ಸಿದ್ದುಗೆ ಇನ್ನೂ ಮೆಚ್ಯುರಿಟಿ ಬಂದಿಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಬೆಳಗಾವಿ: ನಿಜವಾಗಿ ಸೈಡ್‌ ಆಯಕ್ಟರ್‌ ಯಾರು ಎಂಬುದು ಸಿದ್ದರಾಮಯ್ಯಗೆ ಚೆನ್ನಾಗಿ ಗೊತ್ತಿದೆ. ಅವರಿಗೆ 60 ವರ್ಷ ಮೇಲ್ಪಟ್ಟಾಗಿದ್ದರೂ ಈಗಲೂ ರಾಹುಲ್‌ ಗಾಂಧಿ ಮುಂದೆ ಕೈ ಕಟ್ಟಿ ನಿಲ್ಲುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಎಂತಹ ವ್ಯವಸ್ಥೆ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯಗೆ ಇನ್ನೂ ಮೆಚ್ಯುರಿಟಿ ಬಂದಿಲ್ಲ. ಅವರು ಈಗಲೂ ತಮಗಿಂತ ಕಿರಿಯರಾದ, ಏನೂ ಅನುಭವ ಇಲ್ಲದ ರಾಹುಲ್‌ ಗಾಂಧಿ ಎದುರು ಕೈಕಟ್ಟಿ ನಿಲ್ಲುವುದು ಎಲ್ಲರಿಗೂ ಗೊತ್ತಿದೆ. ಯಾರು ಪ್ರಚಾರಕ್ಕೆ ಬರಬೇಕು ಅಥವಾ ಬೇಡ ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಆದರೆ ಸಿಡಿ ಪ್ರಕರಣದಲ್ಲಿ ಎಸ್‌ಐಟಿ ಸರಿಯಾದ ದಾರಿಯಲ್ಲೇ ತನಿಖೆ ನಡೆಸುತ್ತಿದೆ. ಇದಕ್ಕೆ ಆದಷ್ಟು ಬೇಗ ತಾರ್ಕಿಕ ಅಂತ್ಯ ಸಿಗಬೇಕಿದೆ ಎಂದರು.

Leave a Reply

Your email address will not be published.