ನಿತ್ಯವಾಣಿ ಸೋಮವಾರದ ರಾಶಿ ಭವಿಷ್ಯ🙏🙏
ಮೇಷ
ಸೋಮವಾರ, 14 ಜೂನ್
ದಿನ ಪೂರ್ತಿಯ ಕೊರಗು ಹಾಗೂ ತೊಂದರೆಗಳಿಗೆ ಸಿದ್ಧರಾಗಿರುವಂತೆ,ನೀವು ಭಾವೇವೇಶಕ್ಕೆ ಒಳಗಾಗಿ ಅನುಚಿತ ಮಾತುಗಳನ್ನು ಆಡಿ ನಂತರ ಪಶ್ಚಾತ್ತಾಪಕ್ಕೆ ಒಳಪಡುವಿರಿ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಆಸ್ತಿ ಸಂಬಂಧಿ ಮಾತುಕತೆಗಳಲ್ಲಿ ಅಥವಾ ವಾಗ್ವಾದಗಳಲ್ಲಿ ಪ್ರವೇಶಿಸಬೇಡಿ. ಎಚ್ಚರಿಕೆಯಿಂದ ಮುನ್ನಡೆಯಿರಿ. ಜಲಜಂತುಗಳಿಂದ ದೂರವಿರಿ. ವಿದ್ಯಾರ್ಥಿಗಳಿಗೆ ಮತ್ತು ಪಂಡಿತರಿಗೆ ಈ ದಿನವು ಇತರ ದಿನದಂತೆ ಸಾಮಾನ್ಯವಾಗಿರುತ್ತದೆ.
ವೃಷಭ
ಸೋಮವಾರ, 14 ಜೂನ್
ಈ ದಿನವು ನಿಮ್ಮನ್ನು ಆರೋಗ್ಯಕರವಾಗಿಸುತ್ತದೆ ಮತ್ತು ಅತ್ಯಂತ ಹುರುಪು,ಉತ್ಸಾಹ ಹಾಗೂ ಹುಮ್ಮಸ್ಸಿನಿಂದ ಕೂಡಿರುತ್ತೀರಿ,ನೀವು ಅತಿ ಭಾವುಕತೆಗೆ ಒಳಗಾಗುತ್ತೀರಿ. ಕಾಲ್ಪನಿಕ ಹಾಗೂ ಸೃಜನಶೀಲರಾಗಿರುತ್ತೀರಿ ಮತ್ತು ನಿಮ್ಮದೇ ಹರ್ಷಲೋಕದಲ್ಲಿ ತೇಲುತ್ತಿರುತ್ತೀರಿ.ನೀವು ನಿಮ್ಮ ಕುಟುಂಬದೆಡೆಗೆ ಹೆಚ್ಚು ಆಕರ್ಷಿತರಾಗುತ್ತೀರಿ ಮತ್ತು ಕುಟುಂಬ ಸದಸ್ಯರೊಂದಿಗಿರುವುದಕ್ಕೆ ಹರ್ಷಗೊಳ್ಳುತ್ತೀರಿ.ಹಣಕಾಸು ವಿಚಾರಗಳು ಕೇಂದ್ರಬಿಂದುವಾಗುವ ಸಾಧ್ಯತೆಯಿದೆ. ಅತ್ಯುತ್ತಮ ಆಹಾರ ದೊರೆಯಲಿದೆ.
ಮಿಥುನ
ಸೋಮವಾರ, 14 ಜೂನ್
ಸಮಯಕ್ಕೆ ಸರಿಯಾಗಿ ನೀವು ಕಾರ್ಯವನ್ನು ಪೂರ್ಣಗೊಳಿಸದ ಕಾರಣ ನಿಮ್ಮ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ ಅಥವಾ ಮುಂದೂಡಲ್ಪಡುತ್ತವೆ. ಏನೇ ಆದರೂ, ಹೆಚ್ಚು ಪ್ರಯತ್ನಿಸಿ, ಮತ್ತು ನೀವು ಯೋಜಿಸಿದಂತೆಯೇ ಅಂತಿಮವಾಗಿ ಕಾರ್ಯವನ್ನು ಪೂರ್ಣಗೊಳಿಸುತ್ತೀರಿ. ನಿಮ್ಮ ಹಣಕಾಸು ವ್ಯವಹಾರಗಳಲ್ಲಿ ಅಡೆತಡೆಗಳು ಉಂಟಾಗಲಿವೆ ಆದರೆ, ನಿಮ್ಮ ಯೋಜನೆಗಳು ಮತ್ತೊಮ್ಮೆ ಸಲೀಸಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.ಕಾರ್ಯಕ್ಕೆ ಸಂಬಂಧಿಸಿ ಇಂದಿನ ದಿನವು ಇತರ ದಿನಗಳಂತೇ ಇರುತ್ತದೆ. ಸಹೋದ್ಯೋಗಿಗಳು ಮತ್ತು ಜತೆಕೆಲಸಗಾರರು ನಿಮ್ಮೊಂದಿಗೆ ಸಾಮಾನ್ಯವಾಗಿಯೇ ವರ್ತಿಸುತ್ತಾರೆ. ಸ್ನೇಹಿತರ ಮತ್ತು ಹಿತೈಶಿಗಳೊಂದಿಗಿನ ಸಾಂಗತ್ಯವು ನಿಮಗೆ ಸಂತೋಷ ನೀಡುತ್ತದೆ.
ಕರ್ಕಾಟಕ
ಸೋಮವಾರ, 14 ಜೂನ್
ನೀವು ನಿಮ್ಮ ಸ್ನೇಹಿತರು ಮತ್ತು ಜೊತೆಗಾರರೊಂದಿಗೆ ಅತ್ಯಂತ ಖುಷಿ, ನಲಿವು ಮತ್ತು ಸಂತೋಷದಿಂದ ಇಂದಿನ ದಿನವನ್ನು ಕಳೆಯುತ್ತೀರಿ,ನೀವು ಪ್ರಯಾಣ ತೆರಳಬಹುದು.ಸ್ವಾದಿಷ್ಟ ಆಹಾರ ಮತ್ತು ಐಸ್‌ಕ್ರೀಂ ಮುಂತಾದವುಗಳನ್ನು ನಿರೀಕ್ಷಿಸಬಹುದು. ನೀವು ಇಂದು ಹೆಚ್ಚು ಭಾವುಕರಾಗುತ್ತೀರಿ ಮತ್ತು ಹೆಚ್ಚು ಸೂಕ್ಷ್ಮಗ್ರಾಹಿಯಾಗಿರುತ್ತೀರಿ.ಧನಲಾಭದ ಯೋಗವಿದೆ.
ಸಿಂಹ
ಸೋಮವಾರ, 14 ಜೂನ್
ಇಂದು ನೀವು ಅತಿರೇಕದ ಭಾವನೆಯನ್ನು ಹೊಂದಿರುತ್ತೀರಿ ಮತ್ತು ಇದರಿಂದಾಗಿ ಮಾನಸಿಕವಾಗಿ ಪ್ರಕ್ಷುಬ್ದ ಹಾಗೂ ಅನಿಶ್ಚಿತತೆಯಿಂದ ಕೂಡಿರುತ್ತೀರಿ. ಹುಡುಗಿಯರೊಂದಿಗಿನ ವ್ಯವಹಾರವನ್ನು ಜಾಣ್ಮೆಯಿಂದ ನಿರ್ವಹಿಸುವಂತೆ,ಯಾರಿಗೇ ಆಗಲೀ, ಯಾವುದೇ ರೀತಿಯಲ್ಲೂ ಯಾರ ಪರವಾಗಿಯೂ ನೀವು ಕೆಲಸ ಮಾಡಬೇಡಿ ಅಥವಾ ಇನ್ನೊಬ್ಬರ ಹತ್ತಿರ ಒಬ್ಬರ ಬಗ್ಗೆ ನಂಬಿಕೆ ವ್ಯಕ್ತಪಡಿಸಬೇಡಿ.ಚರ್ಚೆ ಮತ್ತು ವಾಗ್ವಾದಗಳಿಂದ ದೂರ ಉಳಿಯಿರಿ. ಕಾನೂನಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಎಚ್ಚರಿಕೆ ವಹಿಸುವ ಅಗತ್ಯವಿದೆ. ವಿವೇಚನೆ ಮತ್ತು ನಿಷ್ಪಕ್ಷಪಾತರಾಗಿರಲು ಪ್ರಯತ್ನಿಸಿ. ಖರ್ಚುವೆಚ್ಚಗಳು ಮಿತಿಮೀರುವ ಸಾಧ್ಯತೆಯಿದೆ.
ಕನ್ಯಾ
ಸೋಮವಾರ, 14 ಜೂನ್
ಈ ದಿನ ಪೂರ್ತಿ ನೀವು ಸಂತೋಷದಿಂದ ಮತ್ತು ಸಮಾಧಾನದಿಂದಿರುತ್ತೀರಿ,ಎಲ್ಲಾ ಕಡೆಗಳಿಂದಲೂ ಲಾಭ ಉಂಟಾಗಬಹುದು. ಸ್ನೇಹಿತೆಯರು ಅದರಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಸ್ನೇಹಿತರೊಂದಿಗೆ ಸುಂದರ ತಾಣಗಳಿಗೆ ತೆರಳಿ ಮಜಾ ಮಾಡುತ್ತೀರಿ. ನಿಮ್ಮ ಮಕ್ಕಳೊಂದಿಗೆ ಹರ್ಷಪೂರಿತ ಸಂಭಾಷಣೆಯಲ್ಲಿ ತೊಡಗುತ್ತೀರಿ
ತುಲಾ
ಸೋಮವಾರ, 14 ಜೂನ್
ಇಂದು ನಿಮಗೆ ಅತ್ಯಂತ ಶುಭಶಕುನದ ದಿನವಾಗಿರುತ್ತದೆ, ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರಗಳು ಉತ್ತಮ ಹಾಗೂ ಅನುಕೂಲಕರ ರೀತಿಯಲ್ಲಿರುವ ನಿರೀಕ್ಷೆ ಇದೆ. ಮೇಲಾಧಿಕಾರಿಗಳೊಂದಿಗೆ ಮತ್ತು ವರಿಷ್ಠರೊಂದಿಗೆ ನಿರ್ಣಾಯಕ ಮತ್ತು ಪ್ರಮುಖ ಸಭೆಯೊಂದರಲ್ಲಿ ಭಾಗವಹಿಸಲಿದ್ದೀರಿ. ಬಡ್ತಿ ಸಿಗುವ ಬಲವಾದ ಸಂಭಾವ್ಯತೆಗಳಿವೆ. ಮನೆಯ ವಾತಾವರಣವು ಶಾಂತಿ ಹಾಗೂ ಸಾಮರಸ್ಯದಿಂದ ಕೂಡಿರುತ್ತದೆ.ನಿಮ್ಮ ತಾಯಿಯು ನಿಮ್ಮಿಂದ ಲಾಭ ಅಥವಾ ಸಹಾಯ ಕೇಳಬಹುದು. ವ್ಯವಹಾರ ನಿಮಿತ್ತ ಕೈಗೊಂಡ ಕಾರ್ಯಗಳು ನಿಮಗೆ ಲಾಭದಾಯಕವೆನಿಸುತ್ತದೆ.
ವೃಶ್ಚಿಕ
ಸೋಮವಾರ, 14 ಜೂನ್
ನಿಮ್ಮ ಕಾರ್ಯಸ್ಥಳದಲ್ಲಿ ನೀವು ಹೆಚ್ಚು ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಇರುವ ಅಗತ್ಯವಿದೆ, ನಿಮ್ಮ ಮೇಲಾಧಿಕಾರಿಗಳು ಅಸಡ್ಡೆ ಮತ್ತು ಸಂಧಿಗ್ಥತೆಯಲ್ಲಿರುವ ಸಾಧ್ಯತೆಯಿದೆ. ಅದರಿಂದಾಗಿ ನಿಮಗೆ ನಿರುತ್ಸಾಹ ಹಾಗೂ ಹತಾಶೆ ಉಂಟಾಗಬಹುದು. ಅಲ್ಲದೆ, ನೀವು ಆಲಸ್ಯ ಹಾಗೂ ಉತ್ಸಾಹರಹಿತ ಭಾವನೆ ಉಂಟಾಗಬಹುದು. ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳಲು ಇಂದು ಉತ್ತಮ ದಿನವಲ್ಲ. ಅನಿರೀಕ್ಷಿತ ಖರ್ಚುವೆಚ್ಚಗಳಿಗೆ ಸಿದ್ಧರಾಗಿರಿ.ನೀವು ಸಣ್ಣ ಪ್ರವಾಸ ತೆರಳಲು ಒಲವು ತೋರಬಹುದು.
ಧನು
ಸೋಮವಾರ, 14 ಜೂನ್
ಹೊಸ ಯೋಜನೆ ಹಾಗೂ ಕಾರ್ಯ ಪ್ರಾರಂಭಕ್ಕೆ ಈ ದಿನ ಸಕಾಲವಲ್ಲ, ಹೊಸ ಆರೋಗ್ಯ ಚಿಕಿತ್ಸೆಯನ್ನು ಇಂದು ಪ್ರಾರಂಭಿಸಲೇಬೇಡಿ. ನೀವು ಮಾತು ಹಾಗು ವರ್ತನೆಯ ಬಗ್ಗೆ ಎಚ್ಚರವಹಿಸಿ. ಅತಿ ಸೂಕ್ಷ್ಮತೆಯು ನಿಮಗೆ ತೊಂದರೆಯಾಗುವುದನ್ನು ಸಾಬೀತುಪಡಿಸಬಹುದು. ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಖರ್ಚುವೆಚ್ಚಗಳು ಹತೋಟಿ ತಪ್ಪುವ ಸಾಧ್ಯತೆಯಿದೆ. ಅಕ್ರಮ ಸಂಬಂಧ ಅಥವಾ ಅನೈತಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಡಿ. ಪ್ರಾರ್ಥನೆ ಮತ್ತು ಧ್ಯಾನದಿಂದ ನಿಮಗೆ ಸಹಾಯವಾಗಲಿದೆ.
ಮಕರ
ಸೋಮವಾರ, 14 ಜೂನ್
ಈ ದಿನವು ನಿಮಗೆ ಖಂಡಿತವಾಗಿಯೂ ಆಶಾದಾಯಕ ದಿನವಾಗಲಿದೆ,ವ್ಯವಹಾರ ವೃದ್ಧಿಪಡಿಸುವ ಎಲ್ಲಾ ಸಂಭಾವ್ಯತೆಗಳಿವೆ. ಕಮಿಶನ್, ಬಡ್ಡಿದರ, ವ್ಯಾಪಾರ ಮುಂತಾದವುಗಳಿಂದ ಆದಾಯ ಹೆಚ್ಚಳಗೊಳ್ಳುವ ನಿಶ್ಚಿತ ಸಾಧ್ಯತೆಯಿದೆ. ವಿಶ್ವಾಸಾರ್ಹ ಹಣಕಾಸು ಭದ್ರತೆ ಸಿಗುವ ಸಂಭವವಿದೆ. ಸಾಮಾಜಿಕ ಹಾಗೂ ವೃತ್ತಿಪರ ವ್ಯಕ್ತಿತ್ವದಲ್ಲಿ ಗುರುತರ ಅಭಿವೃದ್ಧಿ ಉಂಟಾಗಬಹುದು. ಸಣ್ಣ ಪ್ರವಾಸದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಕುಂಭ
ಸೋಮವಾರ, 14 ಜೂನ್
ಇಂದು ನೀವು ಅತ್ಯಂತ ಖುಷಿಯಲ್ಲಿರುತ್ತೀರಿ,ನೀವು ನಿಮ್ಮ ಕಾರ್ಯದಲ್ಲಿ ಅಸಾಧಾರಣ ನಿರ್ವಹಣೆಯನ್ನು ಮಾಡುತ್ತೀರಿ. ಪ್ರಶಂಸೆಯನ್ನು ನೀವು ಎದುರುನೋಡಲೇ ಬೇಕು. ಉದ್ಯಮ ಪಾಲುದಾರರು ಮತ್ತು ಸಹೋದ್ಯೋಗಿಗಳು ನಿಮಗೆ ಸಹಕಾರ ನೀಡುತ್ತಾರೆ ಮತ್ತು ಸ್ನೇಹಪೂರ್ಣವಾಗಿರುತ್ತಾರೆ. ಕುಟುಂಬ ಸದಸ್ಯರ ಜೊತೆ ಕಳೆದ ಕ್ಷಣಗಳು ತುಂಬಾ ಖುಷಿ ಮತ್ತು ಅರ್ಥಪೂರ್ಣವಾಗಿರುತ್ತದೆ ನೀವು ಮುಂಜಾನೆಯಿಂದ ಸಂಜೆಯವರೆಗೆ ತಾಜಾ ಹಾಗೂ ಲವಲವಿಕೆಯಿಂದಿರುತ್ತೀರಿ.
ಮೀನ
ಸೋಮವಾರ, 14 ಜೂನ್
ಇಂದು ನೀವು ಅದ್ಭುತ ಸೃಜನಶೀಲರಾಗಿರುವ ನಿರೀಕ್ಷೆ ಇದೆ, ವಿದ್ಯಾರ್ಥಿಗಳು ಮತ್ತು ವಿಧ್ವಾಂಸರಿಗೆ ಇಂದು ಉತ್ತಮ ದಿನವಾಗಿದೆ. ನೀವು ನಿಮ್ಮದೇ ಭಾವನಾಲೋಕದಲ್ಲಿ ವಿಹಿರಿಸುತ್ತಿರುವ ಸಾಧ್ಯತೆಯಿದೆ.ಇಂದು ನೀವು ವಿಶೇಷವಾಗಿ ವಿಚಾರಪರ ಹಾಗೂ ಭಾವನಾತ್ಮಕವಾಗಿರುತ್ತೀರಿ.
ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com