ನಿತ್ಯವಾಣಿ ಶುಕ್ರವಾರದ ರಾಶಿ ಭವಿಷ್ಯ🙏🙏

ನಿತ್ಯವಾಣಿ ಶುಕ್ರವಾರದ ರಾಶಿ ಭವಿಷ್ಯ🙏🙏

ಮೇಷ
ಶುಕ್ರವಾರ, 18 ಜೂನ್
ಇಂದು ಖುಷಿಭರಿತ ದಿನವು ನಿಮ್ಮದಾಗಲಿದೆ,ನಿಮಗೆ ಲಕ್ಷ್ಮೀದೇವಿಯ ಅನುಗ್ರಹವಾದರೆ ಹಣಕಾಸು ಯೋಜನೆಗಳಲ್ಲಿ ನಿಮಗೆ ಉತ್ತಮ ಲಾಭ ಬರಲಿದೆ. ಹಣಕಾಸು ವಿಚಾರಗಳಿಗೆ ಸಂಬಂಧಿಸಿ ವಿಚಾರಗೋಷ್ಠಿಗಳಲ್ಲಿ ಭಾಗವಹಿಸುವ ಅಥವಾ ಅವುಗಳನ್ನು ಸಂಘಟಿಸುವ ಸಾಧ್ಯತೆಯಿದೆ. ಇದರಿಂದಾಗಿ ನೀವು ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಮತ್ತು ಹೊರಗಿನ ಅನೇಕ ಜನರನ್ನು ಭೇಟಿ ಮಾಡುವ ಸಂಭವವಿದೆ. ಹೆಚ್ಚು ಬುದ್ಧಿ ಉಪಯೋಗಿಸಿ ಮಾಡುವಂತಹ ಯೋಜನೆಗಳ ಕಾರ್ಯವನ್ನು ನೀವು ಆನಂದಿಸುವಿರಿ. ಸಣ್ಣ ಪ್ರವಾಸ ತೆರಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕಠಿಣ ಶ್ರಮಪಡಲು ಇದು ಉತ್ತಮ ದಿನ. ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಯಾವುದೇ ತೊಂದರೆಯಿರುವುದಿಲ್ಲ.

ವೃಷಭ
ಶುಕ್ರವಾರ, 18 ಜೂನ್
ನಿಮ್ಮ ಮೃದು ಮಾತಿನಿಂದ ಮತ್ತು ನಿಷ್ಪಕ್ಷಪಾತ ಸ್ವಭಾವದಿಂದ ಇಂದು ಎಲ್ಲರ ಮನಸ್ಸನ್ನು ಗೆಲ್ಲುತ್ತೀರಿ. ಇದು ನಿಮ್ಮ ಸುತ್ತಲಿರುವ ಎಲ್ಲರೊಂದಿಗೆ ಸೌಹಾರ್ದಯುತ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ. ಸಮಾಲೋಚನೆ ಮತ್ತು ಇತರ ಗುಂಪುಚರ್ಚೆಗಳಲ್ಲಿ ನೀವು ಉತ್ತಮ ರೀತಿಯ ನಿರ್ವಹಣೆಯನ್ನು ಮಾಡುತ್ತೀರಿ. ನಿಮ್ಮ ಕ್ಷೇತ್ರದಲ್ಲಿ ಅಪೇಕ್ಷಿತ ಫಲಿತಾಂಶವನ್ನು ಪಡೆಯಲು ನಿಮಗೆ ಸಾಧ್ಯವಾಗದೇ ಇರಬಹುದು ಆದರೆ ನೀವು ಖಂಡಿತವಾಗಿಯೂ ಗಣನೀಯ ಅಭಿವೃದ್ಧಿಯನ್ನು ಸಾಧಿಸುವಿರಿ. ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂಬುದಾಗಿ ಗಣೇಶ ಹೇಳುತ್ತಾರೆ. ಮನೆಯಲ್ಲೇ ತಯಾರಿಸಿದ ಆಹಾರವನ್ನು ತಿನ್ನುವಂತೆ,ಇದು ನಿಮ್ಮನ್ನು ಆರೋಗ್ಯರನ್ನಾಗಿಸುತ್ತದೆ ಮತ್ತು ನಿಮ್ಮ ಕೆಲಸದ ಕಡೆ ಗಮನ ನೀಡಲು ಸಹಾಯ ಮಾಡುತ್ತದೆ..

ಮಿಥುನ
ಶುಕ್ರವಾರ, 18 ಜೂನ್
ಇಂದು ನಿಮ್ಮ ಮನಸ್ಸು ಗೊಂದಲ ಹಾಗೂ ಅಸ್ಥಿರತೆಯಿಂದ ತುಂಬಿರುತ್ತದೆ,ಇದರ ಜೊತೆಗೆ ಅಧಿಕ ಉದ್ವೇಗವು ನಿಮ್ಮನ್ನು ಮಾನಸಿಕವಾಗಿ ತುಮುಲದಲ್ಲಿರಿಸುತ್ತದೆ. ನಿಮ್ಮ ತಾಯಿಯ ಕುರಿತಾಗಿ ನೀವು ಹೆಚ್ಚು ಭಾವುಕರಾಗಬಹುದು. ಬೌದ್ಧಿಕ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು ಆದರೆ, ಸಂಘರ್ಷವನ್ನು ತಪ್ಪಿಸಿ ಮತ್ತು ಇದನ್ನು ಒಂದು ಚಿಂತನೆಗಳ ಆರೋಗ್ಯಕರ ವಿನಿಮಯ ಎಂಬುದಾಗಿ ತಿಳಿದುಕೊಳ್ಳಿ. ಕುಟುಂಬ ಮತ್ತು ಚರ ಆಸ್ತಿಗಳಿಗೆ ಸಂಬಂಧಿಸಿದ ಚರ್ಚೆಗಳಿಂದ ದೂರವಿರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಣ್ಣ ಜಗಳವನ್ನು ನಿರೀಕ್ಷಿಸಬಹುದು. ಪ್ರಯಾಣಕ್ಕೆ ಈ ದಿನ ಸೂಕ್ತವಲ್ಲ.

ಕರ್ಕಾಟಕ
ಶುಕ್ರವಾರ, 18 ಜೂನ್
ಇಂದು ನಿಮಗೆ ನಿಮ್ಮ ಸಹೋದರರಿಂದ ಲಾಭ ಉಂಟಾಗಬಹುದು. ನಿಮ್ಮ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶದಿಂದ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಅನ್ಯೋನ್ಯವಾಗಿರುವುದರಿಂದ ನಿಮಗೆ ಪ್ರಯೋಜನಗಳುಂಟಾಗುವ ಸಾಧ್ಯತೆಯಿದೆ. ನೀವು ಸುಂದರ ತಾಣಗಳಿಗೆ ಭೇಟಿ ನೀಡಬಹುದು. ಇಂದಿನ ಎಲ್ಲಾ ಕಾರ್ಯಗಳಲ್ಲಿ ನೀವು ಯಶಸ್ಸನ್ನು ಸಾಧಿಸುತ್ತೀರಿ, ನಿಮ್ಮ ದ್ವೇಷಿಗಳು ಮತ್ತು ಪ್ರತಿಸ್ಪರ್ಧಿಗಳು ನಿಮ್ಮನ್ನು ಹತೋಟಿಯಲ್ಲಿಡುವಲ್ಲಿ ವಿಫಲರಾಗುತ್ತಾರೆ. ನಿಮ್ಮ ಭಾವನಾತ್ಮಕತೆಯು ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಆಗುಹೋಗುಗಳಿಂದ ನಿಮ್ಮ ವರ್ಧಿಸಿದ ಉತ್ತಮ ದಿನಗಳ ಫಲಿತಾಂಶವು ನಿಮಗೆ ತಿಳಿಯುವುದು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನೀವು ಗೌರವ ಸಂಪಾದಿಸುವಿರಿ.

ಸಿಂಹ
ಶುಕ್ರವಾರ, 18 ಜೂನ್
ಇಂದು ನೀವು ನಿರ್ವಹಿಸಬೇಕಾದ ಎಲ್ಲರದ ಬಗ್ಗೆ ಚಿಂತಿಸಿ ನೀವು ಕಂಗಾಲಾಗಿರುವಂತೆ ಅನಿಸಬಹುದು. ಏನೇ ಆದರೂ, ಕುಟುಂಬದ ಬೆಂಬಲವು ನಿಮ್ಮಲ್ಲಿ ಸಂತೋಷವನ್ನು ಉಂಟುಮಾಡುತ್ತದೆ ಮತ್ತು ಎಲ್ಲವೂ ಸುಸೂತ್ರವಾಗಿ ನಡೆಯಲು ನೆರವಾಗುತ್ತದೆ. ತುಂಬಾ ದೂರದಲ್ಲಿ ಕಂಪನಿ ಅಥವಾ ವ್ಯಕ್ತಿಯೊಂದಿಗೆ ನಿಮ್ಮ ಸಂಬಂಧವು ವೃದ್ಧಿಗೊಳ್ಳುವುದನ್ನು ಕಾಣಬಹುದು. ಇದು ನಿಮಗೆ ದೀರ್ಘ ಸಮಯದವರೆಗೆ ಲಾಭ ಉಂಟುಮಾಡಲಿದೆ,ನಿಮ್ಮ ಕಠಿಣ ಪರಿಶ್ರಮದಿಂದ ಅಪೇಕ್ಷಿತ ಫಲಿತಾಂಶವನ್ನು ಪಡೆಯಲಾರಿರಿ. ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ.

ಕನ್ಯಾ
ಶುಕ್ರವಾರ, 18 ಜೂನ್
ಇಂದು ನಿಮಗೆ ಉತ್ತಮ ದಿನ, ನೀವು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೊಂದುತ್ತೀರಿ. ಧನಲಕ್ಷ್ಮಿಯು ನಿಮ್ಮ ಮೇಲೆ ಅನುಗ್ರಹ ತೋರುತ್ತಾರೆ ಮತ್ತು ನಿಮಗೆ ಆರ್ಥಿಕವಾಗಿ ತೃಪ್ತಿ ಉಂಟಾಗಲಿದೆ. ನೀವು ನಿಮ್ಮ ಸ್ನೇಹಿತರೊಂದಿಗೆ ಅಥವಾ ಪ್ರೀತಿಪಾತ್ರರೊಂದಿಗೆ ನಿಮ್ಮ ದಿನವನ್ನು ವಿಶೇಷವಾಗಿ ಕಳೆಯಲಿದ್ದೀರಿ. ಯಾವುದೇ ರೀತಿಯ ಪ್ರಯಾಣವು ಉತ್ತಮ.

ತುಲಾ
ಶುಕ್ರವಾರ, 18 ಜೂನ್
ನಿಮ್ಮ ಸಿಟ್ಟಿನ ಮೇಲೆ ನಿಯಂತ್ರಣವಿರಲಿ. ಸಾಧ್ಯವಿದ್ದರೆ ಯಾವುದೇ ರೀತಿ ವಾಗ್ವಾದಗಳಿಂದ ಅನಗತ್ಯ ಚರ್ಚೆಗಳಿಂದ ದೂರವಿರಿ.ಕುಟುಂಬದಲ್ಲಿ ಯಾರೊಬ್ಬರೊಂದಿಗಾದರೂ ನೀವು ವ್ಯಾಜ್ಯಕ್ಕೆ ಒಳಗಾಗಬಹುದು. ನೀವು ಕೆಲವು ದೈಹಿಕ ತೊಂದರೆಗಳನ್ನು ಅನುಭವಿಸಬಹುದು. ವಿಶೇಷವಾಗಿ ಅಪಾಯಕ್ಕೆ ಸಿಲುಕಬಹುದು, ನೀವು ಅಪಘಾತ ಸಂಭಾವ್ಯತೆಯನ್ನು ಹೊಂದಿದ್ದೀರಿ. ನ್ಯಾಯಾಲಯ ಮತ್ತು ಕಾನೂನು ಸಂಬಂಧಿ ಕಾರ್ಯಗಳನ್ನು ನಿಭಾಯಿಸುವಾಗ ಎಚ್ಚರವಹಿಸಿ.ಆತ್ಮಗೌರವದ ಕಾರಣದಿಂದಾಗಿ ನಿಮಗೆ ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳು ನಿಮ್ಮನ್ನು ಕಠಿಣ ಸಮಯದಿಂದ ಪಾರುಮಾಡಲು ನೆರವಾಗಬಹುದು.

ವೃಶ್ಚಿಕ
ಶುಕ್ರವಾರ, 18 ಜೂನ್
ಲಾಭದಾಯಕ ದಿನವು ನಿಮಗಾಗಿ ಕಾದಿದೆ. ನೀವು ನಿರೀಕ್ಷಿಸುತ್ತಿದ್ದ ಎಲ್ಲಾ ಪ್ರಾಪಂಚಿಕ ಸಂತೋಷಗಳು ನಿಮಗೆ ಸಿಗಲಿವೆ, ವಿವಾಹದ ಯೋಜನೆ ನಡೆಸುತ್ತಿರುವವರಿಗೆ ಇದು ಸಕಾಲ. ಆರ್ಥಿಕವಾಗಿ, ಉದ್ಯಮಿಗಳಿಗೆ ಅಧಿಕ ಲಾಭ ಉಂಟಾಗಲಿದೆ. ನೀವು ವೃತ್ತಿಪರರಾಗಿದ್ದಲ್ಲಿ ನಿಮ್ಮ ಮೇಲಾಧಿಕಾರಿಗಳು ನಿಮ್ಮ ನಿರ್ವಹಣೆಯ ಬಗ್ಗೆ ಸಂತಸಪಡುತ್ತಾರೆ. ನಿಮ್ಮ ಸ್ನೇಹಿತರನ್ನು ಭೇಟಿಮಾಡುವಿರಿ ಮತ್ತು ಅತ್ಯಂತ ಸುಂದರ ಪ್ರದೇಶಗಳಿಗೆ ತೆರಳುವಿರಿ.

ಧನು
ಶುಕ್ರವಾರ, 18 ಜೂನ್
ಧನು ರಾಶಿಯವರಿಗೆ ಇಂದು ಅದೃಷ್ಟಕಾರಿ ದಿನ, ಇಂದು ನೀವು ನಿಮ್ಮ ಹಣಕಾಸನ್ನು ಉತ್ತಮ ರೀತಿಯಲ್ಲೇ ನಿರ್ವಹಿಸುತ್ತೀರಿ. ನಿಮ್ಮ ಕೆಲಸವನ್ನು ಇಂದು ನೀವು ಯಶಸ್ವಿಯಾಗಿ ಪೂರೈಸುವಿರಿ ಮತ್ತು ಇತರರಿಗೆ ಸಂತೋಷದಿಂದಲೇ ಕೆಲಸದಲ್ಲಿ ಸಹಕರಿಸುವಿರಿ. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ನಿರ್ಧಾರಗಳನ್ನು ಇಂದು ಕೈಗೊಳ್ಳಬಹುದು. ವ್ಯವಹಾರ ಸಂಬಂಧ ಪ್ರಯಾಣ ಸಂಭವವಿದೆ. ನಿಮ್ಮ ಪ್ರತಿಭೆಯಿಂದ ನಿಮ್ಮ ಮೇಲಾಧಿಕಾರಿಗಳ ಮನಗೆಲ್ಲುವಿರಿ ಮತ್ತು ಇದರಿಂದಾಗಿ ಬಡ್ತಿಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ನಿಮ್ಮ ತಂದೆಯಿಂದ ಅಥವಾ ಮನೆಯಲ್ಲಿನ ಹಿರಿಯರಿಂದ ನಿಮಗೆ ಪ್ರಯೋಜನ ಉಂಟಾಗಲಿದೆ.

ಮಕರ
ಶುಕ್ರವಾರ, 18 ಜೂನ್
ಇಂದು ಇನ್ನೊಂದು ರೀತಿಯ ಆರಾಮದಾಯಕ ದಿನವಾಗಲಿದೆ, ಬುದ್ಧಿಶಕ್ತಿಯ ಬಳಸಿ ಮಾಡಬೇಕಾದ ಕಾರ್ಯಗಳಿಗೆ ಸಂಬಂಧಿಸಿ ನಿಮ್ಮನ್ನು ತೊಡಗಿಸಿಕೊಳ್ಳಲು ಇದು ಸಕಾಲವೆನಿಸುತ್ತದೆ. ಬರಹ ಮತ್ತು ಸಾಹಿತ್ಯದಲ್ಲಿ ತೊಡಗಿರುವವರಿಗೆ ಇಂದು ಉತ್ತಮ ದಿನ. ಸರಕಾರಿ ಸಂಬಂಧಿತ ವಿಚಾರಗಳಲ್ಲಿ ಉಂಟಾಗುವ ಅಹಿತಕರ ಸಂದರ್ಭಗಳ ವಿರುದ್ಧ ನೀವು ಸೆಣಸಾಡಬೇಕಾಗಬಹುದು. ದಿನದಂತ್ಯದಲ್ಲಿ ನೀವು ಪ್ರಯಾಸಗೊಂಡಿರುವಂತೆ ನಿಮಗೆ ಭಾಸವಾಗಬಹುದು. ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನೀವು ತೀವ್ರವಾಗಿ ಬಳಲುವಿರಿ.

ಕುಂಭ
ಶುಕ್ರವಾರ, 18 ಜೂನ್
ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ವಿರುದ್ಧ ಕಾನೂನುಬಾಹಿರ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಸ್ವೀಕಾರ್ಹವಲ್ಲದಿದ್ದರೂ, ಇಂದು ನೀವು ಕಾನೂನು ಕ್ರಿಯೆಗಳಿಗೆ ಒಳಗಾಗುವಿರಿ. ಋಣಾತ್ಮಕ ಆಲೋಚನೆಗಳು ಮಾನಸಿಕವಾಗಿ ಕಿರಿಕಿರಿಯನ್ನುಂಟುಮಾಡಲಿವೆ. ನಿಮ್ಮ ಸಿಡುಕನ್ನು ನಿಯಂತ್ರಿಸಲಾಗದ ನಿಮ್ಮ ಅಶಕ್ತತೆಯೊಂದೇ ಇಂದಿನ ಚಿಂತೆಗೆ ಕಾರಣವಾಗಲಿದೆ. ಆದ್ಯಾತ್ಮದೆಡೆಗಿನ ಒಲವು ನೈತಿಕ ಮತ್ತು ಉತ್ತಮ ಅದೃಷ್ಟದೆಡೆಗಿನ ಹಾದಿಯನ್ನು ಕಾಣಲು ಸಹಾಯ ಮಾಡುತ್ತದೆ.

ಮೀನ
ಶುಕ್ರವಾರ, 18 ಜೂನ್
ಇಂದು ನೀವು ಕ್ರಿಯಾಶೀಲರಾಗಿರುತ್ತೀರಿ ಮತ್ತು ನಿಮ್ಮ ಜೀವನವನ್ನು ಖುಷಿ ಮತ್ತು ಸಂಭ್ರಮದಿಂದ ಗರಿಷ್ಠ ಮಟ್ಟದಲ್ಲಿ ಆನಂದಿಸುವಿರಿ. ಕಲಾವಿದರು ಮತ್ತು ಸಾಹಿತಿಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶಗಶಳನ್ನು ಪಡೆಯಲಿದ್ದಾರೆ. ಉದ್ಯಮಿಗಳು ಹೊಸ ಮತ್ತು ಅನ್ಯೋನ್ಯ ಲಾಭದಾಯಕ ಪಾಲುದಾರಿಕೆಯಲ್ಲಿ ವೇಗವಾಗಿ ಮುಂದಕ್ಕೆ ಸಾಗುತ್ತಾರೆ. ನಿಮ್ಮ ಪ್ರೇಮಜೀವನವು ಅರಳಲಿದೆ ಮತ್ತು ನಿಮ್ಮ ಸಾಮಾಜಿಕ ಜೀವನವು ಯಶಸ್ವಿಯಾಗಲಿದೆ.
ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020   www.nithyavaninews.com

Leave a Reply

Your email address will not be published.