🙏ನಿತ್ಯವಾಣಿ ಸೋಮವಾರದ ರಾಶಿ ಭವಿಷ್ಯ 🙏

🙏ನಿತ್ಯವಾಣಿ ಸೋಮವಾರದ ರಾಶಿ ಭವಿಷ್ಯ 🙏
ಮೇಷ
ಸೋಮವಾರ, 21 ಜೂನ್
ನೀವು ಸಮಾಜದಲ್ಲಿ ಗೌರವ ಪಡೆಯುವಿರಿ. ಆರ್ಥಿಕ ಲಾಭ ಉಂಟಾಗಲಿದೆ. ನಿಮ್ಮ ವೈಯಕ್ತಿಕ ಜೀವನ ಸಂತೋಷ ಮತ್ತು ಸಂತುಷ್ಟಿಯಿಂದ ಕೂಡಿರುತ್ತದೆ. ಇಂದು ನೀವು ಒಂದು ಬೌದ್ಧಿಕ ಚರ್ಚೆಯಲ್ಲಿ ಭಾಗವಹಿಸುವಿರಿ. ಆದರೆ, ನಿಮ್ಮ ಮಾತಿನ ಮೇಲೆ ಗಮನವಿಡಿ, ನಿಮ್ಮ ಮನಸ್ಸು ಆಲೋಚನೆಗಳಿಂದ ತುಂಬಿರುತ್ತದೆ ಮತ್ತು ನೀವು ಸಂತೃಪ್ತ ವರ್ತನೆಯನ್ನು ಹೊಂದಿದಲ್ಲಿ ನಿಮಗೆ ಪ್ರಯೋಜನ ಉಂಟಾಗಲಿದೆ.

ವೃಷಭ
ಸೋಮವಾರ, 21 ಜೂನ್
ನೀವು ದಿನವಿಡೀ ಸಂತೋಷದಿಂದಿರುತ್ತೀರಿ,ನೀವು ಮಾನಸಿಕವಾಗಿ ಆರೋಗ್ಯದಿಂದಿರುತ್ತೀರಿ. ನಿಮ್ಮ ಎಲ್ಲಾ ನಿಗದಿತ ಕಾರ್ಯಗಳು ಯೋಜನೆಯಂತೆಯೇ ಪೂರ್ಣಗೊಳ್ಳಲಿವೆ. ಆರ್ಥಿಕ ಲಾಭ ಉಂಟಾಗಲಿದೆ. ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ನಿಮ್ಮ ಹೆತ್ತವರಿಂದ ಶುಭಸುದ್ದಿ ಪಡೆಯುವಿರಿ. ನಿಮ್ಮ ಹೆತ್ತವರಿಂದ ಪ್ರಯೋಜನಗಳನ್ನೂ ಪಡೆಯುವಿರಿ. ಅನಾರೋಗ್ಯದಿಂದಿರುವವರು ತಮ್ಮ ವ್ಯಾಧಿಯಿಂದ ಮುಕ್ತಿ ಪಡೆಯಲಿದ್ದಾರೆ. ನಿಮ್ಮ ಸಹೋದ್ಯೋಗಿಗಳು ಸಹಕಾರದಿಂದ ಕೂಡಿರುತ್ತಾರೆ.

ಮಿಥುನ
ಸೋಮವಾರ, 21 ಜೂನ್
ನಿಮ್ಮ ಹೆಂಡತಿ ಮಕ್ಕಳ ಆರೋಗ್ಯವು ನಿಮ್ಮ ಈ ವಾರದಲ್ಲಿನ ಚಿಂತೆಗೆ ಕಾರಣವಾಗಿರಬಹುದು,ಚರ್ಚೆ ಮತ್ತು ವಾಗ್ವಾದಗಳಿಂದ ದೂರವಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಯಾರಿಗೂ ನಿಮ್ಮನ್ನು ಅವಹೇಳನ ಮಾಡಲು ಅವಕಾಶ ಮಾಡಿಕೊಡಬೇಡಿ. ನೀವು ನಿಮ್ಮ ಮಿತ್ರರಿಗಾಗಿ ವೆಚ್ಚ ಮಾಡುವಿರಿ. ಉದರ ಸಂಬಂಧಿ ರೋಗಗಳು ಕಂಡುಬರಬಹುದು. ನಿಗದಿತ ಕಾರ್ಯಗಳ ಪ್ರಾರಂಭದಲ್ಲಿ ವಿಫಲತೆ ಕಂಡುಬಂದರೂ ಬರಬಹುದು. ಆದಷ್ಟು ಮಟ್ಟಿಗೆ ಪ್ರಯಾಣವನ್ನು ತಪ್ಪಿಸಿ.

ಕರ್ಕಾಟಕ
ಸೋಮವಾರ, 21 ಜೂನ್
ಕೆಟ್ಟ ಯೋಚನೆಗಳನ್ನು ನಿಮ್ಮನ್ನು ಇಂದು ಒತ್ತಡಕ್ಕೆ ಒಳಪಡಿಸಲಿವೆ. ನಿಮ್ಮ ಶಕ್ತಿ, ಉತ್ಸಾಹ, ಮತ್ತು ಸಂತೋಷಗಳು ಕಸಿಯಲ್ಪಡುತ್ತವೆ. ಕುಟುಂಬ ಸದಸ್ಯರೊಂದಿಗೆ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ. ಖರ್ಚುಗಳು ಹೆಚ್ಚಲಿವೆ ಮತ್ತು ನೀವು ಸೋಲನ್ನು ಎದುರಿಸಲಿರುವಿರಿ. ನೀವು ಹಸಿದಿರುವಿರಿ. ಇಂದು ನೀವು ಚೆನ್ನಾಗಿ ನಿದ್ರಿಸಲಾರಿರಿ. ಹೃದಯ ಸಂಬಂಧಿ ರೋಗಗಳಿಂದ ನೀವು ತೊಂದರೆಗೊಳಗಾಗುವಿರಿ.

ಸಿಂಹ
ಸೋಮವಾರ, 21 ಜೂನ್
ನೀವು ದಿನವಿಡೀ ಸಂತೋಷ ಮತ್ತು ಶಾಂತಿಯಿಂದಿರುವಿರಿ. ಒಡಹುಟ್ಟಿದವರೊಂದಿಗೆ ಬಂಧವು ಮತ್ತಷ್ಟು ಬಲಗೊಳ್ಳುತ್ತದೆ. ಒಡಹುಟ್ಟಿದವರು ನಿಮಗೆ ಸಹಾಯಹಸ್ತ ಚಾಚಲಿದ್ದಾರೆ. ನಿಮ್ಮ ಪ್ರತಿ ಸಂಬಂಧದಲ್ಲಿ ಭಾವನಾತ್ಮಕ ಆಳವನ್ನು ಕಂಡುಕೊಳ್ಳುವಿರಿ. ಹತ್ತಿರದ ಪ್ರವಾಸಿ ತಾಣವೊಂದಕ್ಕೆ ಪ್ರವಾಸ ಕೈಗೊಳ್ಳುವಿರಿ. ನೀವು ಒತ್ತಡದಿಂದ ಮುಕ್ತರಾಗುವಿರಿ ಮತ್ತು ಮಾಡುವ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ.

ಕನ್ಯಾ
ಸೋಮವಾರ, 21 ಜೂನ್
ಕುಟುಂಬದ ವಾತಾವರಣವು ಆನಂದದಾಯಕವಾಗಿರಲಿದೆ. ನಿಮ್ಮ ಸಿಹಿ ಮಾತಿನಿಂದ ನೀವು ನಿಗದಿತ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸುವಿರಿ. ಬೌದ್ಧಿಕ ಚರ್ಚೆಗಳಿಂದ ದೂರವಿರಿ, ನೀವಿಂದು ಕೆಲವು ಸ್ವಾದಿಷ್ಟ ತಿನಿಸುಗಳನ್ನು ಸವಿಯುವಿರಿ. ಪ್ರಯಾಣದ ಸಾಧ್ಯತೆಗಳಿವೆ. ಖರ್ಚಿನ ಮೇಲೆ ನಿಗಾವಿರಲಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಕೈಗೊಳ್ಳಬೇಕಾದ ದಿನ.

ತುಲಾ
ಸೋಮವಾರ, 21 ಜೂನ್
ನಿಮ್ಮ ಹಣಕಾಸನ್ನು ವ್ಯವಸ್ಥಿತವಾಗಿ ಯೋಜಿಸುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಆಲೋಚನೆಗಳು ಕ್ರಿಯಾತ್ಮಕವಾಗಿರುತ್ತದೆ ಮತ್ತು ಇಂದು ನೀವು ಕ್ರಿಯಾತ್ಮಕ ಆಲೋಚನೆಗಳನ್ನು ಹೊರತರಲಿದ್ದೀರಿ. ಕೆಲಸದ ಮೇಲೆ ಕೇಂದ್ರೀಕೃತವಾಗುವಿರಿ ಮತ್ತು ಸರಿಯಾದ ಸಮಯದಲ್ಲಿ ಅದನ್ನು ಪೂರ್ಣಗೊಳಿಸುವಿರಿ. ನಿಮ್ಮ ಆತ್ಮವಿಶ್ವಾಸ ವರ್ಧಿಸಲಿದೆ. ಮೋಜು ಮತ್ತು ಮನರಂಜನೆಗಳಿಗೆ ನೀವು ಬಹಳಷ್ಟು ಖರ್ಚು ಮಾಡುವಿರಿ.

ವೃಶ್ಚಿಕ
ಸೋಮವಾರ, 21 ಜೂನ್
ನಿಮ್ಮ ದುರಾಕ್ರಮಣ ಸ್ವಭಾವ ಮತ್ತು ಮಾತಿನ ಮೇಲೆ ಹತೋಟಿ ಇಡುವಂತೆ ಸಲಹೆ,ನಿಮ್ಮ ಮನಸು ಒತ್ತಡ ಮತ್ತು ಉದ್ವೇಗದಿಂದ ಕೂಡಿರುವ ಹಾಗೂ ದೈಹಿಕ ತೊಂದರೆಯಿಂದಿರುವ ಸಂಭವವಿದೆ. ಅಪಘಾತಗಳನ್ನು ತಪ್ಪಿಸಲು ವಾಹನ ಚಾಲನೆಯ ಮೇಲೆ ಸೂಕ್ಷ್ಮ ಗಮನವಿರಲಿ. ಸಾಧ್ಯವಿದ್ದರೆ ಶಸ್ತ್ರಕ್ರಿಯೆಗಳನ್ನು ತಪ್ಪಿಸಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ಕುಟುಂಬ ಸದಸ್ಯರೊಂದಿಗೆ ಸಂಘರ್ಷಗಳನ್ನು ಹೊಂದಬಹುದು. ಕಾನೂನು ಕಲಹಗಳನ್ನು ತಪ್ಪಿಸಿ ಆದರೆ, ಬೇರೆ ದಾರಿಯೇ ಇಲ್ಲವಾದಲ್ಲಿ ಅವುಗಳನ್ನು ಜಾಗರೂಕತೆಯಿಂದ ನಿಭಾಯಿಸಿ.ಮನರಂಜನೆಯಿಂದ ದಿನವನ್ನು ಕಳೆಯಲಿದ್ದೀರಿ.

ಧನು
ಸೋಮವಾರ, 21 ಜೂನ್
ಈ ದಿನವು ಫಲಪ್ರದವಾಗಿರುತ್ತದೆ  ಹಣಕಾಸು ಸಾಮಾಜಿಕ ಹಾಗೂ ವೈಯಕ್ತಿಕ ನೆಲೆಯಿಂದ ನಿಮಗೆ ಲಾಭ ಉಂಟಾಗಲಿದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಉಲ್ಲಾಸಕರ ಪ್ರವಾಸಕ್ಕೆ ಯೋಜನೆ ರೂಪಿಸಬಹುದು. ವ್ಯವಹಾರಕ್ಕೆ ಇದು ಉತ್ತಮ ದಿನ. ಶಾಂತಿಯು ನಿಮ್ಮ ಕುಟುಂಬದಲ್ಲಿ ನೆಲೆಯಾಗಿರುವ ಸಾಧ್ಯತೆಯಿದೆ. ವಿವಾಹದ ಯೋಜನೆ ನಡೆಸುತ್ತಿರುವವರಿಗೆ ಇಂದು ಸೂಕ್ತ ಸಂಗಾತಿ ದೊರೆಯಬಹುದು.

ಮಕರ
ಸೋಮವಾರ, 21 ಜೂನ್
ನಿಮ್ಮ ಕುಟುಂಬದಿಂದ ಸಂತಸ ಅನುಭವಿಸುವ ಸಂಭವವಿದೆ. ನಿಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರ ಭೇಟಿಯಿಂದಲೂ ನೀವು ಖುಷಿ ಅನುಭವಿಸುವಿರಿ, ವ್ಯವಹಾರದಲ್ಲಿನ ಬಂಡವಾಳ ವೃದ್ಧಿಗೊಳಿಸಲು ತೀವ್ರ ಪ್ರಯತ್ನ ನಡೆಸುತ್ತಿರುವವರಿಗೆ ಅವರ ಆಲೋಚನೆಗಳು ಕೈಗೂಡುವ ಸಂಭವವಿದೆ. ಇದರಿಂದ ನಿಮಗೆ ಪ್ರಯೋಜನವುಂಟಾಗಬಹುದು. ಬಡ್ತಿ ಸಿಗುವ ಸಾಧ್ಯತೆಯಿದೆ. ಅಪಘಾತ ಸಂಭಾವ್ಯತೆಯಿರುವುದರಿಂದ ಎಚ್ಚರಿಕೆಯಿಂದಿರಿ,

ಕುಂಭ
ಸೋಮವಾರ, 21 ಜೂನ್
ನಿಮ್ಮ ಪ್ರತಿಸ್ಪರ್ಧಿಗಳೊಂದಿಗಿನ ಹೋರಾಟವನ್ನು ತಪ್ಪಿಸುವಂತೆ ಸಲಹೆ,ನೀವು ದೈಹಿಕವಾಗಿ ಅನಾರೋಗ್ಯದಿಂದಿರಬಹುದು. ಆಲಕ್ಷ್ಯವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಆದರೂ, ನೀವು ಮಾನಸಿಕ ಸಂತೋಷವನ್ನು ಅನುಭವಿಸುವಿರಿ. ಮೇಲಾಧಿಕಾರಿಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಮನರಂಜನೆಗಾಗಿ ಖರ್ಚು ಮಾಡುವ ಸಂಭವವಿದೆ. ಮಕ್ಕಳಿಗೆ ಸಂಬಂಧಿಸಿದ ಒತ್ತಡವು ನಿಮ್ಮನ್ನು ಇನ್ನಷ್ಟು ಕಾಡಲಿದೆ. ವಿದೇಶದಿಂದ ಶುಭಸುದ್ದಿ ಬರಬಹುದು.

ಮೀನ
ಸೋಮವಾರ, 21 ಜೂನ್
ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಿಕೆಯು ನಿಮ್ಮನ್ನು ಸಂಕಷ್ಟಕ್ಕೀಡುಮಾಡಬಹುದು,ನಿಮ್ಮ ನಾಲಗೆ ಮತ್ತು ಸಿಟ್ಟಿನ ಮೇಲೆ ನಿಯಂತ್ರಣವಿರಲಿ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಎಚ್ಚರಿಕೆಯಿಂದಿರಿ. ಅನೈತಿಕ ಚಟುವಟಿಕೆಗಳಲ್ಲಿ ತೊಡಗುವುದನ್ನು ತಪ್ಪಿಸಿ. ವೈದ್ಯಕೀಯ ಬಿಲ್‌ಗೆ ಸಂಬಂಧಿಸಿದ ವೆಚ್ಚಗಳು ಉಂಟಾಗುವ ಸಾಧ್ಯತೆಯಿದೆ. ಇಂದು ನೀವು ವಿಶ್ರಾಂತಿರಹಿತರಾಗಬಹುದು. ನಕಾರಾತ್ಮಕತೆಯು ನಿಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಬಹುದು ಅವುಗಳಿಂದ ದೂರವಿರಿ. ದೇವರ ಮೇಲಿನ ನಂಬಿಕೆ ಹಾಗೂ ಆಶೀರ್ವಾದವು ನಿಮಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡಬಹುದು.

ಉಚಿತ ಸುದ್ದಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್. ಟಿ .ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 , www.nithyavaninews.com

Leave a Reply

Your email address will not be published.