ವೀಣಾ ವಿ.ನಾಯಕ Msc Nsg, ಆರೋಗ್ಯ ಶುಶ್ರೂಷಕೆಯ ಸಾಧನೆಯ ಹಾದಿಯಲ್ಲಿ,
ನಿತ್ಯವಾಣಿ ವಿಶೇಷ ವರದಿ ,ಚಿತ್ರದುರ್ಗ, (ಜೂ.19) : ವೀಣಾ ವಿ .ನಾಯಕ ರವರು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಶುಶ್ರೂಷಕ ಅಧಿಕಾರಿಗಳಾಗಿದ್ದು , ತನ್ನ ನೌಕರಿಯ ಹೆಚ್ಚಿನ ಸಮಯ ಜಿಲ್ಲಾ ಆಸ್ಪತ್ರೆಗೆ ಬರುವಂತಹ ಅನಾರೋಗದಿಂದ ಬಳಲಿ ದಾಖಲಾಗುವವರನ್ನು ಎಲ್ಲರ ತಾಯಿಯಂತೆ ಚಿಕಿತ್ಸೆಯನ್ನು ಕೊಡುತ್ತಾ ನಗುಮುಖದಲ್ಲಿ ಅವರಲ್ಲಿ ಮಾತನಾಡುತ್ತಾ ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ಹುದ್ದೆಯನ್ನು ನೀಡಿದರು ಕೂಡ ಅದನ್ನು ಹೆಮ್ಮೆಯಿಂದ ನಿಭಾಯಿಸಿ ರೋಗಿಗಳ ಹಾಗೂ ನಾಗರೀಕರ ಪ್ರೀತಿಗೆ ಪಾತ್ರರಾಗಿದ್ದಾರೆ,
ಇವರು ಆರೋಗ್ಯ ಕೇಂದ್ರದಲ್ಲಿ ಜೀವನದ ಮೊದಲ ದಾರಿ 1998 ಇಸವಿ ಯಿಂದ 15 ವರ್ಷದವರೆಗೆ ದೊಡ್ಡ ಸಿದ್ದವನಹಳ್ಳಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ತಮ್ಮ ಕರ್ತವ್ಯವನ್ನು ಅತ್ಯುತ್ತಮವಾಗಿ ಸೇವೆಸಲ್ಲಿಸಿದ್ದಾರೆ,
ಇಲ್ಲಿಯ ನಾಗರೀಕರಿಂದ ಅತ್ಯುತ್ತಮ ಶುಶ್ರೂಷಕರು ಎಂದು ಹೆಸರು ಪಡೆದಿದ್ದಾರೆ, ಇವರು ಮಾಡುತ್ತಿರುವ ಬಡರೋಗಿಗಳ ಸೇವೆಯೂ ಶ್ಲಾಘನೀಯವಾದದ್ದು, ಅಲ್ಲಿಂದ 2014ರಲ್ಲಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ವರ್ಗಾವಣೆಯ ಮುಖಾಂತರ ಬಂದು ಕಾರ್ಯನಿರ್ವಹಿಸಿದರು, ಇವರ ವಿದ್ಯಾಭ್ಯಾಸ Msc Nsg, ಪದವೀಧರೆ ಆಗಿರುವುದರಿಂದ ಕಿರಿಯ ಮಹಿಳಾ ಆರೋಗ್ಯ ಸಹಾಯಕರ ಶಾಲೆಗೆ ಜಿಲ್ಲಾ ಆಸ್ಪತ್ರೆಯಿಂದ OOD ಮೇಲೆ ಹೋಗಿ ಅಲ್ಲಿ ಆರು ವರ್ಷಗಳ ಕಾಲ ಬೋಧಕರು ಮತ್ತು ಪ್ರಾಂಶುಪಾಲರಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು, 2018ರಲ್ಲಿ ರಾಜ್ಯದಲ್ಲೇ ಚಿತ್ರದುರ್ಗ NSG ಸರ್ಕಾರಿ ತರಬೇತಿ ಕೇಂದ್ರವನ್ನು ಪ್ರಥಮ ಸ್ಥಾನಕ್ಕೆ ತಂದರು, ಆ ಸಮಯದಲ್ಲಿ ಇವರ ಬೋಧನಾ ಅನುಭವ ಮತ್ತು ಬೋಧನಾ ಕ್ರಮ ಆಡಳಿತವು ಅಮೋಘವಾಗಿ ಇರುವಂತದ್ದು, ನಂತರ 2020ರಲ್ಲಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಧೈರ್ಯದಿಂದ ಕೊರೋನಾ ರೋಗವನ್ನು ಲೆಕ್ಕಿಸದೆ ಕೋವಿಡ್ -19 ರ ಸಮಯದಲ್ಲಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಪಿಪಿಕಿಟ್ ಧರಿಸಿಕೊಂಡು ತುರ್ತು ಚಿಕಿತ್ಸಾ ಘಟಕ, ಪುರುಷರ ಎಮರ್ಜೆನ್ಸಿ ವಾರ್ಡ್ ಮತ್ತು ಮಹಿಳೆಯರ ಎಮರ್ಜೆನ್ಸಿ ವಾರ್ಡ್ಗಳಲ್ಲಿ ,ಕೋವಿಡ್ ಸೋಂಕಿತ ರೋಗಿಗಳ ಸೇವೆಯನ್ನು ನಿರ್ವಹಿಸಿದ್ದರು,



ಇಷ್ಟೇ ಅಲ್ಲದೆ 1.9. 2020 ರಂದು ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯಿಂದ ಸೂಪರ್ವೈಸರ್ ಆಗಿ ಒಂದು ದಿನವೂ ರಜೆ ಹಾಕದೆ ಪಿ ಪಿಕಿಟ್ ಧರಿಸಿಕೊಂಡು ಐಸಿಯು, ಪುರುಷರ ಜನರಲ್ ವಾರ್ಡ್, ಮಹಿಳೆಯರ ಜನರಲ್ ವಾರ್ಡ್, ಸ್ಪೆಷಲ್ ವಾರ್ಡಗಳಲ್ಲಿ ಎಲ್ಲಾ ತಮ್ಮ ಕಾಯ ,ವಾಚ, ಶ್ರದ್ಧೆ ಮನಸ್ಪೂರ್ವಕವಾಗಿ ಕರ್ತವ್ಯ ಸಲ್ಲಿಸಿರುತ್ತಾರೆ,
ಅಷ್ಟೇ ಅಲ್ಲದೆ ಅಲ್ಲಿ ಕೋವಿಡ್ ರೋಗಿಗಳು ತಿನ್ನುವ ಊಟ-ತಿಂಡಿ ಬಿಸಿನೀರಿನಿಂದ ಹಿಡಿದು ರೋಗಿಗಳ ವೈಯಕ್ತಿಕ ಸ್ವಚ್ಛತೆ ಹಾಗೂ ಹಾಸ್ಪಿಟಲ್ ವಾರ್ಡ್ ಸ್ವಚ್ಛತೆಗೂ ಉತ್ತಮವಾಗಿ ಕಾರ್ಯ ನಿರ್ವಹಿಸಿರುತ್ತಾರೆ, ಕೋವಿಡ್ ಎರಡನೇ ಅಲೆಯಲ್ಲಿ ಕೂಡ GYNIC OT, COT ಮತ್ತುIPP-SARI ವಾರ್ಡ್ಗಳಲ್ಲಿ ಪಿ ಪಿಕಿಟ್ ಧರಿಸಿ ಮ್ಯೂ ಕೋರ್ ಮೈಕೋಸಿಸ್ (BLACK FUNGUS) ಕೋವಿಡ್ ರೋಗಿಗಳ ಸೇವೆಯನ್ನು ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ, ಒಟ್ಟಿನಲ್ಲಿ ಇವರು ಆಸ್ಪತ್ರೆಯಲ್ಲಿ ರೋಗಿಗಳ ಸೇವೆ ಮತ್ತು ಚಿಕಿತ್ಸೆಗೆ ಸ್ಪಂದಿಸಿ ಎಲ್ಲರಿಗೂ ಸಹಕಾರಿ ಯಾಗಿದ್ದಾರೆ, ಅತ್ಯುತ್ತಮ ಸೇವಾಮನೋಭಾವ ಹೊಂದಿದವರಾಗಿದ್ದು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ, ಹಾಗೂ ಇವರು ಕೊರೋನಾ ರೋಗಿ ಗಳನ್ನು ಗುಣಪಡಿಸುವಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ವಿಶ್ವಕರ್ಮ ಸೇವಾ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಇನ್ನೂ ಅನೇಕ ಕೆಲವು ಸಂಘ-ಸಂಸ್ಥೆಗಳು ಇವರನ್ನು ಗುರುತಿಸಿ ಗೌರವ ಪೂರ್ವಕವಾಗಿ ಅಭಿನಂದಿಸಿ ರುತ್ತಾರೆ,
ನಮ್ಮ ನಿತ್ಯವಾಣಿ ದಿನಪತ್ರಿಕೆಯು ಅತ್ಯುತ್ತಮ ಕಾರ್ಯನಿರ್ವಹಿಸಿ ಕೆಲಸ ಮಾಡಿದ ಇವರನ್ನು ಸಂದರ್ಶನ ಮಾಡಿ ಇವರ ಅನುಭವಗಳನ್ನು ಪಡೆದವು ಇಂತಹ ಸೌಜನ್ಯವುಳ್ಳ ಇವರಿಗೆ ಸರ್ಕಾರವು ಇವರನ್ನು ಗುರುತಿಸಿ ಬಡ ರೋಗಿಗಳ ಸೇವೆ ಮಾಡಲು ಅತ್ಯುನ್ನತ ಹುದ್ದೆಯನ್ನು ಕೊಟ್ಟು ಸಹಕರಿಸಬೇಕಾಗಿದೆ, ಈ ಸಮಯದಲ್ಲಿ ಇವರು ಜನತೆಗೆ ಸಂದೇಶವನ್ನು ಕೊಟ್ಟಿದ್ದಾರೆ, ಅದರಲ್ಲಿ ಜನರಿಗೆ ಆತ್ಮಸ್ಥೈರ್ಯ ಬಹಳ ಮುಖ್ಯವಾಗಿದ್ದು ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ, ನಮ್ಮ ದೇಶಕ್ಕೆ ಸಹಾಯ ಮಾಡುವವರು ನಾವೆಲ್ಲರೂ, ಪ್ರತಿದಿನ ಬೆಳಗ್ಗೆ, ಸಾಯಂಕಾಲ, ಪ್ರಾಣಾಯಾಮ ಮಾಡಿ ಶ್ವಾಸಕೋಶವನ್ನು ಬಲಪಡಿಸಿ ಕೊಳ್ಳಿ, ಧ್ಯಾನ ಮಾಡಿ ಮನಸ್ಸು ಪರಿಶುದ್ಧವಾಗಸಿ ಕೊಳ್ಳಿ, ಯೋಗಾಸನ ಮಾಡಿ ದೇಹ ಹಗುರವಾಗಿ ಮತ್ತು ಲವಲವಿಕೆಯಿಂದ ಕೂಡಿರುತ್ತದೆ, ನಡಿಗೆ ನಡೆಯಿರಿ ದೇಹಕ್ಕೆ ಯಾವಾಗಲೂ ಅಡ್ಡಿ ಆತಂಕ ಇಲ್ಲದೆ ಸಂತೋಷವಾಗಿರುವುದು, ಉತ್ತಮ ಆಹಾರ ಸೇವನೆ ಮಾಡಿ, ಆಹಾರವನ್ನು ಹಿತಮಿತವಾಗಿ ಬಳಸಿ ಜೀರ್ಣಾಂಗ ಕ್ರಿಯೆ ಉತ್ತಮವಾಗಿ ಇಟ್ಟು ಕೊಳ್ಳಿ, , ಎಂದು ನಾಗರಿಕರಲ್ಲಿ ಕೋವಿಡ್ ತೊಲಗಿಸೋಣ ಎಂಬ ಮೆಸೇಜನ್ನು ಕೊಟ್ಟರು,
ಸುದ್ದಿಗಾಗಿ, ಜಾಹೀರಾತಿಗಾಗಿ ,
ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020