ನಿತ್ಯವಾಣಿ ಗುರುವಾರದ ರಾಶಿ ಭವಿಷ್ಯ

ನಿತ್ಯವಾಣಿ ಗುರುವಾರದ ರಾಶಿ ಭವಿಷ್ಯ

ಮೇಷ
ಗುರುವಾರ, 10 ಜೂನ್
ವೆಚ್ಚಗಳು ನಿಮ್ಮ ಹತೋಟಿ ಮೀರಲಿವೆ.ನಿಮ್ಮ ಖರ್ಚನ್ನು ಹಿಡಿತದಲ್ಲಿಟ್ಟುಕೊಳ್ಳುವಂತೆ, ವಾಸ್ತವವಾಗಿ, ಎಲ್ಲಾ ಹಣಕಾಸು ವಿಚಾರಗಳ ಬಗ್ಗೆ ಎಚ್ಚರವಹಿಸುವ ಮತ್ತು ಅವುಗಳನ್ನು ವಿವೇಚನೆಯಿಂದ ನಿಭಾಯಿಸುವ ಅಗತ್ಯವಿದೆ. ವ್ಯಾಜ್ಯ ಮತ್ತು ಜಗಳಗಳು ನಡೆಯಲಿವೆ. ಸಂಘರ್ಷ ಮತ್ತು ವಿರೋಧಗಳಿಂದ ದೂರವಿರಿ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ನೀವು ನಿರಾತಂಕ ಸ್ಥಿತಿಯಲ್ಲಿದ್ದಂತೆ ನಿಮಗೆ ಕಂಡುಬರುವುದಿಲ್ಲ. ಆರೋಗ್ಯ ತೊಂದರೆಗಳ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ದಿನವು ನಿಮಗೆ ಸಂಭಾವ್ಯ ನಿರಾಶಾದಾಯಕ ದಿನವಾಗಿರುತ್ತದೆ.

ವೃಷಭ
ಗುರುವಾರ, 10 ಜೂನ್
ವಿಶೇಷ ಮತ್ತು ಫಲಪ್ರದ ದಿನವು ನಿಮಗಾಗಿ ಕಾದಿದೆ. ನೀವು ಅಗಾಧ ಸೃಜನಶೀಲ ಮತ್ತು ನಾವೀನ್ಯದಿಂದ ಕೂಡಿರಬಹುದು. ನೀವು ದಿನಪೂರ್ತಿ ಸ್ಥಿರ ಮನಸ್ಸು ಮತ್ತು ಸ್ಪಷ್ಟ ಆಲೋಚನೆಗಳನ್ನು ಹೊಂದಿರುತ್ತೀರಿ. ನಿಮ್ಮ ಕೆಲಸದಲ್ಲಿ ತೀವ್ರ ಆಸಕ್ತಿಯನ್ನು ತೋರಿಸುತ್ತೀರಿ ಮತ್ತು ಪ್ರತಿ ಕ್ಷಣಗಳನ್ನು ಆನಂದಿಸುತ್ತೀರಿ. ನಿಮ್ಮ ಎಲ್ಲಾ ಹಣಕಾಸು ಅಗತ್ಯತೆಗಳನ್ನು ಪೂರೈಸಲು ನಿಮಗೆ ಸಾಧ್ಯವಾಗಲಿದೆ ಮತ್ತು ಭವಿಷ್ಯಕ್ಕಾಗಿ ಯೋಜನೆ ರೂಪಿಸುವಿರಿ.ಆಡಂಬರದ ಮತ್ತು ಸುಖಸಾಧನ ವಸ್ತುಗಳ ಮೇಲಿನ ವೆಚ್ಚದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮನೆಯ ವಾತಾವರಣವು ಉತ್ಸಾಹ ಮತ್ತು ಆತ್ಮವಿಶ್ವಾಸಕ್ಕೆ ಪ್ರೇರೇಪಿಸುತ್ತದೆ.

ಮಿಥುನ
ಗುರುವಾರ, 10 ಜೂನ್
ದಿನದ ಉತ್ತರಾರ್ಧವು ಸ್ವಲ್ಪ ಕಷ್ಟಕರವೆನಿಸಬಹುದು,
ದಿನದ ಅಂತ್ಯದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ನಿಮ್ಮ ಮಗನೊಂದಿಗೆ ವಾಗ್ವಾದ ನಡೆಸುವ ಸಾಧ್ಯತೆಯಿದೆ. ನಿಮಗೆ ಮಾತ್ರವೇ ಗೊತ್ತಿರುವ ಕಾರಣಕ್ಕೆ ನೀವು ಅಸಹನೆಗೊಳ್ಳಬಹುದು ಮತ್ತು ಕೋಪಗೊಳ್ಳಬಹುದು. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಪ್ರೀತಿಪಾತ್ರರ ಮನಸ್ಸನ್ನು ನೋಯಿಸುವಿರಿ. ಇದು ಹೆಚ್ಚಿನ ಪ್ರಮಾಣದಲ್ಲಿಯೂ ಆಗಿರಬಹುದು. ಈ ಸಿಟ್ಟು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ನಿಮ್ಮ ಕಣ್ಣು ಅಥವಾ ಕಿವಿಗಳಲ್ಲಿ ಸ್ವಲ್ಪ ನೋವಿನ ಅನುಭವ ಉಂಟಾಗಬಹುದು. ಆಳವಾದ ಉಸಿರು ತೆಗೆದುಕೊಳ್ಳಿ ಮತ್ತು ಪ್ರಶಾಂತರಾಗಿ. ನಿಮ್ಮ ಅಂಜಿಕೆಯನ್ನು ಅಡಗಿಸಿಕೊಳ್ಳಲು ನಾಟಕೀಯ ನಗೆ ಬೇಡ.ಇದು ಮನಸ್ತಾಪಕ್ಕೆ ಕಾರಣವಾಗಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅಗತ್ಯವಿದ್ದಲ್ಲೆಲ್ಲಾ ಮುಚ್ಚುಮರೆ ಬೇಡ
ಕರ್ಕಾಟಕ
ಗುರುವಾರ, 10 ಜೂನ್
ಈ ದಿನವು ಹರ್ಷದಾಯಕ ಹಾಗೂ ಭಾಗ್ಯದಾಯಕವಾಗಿರುವ ಭರವಸೆ ಇದೆ, ಆದಾಯದಲ್ಲಿ ಗಮನಾರ್ಹ ವೃದ್ಧಿಯಾಗಲಿದೆ. ಇತರ ಮೂಲಗಳಿಂದ ಲಾಭಗಳನ್ನು ನಿರೀಕ್ಷಿಸಬಹುದು. ಸ್ನೇಹಿತರೊಂದಿಗೆ ಕಳೆದ ಸಮಯಗಳು ಖುಷಿ ಹಾಗೂ ಪ್ರಯೋಜನವನ್ನು ತರುತ್ತದೆ. ಪತ್ನಿಯರು ಆಕರ್ಷಕ ಉಡುಗೊರೆಗಳ ಮೂಲಕ ಪತಿಯನ್ನು ಅಚ್ಚರಿಗೊಳಿಸಬಹುದು. ವ್ಯವಹಾರದಲ್ಲಿ ಅಭಿವೃದ್ಧಿಯಾಗಲಿದೆ. ನೀವು ಏಕಾಂಗಿಯಾಗಿದ್ದಲ್ಲಿ ನಿಮ್ಮ ಜತೆಗಾರರ ಭೇಟಿಯನ್ನು ನಿರೀಕ್ಷಿಸಬಹುದು. ನಿಮ್ಮ ಮಕ್ಕಳೊಂದಿಗಿನ ಸಾಂಗತ್ಯವನ್ನು ನೀವು ಆನಂದಿಸಬಹುದು. ದಿನಪೂರ್ತಿ ನೀವು ಸಂಪೂರ್ಣ ಚೈತನ್ಯ ಹಾಗೂ ಉತ್ಸಾಹದಿಂದಿರುತ್ತೀರಿ. ಚಿಂತೆ ಮತ್ತು ಆತಂಕಗಳು ನಿಮ್ಮಿಂದ ದೂರವಿರುವ ಸಾಧ್ಯತೆಯಿದೆ. ಹೊರಾಂಗಣ ಕೂಟಗಳಿಗೆ ತೆರಳುವಿರಿ ಮತ್ತು ಸ್ವಾದಿಷ್ಟ ತಿನಿಸುಗಳು ಸಿಗಲಿವೆ.

ಸಿಂಹ
ಗುರುವಾರ, 10 ಜೂನ್
ವ್ಯವಹಾರಗಳಿಗೆ ಇದೊಂದು ಅತ್ಯುತ್ತಮ ದಿನ. ಎಲ್ಲವೂ ಪರಿಪೂರ್ಣವಾಗಿಯೇ ಸಫಲವಾಗುವ ನಿರೀಕ್ಷೆಯಿದೆ. ಅಧಿಕಾರ ಮತ್ತು ಪ್ರಭಾವವನ್ನು ಹೊಂದಿರುವ ವ್ಯಕ್ತಿಗಳು ನಿಮ್ಮತ್ತ ಒಲವು ತೋರಲಿದ್ದಾರೆ. ನಿಮ್ಮ ಘನತೆ ಮತ್ತು ಕೀರ್ತಿಯಲ್ಲಿ ವೃದ್ಧಿ ಉಂಟಾಗಲಿದೆ. ನಿಮ್ಮ ತಂದೆಯು ಸಹಾಯ ಮತ್ತು ಪ್ರಯೋಜನಗಳನ್ನು ನೀಡಲಿದ್ದಾರೆ. ಕಚೇರಿ ವ್ಯವಹಾರಗಳು ಲಾಭ ತರಲಿವೆ. ಉತ್ತಮ ಆರೋಗ್ಯದ ಭರವಸೆಯಿದೆ. ಮನೆಯ ವಾತಾವರಣವು ಆನಂದದಾಯಕವಾಗಿರುತ್ತದೆ. ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯವಹಾರಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ಕಾರ್ಯರೂಪಕ್ಕೆ ಬರಲಿವೆ.

ಕನ್ಯಾ
ಗುರುವಾರ, 10 ಜೂನ್
ಇಂದು ನಿಮಗೆ ಖಂಡಿತವಾಗಿಯೂ ಉತ್ಕೃಷ್ಟ ದಿನವಾಗಲಿದೆ. ಹತ್ತಿರದ ಸಂಬಂಧಿಗಳೊಂದಿಗೆ ಖುಷಿಭರಿತ ವಿಹಾರ ತೆರಳುವ ಸಾಧ್ಯತೆಯಿದೆ. ಮಹಿಳೆಯರು ಉಡುಗೊರೆಗಳನ್ನು ನೀಡಲಿದ್ದಾರೆ. ಧಾರ್ಮಿಕ ಚಟುವಟಿಕೆಗಳು ಪ್ರಾಯಶಃ ದೇವಾಲಯ ಭೇಟಿಯ ಸಾಧ್ಯವಿದೆ. ದೂರದೂರಿನಿಂದ ಬರುವ ವಿಶೇಷ ಸುದ್ದಿಯು ನಿಮ್ಮನ್ನು ದಿಗ್ಭ್ರಮೆಗೊಳಿಸಲಿದೆ. ಸಹೋದರರು ಮತ್ತು ಸ್ನೇಹಿತರು ಸಹಕಾರಿ ಮತ್ತು ಅನುಕೂಲಕರ ಭಾವನೆಯನ್ನು ಹೊಂದಿರುತ್ತಾರೆ. ಧನಲಾಭ ಉಂಟಾಗುವ ಭರವಸೆಯಿದೆ.

ತುಲಾ
ಗುರುವಾರ, 10 ಜೂನ್
ಹೊಸ ಯೋಜನೆ ಮತ್ತು ಕಾರ್ಯಗಳಿಗೆ ಈ ದಿನವು ಅನುಕೂಲಕರ ದಿನ ಎಂಬುದಾಗಿ ಸಾಬೀತಾಗಲಿದೆ. ಸುಲಲಿತ ವರ್ತನೆಗಳು ನಿಮ್ಮ ಅದೃಷ್ಟವನ್ನು ಇಮ್ಮಡಿಗೊಳಿಸುತ್ತದೆ.ಕಚೇರಿಯಲ್ಲಿ ಅಸಮಾಧಾನ ಉಂಟುಮಾಡುವಂತಹ ಯಾವುದೇ ಸಂಗತಿಗಳನ್ನು ಆಹ್ವಾನಿಸಬೇಡಿ. ನಿಮ್ಮ ಪ್ರತಿಸ್ಪರ್ಧಿಗಳ ಮೇಲೆ ಕಣ್ಣಿಟ್ಟಿರಿ. ಆರೋಗ್ಯದ ಬಗ್ಗೆ ನಿರ್ಲ್ಯಕ್ಷ ಬೇಡ. ಅತೀಂದ್ರಿಯ ಮತ್ತು ನಿಸರ್ಗಾತೀತ ವಿಚಾರಗಳ ಬಗ್ಗೆ ನೀವು ಆಕರ್ಷಿಸಲ್ಪಡುವ ಸಾಧ್ಯತೆಯಿದೆ. ಧ್ಯಾನವು ನಿಮ್ಮ ಮನಸ್ಸಿಗೆ ತೃಪ್ತಿ ನೀಡಲಿದೆ ಮತ್ತು ಇದರಿಂದ ನಿಮಗೆ ಎಂದೆಂದಿಗೂ ಪ್ರಯೋಜನ ಉಂಟಾಗುವ ಭರವಸೆಯಿದೆ. ಮಹಿಳೆಯರಿಂದ ವಿಶೇಷವಾಗಿ ನಿಮ್ಮ ಪತ್ನಿಯಿಂದ ದೂರವಿರಿ. ಸುಧೀರ್ಘ ಚಿಂತನೆ ಮತ್ತು ಅಂತರಂಗ ಶೋಧನೆಯು ಶಾಂತಿ ಮತ್ತು ನೆಮ್ಮದಿಯನ್ನು ತರಲಿದೆ.

ವೃಶ್ಚಿಕ
ಗುರುವಾರ, 10 ಜೂನ್
ಇಂದಿನ ದಿನವು ಸ್ವಲ್ಪ ಮಟ್ಟಿಗೆ ಎಂದಿನಂತಿರುವುದಿಲ್ಲ. ಗೊಂದಲದ ರೀತಿಯ ಘಟನೆಗಳಲ್ಲೂ ನಿಮಗೆ ನಿಮ್ಮಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ವಿನೋದ ಕೂಟ, ಪ್ರವಾಸ ಮತ್ತು ಅದ್ಧೂರಿ ಭೋಜನದೊಂದಿಗೆ ನಿಮ್ಮ ಸ್ನೇಹಿತರ ಸಂಗಡ ನೀವು ಅತ್ಯಂತ ಖುಷಿಯಿಂದಿರುವಿರಿ. ನಿಮಗಿಷ್ಟವಾದ ಉಡುಪು ಧರಿಸುವುದರಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೀರಿ. ಆಳವಾದ ಶ್ಲಾಘನೆಯು ಕೇವಲ ವೃತ್ತದಲ್ಲಿನ ಮೂಲೆಯಂತಿರುತ್ತದೆ. ಕಾರು ಪ್ರಯಾಣವು ನಿಮ್ಮ ಖುಷಿ ಮತ್ತು ಸಂತೋಷವನ್ನು ಇನ್ನಷ್ಟು ಹೆಚ್ಚಿಸುತ್ತದೆ. ವಿದೇಶಿಯರೊಂದಿಗಿನ ಹರ್ಷಭರಿತ ಭೇಟಿ, ಸಂಬಂಧಿಗಳೊಂದಿಗಿನ ಸ್ನೇಹಕೂಟ ಮುಂತಾದವುಗಳ ನಿಶ್ಚಿತ ಸಂಭವವಿದೆ.

ಧನು
ಗುರುವಾರ, 10 ಜೂನ್
ಈ ದಿನವನ್ನು ಧನಲಾಭದ ದಿನವನ್ನಾಗಿ ನಿರೂಪಿಸಲಾಗಿದೆ. ಮನೆಯಲ್ಲಿ ನೆಲೆಯಾಗಿರುವ ಉಲ್ಲಾಸಕರ ಮತ್ತು ಗೆಲುವಿನ ವಾತಾವರಣದಿಂದಾಗಿ ನೀವು ತೃಪ್ತಿ ಹಾಗೂ ಖುಷಿಯಿಂದಿರುತ್ತೀರಿ. ವೃತ್ತಿನಿರತರಿಗೆ ಮತ್ತು ಕಚೇರಿ ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳ ಶ್ಲಾಘನೆಗಳು ದೊರೆಯಲಿವೆ. ನಿಮ್ಮ ಜೊತೆ ಕೆಲಸಗಾರರು ವಿಧೇಯ ಹಾಗೂ ಸಹಕಾರ ಮನೋಭಾವವನ್ನು ಹೊಂದಿರುವ ನಿರೀಕ್ಷೆಯಿದೆ. ನಿಮ್ಮ ಹುಟ್ಟೂರಿನಿಂದ ಶುಭಸುದ್ದಿ ಬರುವ ನಿರೀಕ್ಷೆಯಿದೆ. ಪ್ರತಿಸ್ಪರ್ಧಿಗಳು ಮತ್ತು ವೈರಿಗಳು ನಿಮ್ಮಿಂದ ದೂರವಿರಬಹುದು. ಎಲ್ಲರೊಂದಿಗೂ ವಿನಯ ಹಾಗೂ ಸಭ್ಯತೆಯಿಂದಿರಿ. ಸ್ನೇಹಿತೆಯರನ್ನು ಭೇಟಿ ಮಾಡುವ ಸಂಭವವಿದೆ. ನೀವು ದಿನವಿಡೀ ತಾಜಾ ಹಾಗೂ ಉಲ್ಲಾಸದಿಂದಿರುತ್ತೀರಿ.

ಮಕರ
ಗುರುವಾರ, 10 ಜೂನ್
ಈ ದಿನವು ನಿಮ್ಮನ್ನು ಒತ್ತಡ ಹಾಗೂ ಗೊಂದಲದಲ್ಲಿರಿಸುವ ಸಾಧ್ಯತೆಯಿದೆ. ನಿಮ್ಮ ದೈನಂದಿನ ಹಾಜರಾಗುವ ಉತ್ಸಾಹವನ್ನು ನೀವು ಕಳೆದುಕೊಳ್ಳಬಹುದು. ಅತ್ಯಂತ ಪ್ರಮುಖ ಹಾಗೂ ಆವಶ್ಯಕವಾದ ಯಾವುದೇ ವಿಚಾರಗಳನ್ನು ಇಂದು ಕೈಗೊಳ್ಳಬೇಡಿ. ಸಂಗತಿಗಳು ನಿಮ್ಮ ಹಾದಿಯಲ್ಲಿ ಸಾಗುವ ಸಾಧ್ಯತೆಯಿಲ್ಲ. ನಿಮ್ಮ ಮಕ್ಕಳ ಆರೋಗ್ಯ ಮತ್ತು ವರ್ತನೆಯು ನಿಮ್ಮನ್ನು ಇನ್ನಷ್ಟು ಚಿಂತೆಗೀಡುಮಾಡುತ್ತದೆ. ಮನೆಯಲ್ಲಿನ ಹಿರಿಯ ಜೀವಿಗಳಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ. ನಿಮ್ಮ ಮೇಲಾಧಿಕಾರಿಗಳಿಂದ ಅಸಾಮಾಧಾನವನ್ನು ಎದುರಿಸಬಹುದು. ಅನಗತ್ಯ ಖರ್ಚಿನ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಕುಂಭ
ಗುರುವಾರ, 10 ಜೂನ್
ನಿಮ್ಮ ದಿನವು ಪ್ರೀತಿ ಮತ್ತು ವಾತ್ಸಲ್ಯದಿಂದ ತುಂಬಿರುತ್ತದೆ. ನಿಮ್ಮ ಆಲೋಚನೆಗಳು ಅಲ್ಲಿಂದಿಲ್ಲಿಗೆ ಹಾರಲಿವೆ ಮತ್ತು ನೀವು ಅವಿಶ್ರಾಂತ ಹಾಗೂ ಗೊಂದಲಕ್ಕೆ ಒಳಗಾಗಬಹುದು. ಹಣಕಾಸಿಗೆ ಸಂಬಂಧಿಸಿದ ಸಭೆ ಮತ್ತು ಮಾತುಕತೆಗಳು ನಡೆಯುವ ಸಾಧ್ಯತೆಯಿದೆ. ಮಹಿಳೆಯರು ಆಡಂಬರದ ಮತ್ತು ಸೌಂದರ್ಯ ಸಾಧನಗಳನ್ನು ಖರೀದಿಸುವ ಮೂಲಕ ಮುಕ್ತವಾಗಿ ಖರ್ಚುಮಾಡುವ ಸಂಭವವಿದೆ. ತಾಯಿಯು ಸಹಾಯ ಮತ್ತು ಪ್ರಯೋಜನ ದೊರೆಯಲಿದೆ. ಆಸ್ತಿ ಸಂಬಂಧಿತ ವಿಚಾರಗಳ ವ್ಯವಹಾರದಲ್ಲಿ ವಿಶೇಷ ಎಚ್ಚರಿಕೆಯ ಅಗತ್ಯವಿದೆ. ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ಉತ್ಕೃಷ್ಟ ನಿರ್ವಹಣೆ ಮಾಡುತ್ತಾರೆ. ನಿಷ್ಠುರತೆ ಮತ್ತು ಅಸಹನೆಯು ನಿಮ್ಮ ದಿನವನ್ನು ಹಾಳುಮಾಡಲಿದೆ. ಎಚ್ಚರಿಕೆಯಿಂದಿರಿ.

ಮೀನ
ಗುರುವಾರ, 10 ಜೂನ್
ಇಂದು ದೈವಾನುಗ್ರಹವು ನಿಮ್ಮತ್ತ ನಗು ಬೀರುತ್ತಿದೆ. ಸಂತಸ, ಯಶಸ್ಸು, ಆರೋಗ್ಯ, ಸಂಪತ್ತು ಮತ್ತು ಹೇರಳ ಸೃಜನಶೀಲತೆ ಮತ್ತು ಧನಾತ್ಮಕತೆಯನ್ನು ಎದುರುನೋಡಬಹುದು. ದಾಂಪತ್ಯ ಜೀವನವು ಸಾಮರಸ್ಯ ಮತ್ತು ಸಂತಸದಿಂದ ಕೂಡಿರುತ್ತದೆ.ಸ್ನೇಹಿತರೊಂದಿಗೆ ಸಣ್ಣ ಸಂತೋಷಕರ ಪ್ರವಾಸ ಹಾಗೂ ಖುಷಿ ತುಂಬಿದ ವಿಹಾರಕ್ಕೆ ತೆರಳುವ ಸಾಧ್ಯತೆಯಿದೆ. ನಿಮ್ಮ ಘನತೆ ಮತ್ತು ಜನಪ್ರಿಯತೆಯು ಹೆಚ್ಚುವ ಭರವಸೆಯಿದೆ. ನಿಮ್ಮ ಸ್ಪರ್ಧಿಗಳು ಮತ್ತು ವೈರಿಗಳು ನಿಮ್ಮಿಂದ ದೂರ ಉಳಿಯಬಹುದು. ಯಶಸ್ಸು ಖಚಿತವಾಗಿದೆ.
ಸುದ್ದಿಗಾಗಿ, ಜಾಯಿರಾತಿಗಾಗಿ 👉  ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020

Leave a Reply

Your email address will not be published.