ ಊeಚಿಟಣh ಅeಟಿಣeಡಿ) ಇತ್ಯಾದಿ.

ಮಂಡಳಿಯು ಅನುಮೋದಿಸಿದ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯು ತನ್ನದೇಆದಯಾವುದೇ ಅನುಷ್ಟಾನಾಧಿಕಾರಿಗಳನ್ನು ಹೊಂದಿರುವುದಿಲ್ಲ. ಮಂಡಳಿಯ ಕಾಮಗಾರಿಗಳನ್ನು ಮುಖ್ಯವಾಗಿಕೃಷಿ ಇಲಾಖೆ, ಪಂಚಾಯತ್‍ರಾಜ್‍ಇಂಜಿನಿಯರಿಂಗ್ ಇಲಾಖೆ, ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಕರ್ನಾಟಕಗ್ರಾಮೀಣ ಮೂಲಭೂತ ಸೌಕರ್ಯಅಭಿವೃದ್ಧಿ ನಿಗಮ, ನಿರ್ಮಿತಿಕೇಂದ್ರ ಹಾಗೂ ಅರಣ್ಯ ಇಲಾಖೆ ಮತ್ತುಇತರೆ ಸರ್ಕಾರಿ ಇಲಾಖೆಗಳಿಂದ ಮಂಡಳಿಯ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.

2020-21ನೇ ಸಾಲಿನ ಮುಂದುವರೆದ ವಿಶೇಷ ಸಾಮಾನ್ಯಯೋಜನೆ(ಬಂಡವಾಳ ವೆಚ್ಚ) ಗೆ ರೂ.7982.00 ಲಕ್ಷಗಳು ಹಾಗೂ ಮುಂದುವರೆದ ಸಾಮಾನ್ಯಯೋಜನೆ(ಬಂಡವಾಳ ವೆಚ್ಚ) ಕಾಮಗಾರಿಗಳಿಗೆ ರೂ.540.20 ಲಕ್ಷಗಳು ಒಟ್ಟಾರೆಯಾಗಿ ರೂ.8522.20 ಲಕ್ಷಗಳ ಅನುದಾನಅವಶ್ಯಕವಾಗಿ ಬೇಕಾಗಿರುತ್ತದೆ. ಆದರೆ, 2020-21ನೇ ಸಾಲಿನ ಆಯವ್ಯಯದಲ್ಲಿ ಸಾಮಾನ್ಯಯೋಜನೆ(ಬಂಡವಾಳ ವೆಚ್ಚ) ಯಡಿ ನಿಗಧಿಪಡಿಸಿದ ಅನುದಾನ ರೂ.1672.00 ಲಕ್ಷಗಳನ್ನು ಹಾಗೂ ಆರಂಭಿಕ ಶಿಲ್ಕು ರೂ.83.00 ಲಕ್ಷಗಳು ಸೇರಿಒಟ್ಟಾರೆ ರೂ.1755.00 ಲಕ್ಷಗಳನ್ನು 2020-21ನೇ ಸಾಲಿನಲ್ಲಿ ಬಳಸಿಕೊಂಡರೂ ಸಹ ರೂ.6767.20 ಲಕ್ಷಗಳು ಕೊರತೆಯಾಗುತ್ತದೆ.ಕೊರತೆಯಾಗುವಅನುದಾನರೂ.6767.20 ಲಕ್ಷಗಳನ್ನು ಇದೇಆರ್ಥಿಕ ವರ್ಷದಲ್ಲಿ ಒದಗಿಸಿದಲ್ಲಿ ಈ ಯೋಜನೆಯು ಪೂರ್ಣಗೊಳ್ಳುತ್ತದೆ, ಮಂಡಳಿಯ ಉನ್ನತ ಕೆಲಸ ಮಾಡಲು ನಾನು ಬದ್ಧ ಎಂದು ಕಚೇರಿಯಲ್ಲಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ   ಅಧ್ಯಕ್ಷರಾದ   ಜೀವನಮೂರ್ತಿಯವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ  ಕೃಷ್ಣ ನಾಯಕ್, ನಿರ್ದೇಶಕಿ ಶ್ಯಾಮಲಾ ಪ್ರಕಾಶ್, ಇಲಾಖೆ ಕಾರ್ಯದರ್ಶಿ ಬಸವರಾಜ್ ಹಾಜರಿದ್ದರು

Leave a Reply

Your email address will not be published.