ವಿಶೇಷ ಸಂದರ್ಶನ
ಬಯಲು ಸೀಮೆ ಸಮಗ್ರ ಅಭಿವೃದ್ದಿಗೆ ಸಿದ್ದ:- ಅಣಬೇರು ಎನ್.ಇ.ಜೀವನ್‍ಮೂರ್ತಿ
ಪಕ್ಷದ ಮತ್ತು ಸರ್ಕಾರದ ಆದೇಶಕ್ಕೆ ಬದ್ದನಾಗಿ ಬಯಲುಸೀಮೆ ಅಭಿವೃದ್ದಿಗೆ ಶ್ರಮ ಪಡುತ್ತೆನೆಂದು ಬಯಲು ಸೀಮೆ ಅಭಿವೃದ್ದಿ ಮಂಡಳಿಯ ನೂತನ ಅಧ್ಯಕ್ಷ ಅಣಬೇರು ಎನ್.ಇ.ಜೀವನ್‍ಮೂರ್ತಿ ಹೇಳಿದರು. ದಿ:26-11-2020ರಂದು ಪಕ್ಷದಿಂದ ಆದೇಶವಾಗಿ ದಿ:27-11-2020ರಂದು ಅಧಿಕಾರ ಸ್ವೀಕಾರ ಪಡೆದುಕೊಂಡಿದ್ದು ತಾಂತ್ರಿಕ ಪಧವೀದರ(ಬಿ.ಇ. ಸಿವಿಲ್)ಪದವಿ ಪಡೆದಿದ್ದು, ನಾನು ಭಾರತೀಯ ಜನತಾ ಪಾರ್ಟಿಯಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ 1989ರಲ್ಲಿ ಚಿತ್ರದುರ್ಗ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆ ಉಸ್ತುವಾರಿಯಾಗಿ ರೈತರ ಪರವಾಗಿ ಕಾರ್ಯ ಕೈಗೊಂಡಿದ್ದು ದಾವಣಗೆರೆ ಜಿಲ್ಲಾ ಪ್ರಧಾನಕಾರ್ಯದರ್ಶಿಯಾಗಿ, ಸಂಘಟನಾ ಕಾರ್ಯದರ್ಶಿಯಾಗಿ ಉಪಾಧ್ಯಕ್ಷರಾಗಿ 2013ರಿಂದ 2017ರವರೆಗೆ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರಾಗಿದ್ದು, 2014ರ ನರೇಂದ್ರಮೋದಿಯವರು ದಾವಣಗೆರೆಗೆ ಬಂದಾಗ ನೇತೃತ್ವ ವಹಿಸಿ ಹಾಗೂ ನರೇಂದ್ರಮೋದಿಯವರು ಪ್ರಧಾನಮಂತ್ರಿಯಾಗಿ 2016ರಲ್ಲಿ ಬಂದಾಗ ಉಸ್ತುವಾರಿಯಾಗಿ 2016 ಮಾಯಕೊಂಡ ವಿಧಾನಸಭೆ ಕ್ಷೇತ್ರದ ಮೈನ್ ಬಾಡಿ ಅಧ್ಯಕ್ಷರಾಗಿ ಜವಬ್ದಾರಿಯಾಗಿ, ದಾವಣಗೆರೆ ಜಿಲ್ಲಾ ಲೋಕಸಭಾ ಪ್ರಭಾರಿಯಾಗಿ ಪಕ್ಷಕೊಟ್ಟಂತಹ ಜವಬ್ದಾರಿಯನ್ನು ನಿಷ್ಠಾವಂತನಾಗಿ ನಿಭಾಯಿಸಿದ್ದು, ಪಕ್ಷವು ನನ್ನನ್ನು ಗುರುತಿಸಿ ಬಯಲು ಸೀಮೆ ಅಭಿವೃದ್ದಿ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮಂಡಳಿಗೆ ಸಂಬಂಧಪಟ್ಟ 14 ಜಿಲ್ಲೆಯಲ್ಲಿ ಬರುವಂತಹ 70 ಜನ ಶಾಸಕರು, 24 ವಿಧಾನಪರಿಷತ್ ಸದಸ್ಯರು 14 ಲೋಕಸಭಾ ಸದಸ್ಯರು ಆಡಳಿತದಲ್ಲಿ ಬರುತ್ತದೆ. ನಾನು ಚೆಕ್‍ಡ್ಯಾಂ ಮತ್ತು ಅರಣ್ಯ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ಕೊಟ್ಟು ನನ್ನ ತವರು ಜಿಲ್ಲೆಯಲ್ಲಿ ಬರುವಂತಹ ಜಗಲೂರು ಹಾಗೂ ಚಿತ್ರದುರ್ಗದ 6 ತಾಲ್ಲೂಕುಗಳಿಗೂ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತಂದು ಶ್ರಮವಹಿಸಿ ಕೆಲಸ ಮಾಡುತ್ತೇನೆ. ತಿಂಗಳಲ್ಲಿ 10 ದಿನ ಮಂಡಳಿಯ ಕಛೇರಿಯಲ್ಲಿ ಸಾರ್ವಜನಿಕರಿಗೆ ಸಿಗುತ್ತೇನೆ. ಮತ್ತು 20 ದಿನಗಳಲ್ಲಿ ಪ್ರವಾಸ ಕೈಗೊಳ್ಳುತ್ತೇನೆಂದು ನಮ್ಮ ನಿತ್ಯವಾಣಿ ದಿನಪತ್ರಿಕೆಯ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡರು