ಹಾಸನ : ಮಲೆನಾಡಿನಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಸಾಹಸಿ ಯುವಕನೊಬ್ಬ ತನ್ನ ಜೀವ ಲೆಕ್ಕಿಸದೇ ಚಿರತೆಯೊಂದಿಗೆ ಸೆಣಸಾಡಿ ತನ್ನ ತಾಯಿಯ ಪ್ರಾಣ ಉಳಿಸಿದ್ದಾನೆ.
ಹೌದು, ಹಾಸನ ಜಿಲ್ಲೆಯ ಅರಸೀಕೆರೆಯ ಬೈರಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಚಿರತೆ ದಾಳಿಯಲ್ಲಿ ಗಾಯಗೊಂಡ ಮಗ ಹಾಗೂ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಹಿನ್ನೆಲೆ
ಕಿರಣ್ ಹಾಗೂ ಆತನ ತಾಯಿ ಚಂದ್ರಮ್ಮ ತಮ್ಮ ಜಮೀನಿಗೆ ಹೋಗುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಚಂದ್ರಮ್ಮನ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಆಗ ಅಲ್ಲೇ ಇದ್ದ ಕಿರಣ್ ಕೂಡಲೇ ಚಿರತೆ ಮೇಲೆ ಎರಗಿ , ಚಿರತೆ ಜೊತೆ ಸೆಣಸಾಡಿ ತನ್ನ ತಾಯಿಯನ್ನು ಚಿರತೆಯಿಂದ ಕಾಪಾಡಿದ್ದಾನೆ. ಅಮ್ಮನ ಮೇಲೆರಗಿದ ಚಿರತೆಯ ಕುತ್ತಿಗೆಯನ್ನು ಬಿಗಿ ಹಿಡಿದು ಸೆಣಸಾಡಿದ ಕಿರಣ್ ಬರೋಬ್ಬರಿ 15 ನಿಮಿಷಗಳ ಕಾಲ ಸೆಣಸಾಟ ನಡೆಸಿ ಚಿರತೆಯನ್ನು ಹೊಡೆದು ಸಾಯಿಸಿದ್ದಾನೆ. ಘಟನೆಯಲ್ಲಿ ಕಿರಣ್ ಹಾಗೂ ಚಂದ್ರವ್ವಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೆತ್ತವ್ವನ ಪ್ರಾಣ ಕಾಪಾಡಿದ ಸಾಹಸಿ ಮಗನಿಗೆ ನಾವು ಶಹಬ್ಬಾಸ್ ಹೇಳಲೇಬೇಕು.!