ನಿತ್ಯವಾಣಿ ಗುರುವಾರದ  ರಾಶಿ ಭವಿಷ್ಯ 

ನಿತ್ಯವಾಣಿ ಗುರುವಾರದ  ರಾಶಿ ಭವಿಷ್ಯ                  ಮೇಷ
ಗುರುವಾರ, 3 ಜೂನ್
ಲಕ್ಷ್ಮೀದೇವಿಯು ತನ್ನ ಅನುಗ್ರಹಪೂರ್ವಕ ಆಶೀರ್ವಾದವನ್ನು ನಿಮ್ಮ ಮೇಲೆ ತೋರಿಸುತ್ತಿದ್ದಾರೆ. ಮತ್ತು ನಿಮಗೆ ಆರ್ಥಿಕ ಲಾಭ ಉಂಟಾಗಲಿದೆ, ಸಾಮಾಜಿಕವಾಗಿ ನಿಮ್ಮ ಘನತೆ ಮತ್ತು ಗೌರವದಲ್ಲಿ ವೃದ್ಧಿಯಾಗುತ್ತದೆ. ನಿಮ್ಮ ಉದ್ಯಮವೂ ಏಳಿಗೆಯನ್ನು ಕಾಣುತ್ತದೆ. ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಕಾಯುತ್ತಿರುವವರು, ಇನ್ನು ಕಾಯಬೇಕಾಗಿಲ್ಲ. ಅವರಿಗೆ ಕಂಕಣ ಬಲ ಸದ್ಯದಲ್ಲಿಯೇ ಕೂಡಿಬರಲಿದೆ. ಏನೇ ಆದರೂ, ದಿನದ ದ್ವಿತೀಯಾರ್ಧದಲ್ಲಿ ಆರೋಗ್ಯ ಸಮಸ್ಯೆ ಕಂಡುಬರಬಹುದು. ಹೂಡಿಕೆ ಮಾಡುವ ಮುನ್ನ ಸರಿಯಾಗಿ ಯೋಚಿಸಿ. ನಿಮ್ಮ ಕುಟುಂಬದೊಂದಿಗೆ ಸಂಭಾಷಣೆ ನಡೆಸಲು ಮಾತುಕತೆಯಲ್ಲಿ ತೊಡಗಲು ಸಂಜೆಯು ಉತ್ತಮ ಸಮಯವಲ್ಲ ಇದು ವಿರೋಧಿಗಳನ್ನು ಆಹ್ವಾನಿಸುತ್ತದೆ.

ವೃಷಭ
ಗುರುವಾರ, 3 ಜೂನ್
ಉದ್ಯಮಕ್ಕೆ ಸಂಬಂಧಿಸಿ ಇಂದು ಅತ್ಯುತ್ತಮ ದಿನ. ಕಚೇರಿಯಲ್ಲಿ ನಿಮ್ಮ ಕಾರ್ಯಗಳಿಗೆ ಶ್ಲಾಘನೆ ಸಿಗುವುದರಿಂದ ನೀವು ಪ್ರಶಂಸೆಯ ಮಳೆಯಲ್ಲಿ ನೆನೆಯಲಿದ್ದೀರಿ. ಇದು ನಿಮಗೆ ಹೆಸರು, ಖ್ಯಾತಿ ಮತ್ತು ಸಾಮಾಜಿಕ ಮನ್ನಣೆಯಲ್ಲಿ ತರಲಿದೆ. ಜೊತೆಗೆ, ಆರ್ಥಿಕ ಲಾಭಗಳೂ ಉಂಟಾಗಲಿವೆ. ನೀವು ನಿಮ್ಮ ಸಂಗಾತಿಯೊಂದಿಗೆ ಸಂತಸಭರಿತ ಸಮಯವನ್ನು ಆನಂದಿಸಬಹುದು. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ. ನಿಸರ್ಗದಲ್ಲಿನ ಸುಂದರ ಪ್ರದೇಶಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಸಂಜೆಯನ್ನು ಕಳೆಯಿರಿ.

ಮಿಥುನ
ಗುರುವಾರ, 3 ಜೂನ್
ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳೊಂದಿಗಿನ ಸಹಮತವನ್ನು ಹಾಳುಮಾಡುವುದನ್ನು ತಪ್ಪಿಸಿ. ಇದು ಉತ್ತಮ ಆಲೋಚನೆಯಲ್ಲ. ಸ್ವಲ್ಪ ಹೊಂದಾಣಿಕೆಯಾಗಲು ಪ್ರಯತ್ನಿಸಿ ಮತ್ತು ನೀವು ನಿಮ್ಮಲ್ಲಿ ಮತ್ತು ಇತರರಲ್ಲಿ ಕಾರ್ಯಸ್ನೇಹಿ ವಾತಾವರಣವನ್ನು ನಿರ್ಮಿಸಬಹುದು. ಇಂದು ನೀವು ಆಡಂಬರ ಮತ್ತು ಸುಖಸಾಧನಗಳಲ್ಲಿ ತೊಡಗಬಹುದು. ನಿಮ್ಮ ಖುಷಿಯ ಮನಸ್ಸು ಇಂದು ನಿಮ್ಮ ಮನೆಯ ವಾತಾವರಣವನ್ನು ಶಾಂತಿ ಹಾಗೂ ಸಮಾಧಾನದಲ್ಲಿರಿಸಲಿದೆ. ಅನಿರೀಕ್ಷಿತ ಧನಲಾಭದ ಯೋಗವಿದೆ.

ಕರ್ಕಾಟಕ
ಗುರುವಾರ, 3 ಜೂನ್
ನಿಮ್ಮ ಅದೃಷ್ಟಕಾರಕ ಗ್ರಹಗಳು ಇಂದು ಚಟುವಟಿಕೆಯಲ್ಲಿ ಇರದೇ ಇರುವುದರಿಂದ ಇಂದು ನೀವು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅನೈತಿಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಿ ಇದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಕೆಟ್ಟ ಹೆಸರನ್ನು ತರಬಹುದು. ಕಟುಮಾತುಗಳನ್ನು ಆಡುವ ಮುನ್ನ ನಿಮ್ಮ ನಾಲಗೆಯನ್ನು ನಿಯಂತ್ರಿಸಿ ಇಲ್ಲವಾದಲ್ಲಿ ನೀವು ಬೇರೆಯವರ ಮನಸ್ಸನ್ನು ನೋಯಿಸಬಹುದು. ಕಾರ್ಯಸ್ಥಳದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳು ನಿಮ್ಮ ಮೇಲೆ ತೋರುವ ವರ್ತನೆಯ ರೀತಿಯಿಂದ ನೀವು ಅಸಮಾಧಾನಗೊಳ್ಳಬಹುದು. ಇದು ನಿಮ್ಮ ಸ್ಪರ್ಧಿಗಳು ಮತ್ತು ವರಿಷ್ಠರೊಂದಿಗಿನ ಸಂಘರ್ಷಕ್ಕೆ ಕಾರಣವಾಗಬಹುದು. ಕಚೇರಿಯಲ್ಲಿ ಇಂತಹ ಸನ್ನಿವೇಶಗಳು ನಡೆಯದಂತೆ ತಪ್ಪಿಸಿ. ಸ್ವಸಹಾಯ ಪುಸ್ತಕಗಳ ಓದುವಿಕೆಯು ಸಹಾಯ ನೀಡಬಹುದು.

ಸಿಂಹ
ಗುರುವಾರ, 3 ಜೂನ್
ಇಂದು ನೀವು ವಿವಿಧ ರೀತಿಯ ಮನರಂಜನೆಯನ್ನು ನಿರೀಕ್ಷಿಸುವಿರಿ ಮತ್ತು ಸಿನಿಮಾ ಮತ್ತು ಕಾರ್ಟ್‌ಗೆ ತೆರಳಲು ನಿಮ್ಮ ಸ್ನೇಹಿತರು ಹೆಚ್ಚು ಸಂತಸಪಡುತ್ತಾರೆ. ನಿಮ್ಮ ನಂತರದ ಆಲೋಚನೆಯಲ್ಲಿ ನೀವು ನಿಮ್ಮ ಎಲ್ಲಾ ಯೋಜನೆಗಳನ್ನು ರದ್ದುಗೊಳಿಸುವಿರಿ ಮತ್ತು ಪ್ರಯಾಣ ತೆರಳುವಿರಿ. ಏನೇ ಆದರೂ, ನಿಮ್ಮ ನಿರಂತರ ಆಲೋಚನಾ ಹರಿವು ಮತ್ತು ತಲ್ಲಣಗಳು ಸಂಜೆಯೊಳಗೆ ನಿಮ್ಮನ್ನು ಬಳಲಿಕೆಯಲ್ಲಿರಿಸುತ್ತದೆ. ಇದೇ ಸಮಯದಲ್ಲಿ, ನಿಮ್ಮ ಕೋಪ ಮತ್ತು ಮಾತನ್ನು ನಿಯಂತ್ರಣದಲ್ಲರಿಸಿ. ಇಂದು ನಿಮಗೆ ಹಣದ ಕೊರತೆ ಉಂಟಾಗಬಹುಗು. ನಿಮ್ಮ ಖರ್ಚಿನ ಮೇಲೆ ನಿಗಾವಿರಿಸಿ.

ಕನ್ಯಾ
ಗುರುವಾರ, 3 ಜೂನ್
ಈ ಉಜ್ವಲ ದಿನದ ಗರಿಷ್ಟ ಪ್ರಯೋಜನವನ್ನು ಪಡೆದುಕೊಳ್ಳಿ, ನಿಮ್ಮ ಉದ್ಯಮ ಪಾಲುದಾರರಿಂದ ನೀವು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಕಾರ್ಯಗಳ ಯಶಸ್ವೀ ಪೂರ್ಣಗೊಳಿಸುವಿಕೆಯಿಂದಾಗಿ ನೀವು ಉತ್ಸಾಹದಿಂದ ಕೂಡಿರಬಹುದು. ಇದು ಸಂಜೆಯ ವೇಳೆಗೆ ಸ್ನೇಹಿತರು ಮತ್ತು ಮನೆಮಂದಿಯೊಂದಿಗಿನ ಸಂಭ್ರಮಾಚರಣೆಗೆ ಕಾರಣವಾಗಬಹುದು. ಚಿಯರ್ಸ್ ಹೇಳಿ, ಸಂಗೀತ ಕೇಳಿ, ಗೆಲುವಿನ ನೃತ್ಯ ಮಾಡಿ ಇವು ವಿಶ್ರಮಿಸುವ ಸೂಕ್ತ ವಿಧಾನವಾಗಿದೆ. ಏನೇ ಆದರೂ, ಭಾವೋದ್ವೇಗಕ್ಕೆ ಒಳಗಾಗಬೇಡಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಅತ್ಯುತ್ತಮ ಸಮಯವನ್ನು ಹೊಂದಿರಿ.

ತುಲಾ
ಗುರುವಾರ, 3 ಜೂನ್
ಸಕ್ರಿಯ ಚರ್ಚೆ ಮತ್ತು ಮಾತುಕತೆಗಳಲ್ಲಿ ಭಾಗವಹಿಸುವ ಮೂಲಕ ನಿಮ್ಮ ವಿಶ್ಲೇಷಣೆ ಮತ್ತು ಕ್ರಿಯಾತ್ಮಕ ಅರ್ಹತೆಯನ್ನು ಪರೀಕ್ಷಿಸುವ ದಿನ ಇದಾಗಿದೆ. ಕ್ರಿಯಾತ್ಮಕ ಬರಹಗಳ ಕುರಿತು ಆಲೋಚಿಸಿದ್ದಲ್ಲಿ, ಅಂತಹ ಚಟುವಟಿಕೆಗಳಿಗೆ ಈ ದಿನವು ಉತ್ತಮವಾದ ಕಾರಣ ನೀವು ಅಂದುಕೊಂಡದ್ದನ್ನು ಸಾಧಿಸಬಹುದು. ಅಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿಕೆಯು ಕೇವಲ ನಿಮ್ಮ ಅರ್ಹತೆಯನ್ನು ಹರಿತಗೊಳಿಸುವುದು ಮಾತ್ರವಲ್ಲದೇ ನಿಮ್ಮ ಕಾರ್ಯಕ್ಷೇತ್ರದಲ್ಲೂ ನಿಮಗೆ ಇದು ಸಹಾಯಕವಾಗಲಿದೆ. ಕಚೇರಿಯಲ್ಲಿ ಸ್ನೇಹಪರ ವಾತಾವರಣವಿರುತ್ತದೆ. ಇದು ಉತ್ಪಾದಕತೆ ಮತ್ತು ದಕ್ಷತೆಯಲ್ಲಿ ಉತ್ತಮವಾದುದನ್ನೇ ನೀಡುತ್ತದೆ. ಏನೇ ಆದರೂ, ನಿಮ್ಮ ಭಾವುಕತೆಯ ಮಟ್ಟವು ಇಂದು ಸ್ವಲ್ಪ ಹೆಚ್ಚೇ ಇರುತ್ತದೆ. ನಿಮ್ಮಲ್ಲಿನ ಹೆಚ್ಚುವರಿ ಬೇಸರವನ್ನು ತೊಲಗಿಸಲು ಪ್ರಯತ್ನಿಸಿ. ನಿಮ್ಮ ಮನೆಯ ವಾತಾವರಣವು ದಿನಪೂರ್ತಿ ಹರ್ಷದಾಯಕ ಸ್ಥಿತಿಯಲ್ಲಿರುತ್ತದೆ.

ವೃಶ್ಚಿಕ
ಗುರುವಾರ, 3 ಜೂನ್
ನೀವು ಮೊಂಡುತನಕ್ಕೆ ಪಟ್ಟುಹಿಡಿದರೆ ನಿಯಂತ್ರಣವನ್ನು ತಪ್ಪುತ್ತೀರಿ ನಿಮ್ಮ ಭಾವೋದ್ವೇಗವನ್ನು ಸ್ವಲ್ಪ ತಗ್ಗಿಸಿ. ಇಲ್ಲವಾದಲ್ಲಿ ಇದು ನಿಮ್ಮನ್ನು ಒತ್ತಡ ಮತ್ತು ಮಾನಸಿಕ ಅಸ್ಥಿರತೆಗೆ ಈಡಾಗಿಸುತ್ತದೆ. ಮಧ್ಯಾಹ್ನದ ಬಳಿಕ ನಿಮ್ಮ ಆಲೋಚನಾ ರೀತಿಯು ವೇಗವಾಗಿರುತ್ತದೆ. ಹೊಸ ಯೋಜನೆಗಳು ಮತ್ತು ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದನ್ನು ತಪ್ಪಿಸುವಂತೆ ಗಣೇಶ ಸಲಹೆ ನೀಡುತ್ತಾರೆ. ಬದಲಾಗಿ ಹಿಂಸೆಯನ್ನು ನೀಡದಂತಹ ಸಮಾಧಾನದಿಂದಿರುವ ಯಾವುದನ್ನಾದರೂ ಕೈಗೆತ್ತಿಕೊಳ್ಳಿ. ನಿಮ್ಮ ಶಾಪಿಂಗ್ ಖರ್ಚು ಮಿತಿಮೀರಬಹುದು. ಅದರ ಮೇಲೆ ನಿಯಂತ್ರಣವಿರಿಸಿ ಇಲ್ಲವಾದಲ್ಲಿ ನಿಮ್ಮ ಕಿಸೆಯನ್ನು ಶೀಘ್ರದಲ್ಲೇ ಖಾಲಿಮಾಡುತ್ತದೆ. ಹೊರಭಾಗದಲ್ಲಿನ ಭೋಜನ ಅಥವಾ ಹಾಳುಮೂಳು ತಿಂಡಿ ತಿನ್ನುವಿಕೆಯನ್ನು ಬೇರೊಂದು ದಿನಕ್ಕೆ ಮುಂದೂಡಬೇಕು. ಅವುಗಳನ್ನು ನಿಭಾಯಿಸಲು ನಿಮ್ಮ ಉದರಕ್ಕೆ ಅಸಾಧ್ಯವಾಗಬಹುದು. ಪ್ರಯಾಣವನ್ನು ಮುಂದೂಡಿ.

ಧನು
ಗುರುವಾರ, 3 ಜೂನ್
ಈ ದಿನವು ಉತ್ತಮವಾಗಿಯೇ ಪ್ರಾರಂಭಗೊಳ್ಳುತ್ತದೆ ಆದರೆ, ಅಂತ್ಯದ ವೇಳೆಗೆ ಅಪಾಯಕಾರಿಯಾಗಿ ದಿನವು ಕೊನೆಗೊಳ್ಳುತ್ತದೆ, ದಿನದ ಪೂರ್ವಾರ್ಧದಲ್ಲಿ, ನಿಮ್ಮ ಮನಸ್ಸು, ದೇಹ ಮತ್ತು ಉತ್ಸಾಹವು ಸಂಪೂರ್ಣ ನಿಯಂತ್ರಣದಲ್ಲಿರುತ್ತದೆ. ಇದು ನಿಮ್ಮ ಕುಟುಂಬವನ್ನು ಚಿಂತೆಗೀಡುಮಾಡುತ್ತಿರುವ ವಿಚಾರಗಳನ್ನು ಬಗೆಹರಿಸಲು ಸಹಾಯಕವಾಗಲಿದೆ. ಅಂತಹ ವಿಚಾರಗಳನ್ನು ಬಗೆಹರಿಸುವಲ್ಲಿ ನೀವು ಯಶಸ್ಸನ್ನೂ ಪಡೆಯುವಿರಿ. ನಿಮ್ಮ ಮತ್ತು ನಿಮ್ಮ ಸ್ನೇಹಿತರ ನಡುವಿನ ಸಂಬಂಧಗಳೂ ಇಂದು ಬಲಗೊಳ್ಳುತ್ತವೆ. ಏನೇ ಆದರೂ, ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ನಿಮ್ಮ ಭಾವನೆಗಳನ್ನು ಹೊರಗೆಡಹುವುದು ಯಾವತ್ತೂ ಉತ್ತಮವೇ ಆದರೆ, ಯಾರಾದರೂ ತಾವು ಅವನ/ಳ ಹೃದಯದಲ್ಲಿ ಮಾತನಾಡುತ್ತಿದ್ದೇವೆ ಎಂಬುದನ್ನು ತೋರ್ಪಡಿಸಲು ಯಾರೊಬ್ಬರೂ ಕಾರ್ಯತಃ ವಿಫಲರಾದಲ್ಲಿ ಪರಿಸ್ಥಿತಿಗಳು ಅಪಾರ್ಥಗೊಳ್ಳುತ್ತವೆ. ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರ ದಿನ.

ಮಕರ
ಗುರುವಾರ, 3 ಜೂನ್
ಮಾತಿನಲ್ಲಿನ ಹಿಡಿತವು ತಿಳುವಳಿಕೆಯ ಮನಸ್ಸನ್ನು ನೀಡುತ್ತದೆ, ಮತ್ತು ನಿಮ್ಮ ಇಂದಿನ ಜೀವನದಲ್ಲಿ ಈ ಉಕ್ತಿಯನ್ನು ನೀವು ಅಳವಡಿಸಲೇಬೇಕು. ಇದರಿಂದ ನೀವು ನಿಮ್ಮ ಕುಟುಂಬ ಸದಸ್ಯರು ಮತ್ತು ಪ್ರೀತಿಪಾತ್ರರೊಂದಿಗಿನ ಸಂಭಾವ್ಯ ಸಂಘರ್ಷವನ್ನು ಸುಲಭವಾಗಿ ತಪ್ಪಿಸಬಹುದು. ಸಂಜೆಯ ವೇಳೆಗೆ, ನಿಮ್ಮ ಮನಸ್ಸು ಒತ್ತಡ ಮತ್ತು ಚಿಂತೆಗಳಿಂದ ಮುಕ್ತಗೊಳ್ಳುವುದರಿಂದ ಪರಿಸ್ಥಿತಿಗಳು ಉತ್ತಮವಾಗಿರುವಂತೆ ಕಂಡುಬರುತ್ತವೆ. ಇದು ನಿಮ್ಮ ಪ್ರೀತಿಪಾತ್ರರನ್ನು ಔತಣಕೂಟಕ್ಕೆ ಆಹ್ವಾನಿಸುವಂತೆ ನಿಮ್ಮನ್ನು ಪ್ರಚೋದಿಸುತ್ತದೆ. ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಇಂದು ವೃದ್ಧಿಗೊಳ್ಳುತ್ತದೆ. ಧಾರ್ಮಿಕ ಚಟುವಟಿಕೆಗಳಿಗಾಗಿ ನೀವು ವೆಚ್ಚ ಮಾಡಬಹುದು.

ಕುಂಭ
ಗುರುವಾರ, 3 ಜೂನ್
ಸಾಮಾನ್ಯ ದಿನವು ನಿಮಗಾಗಿ ನಕಾರಾತ್ಮಕತೆಯು ನಿಮ್ಮಲ್ಲಿದ್ದಲ್ಲಿ ಇದು ನಿಮ್ಮ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯದ ಮೇಲೆ ತೊಂದರೆಯನ್ನುಂಟುಮಾಡುತ್ತದೆ ಮತ್ತು ನಿಮ್ಮ ಉತ್ಸಾಹಕ್ಕೆ ತಣ್ಣೀರೆರಚುತ್ತದೆ. ನಿಮ್ಮ ಆಧ್ಯಾತ್ಮ ಆಸಕ್ತಿಯುಳ್ಳ ಮನಸ್ಥಿತಿಯು ನಿಮ್ಮ ಋಣಾತ್ಮಕತೆಯನ್ನು ದೂರವಿರಿಸಲು ಯಶಸ್ವಿಯಾಗಲು ಮತ್ತು ನೀವು ತೃಪ್ತಿ ಹಾಗೂ ಸಂತೋಷದಿಂದಿರಲು ಸಹಕಾರಿಯಾಗಲಿದೆ. ಎಲ್ಲಾ ಕ್ಷೇತ್ರಗಳಲ್ಲೂ ಪರಿಸ್ಥಿತಿಯನ್ನು ಸಹಜವಾಗಿರಿಸಲು ನೀವು ನಿಮ್ಮ ಕೋಪವನ್ನು ನಿಯಂತ್ರಿಸಬೇಕಾಗುತ್ತದೆ. ಸಂಕ್ಷಿಪ್ತವಾಗಿ, ಗೋಧಿಯಿಂದ ಕಸವನ್ನು ಹೊರತೆಗೆಯಿರಿ ಮತ್ತು ಬ್ರೆಡ್ ರುಚಿಯ ಪರಿಶುದ್ಧತೆಯನ್ನು ಆನಂದಿಸಿರಿ. ಮಿತಿಮೀರಿದ ವೆಚ್ಚವನ್ನು ತಪ್ಪಿಸಿ, ಇಲ್ಲವಾದಲ್ಲಿ ಆರ್ಥಿಕ ತೊಡಕುಗಳು ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಈ ದಿನವು ಸ್ವಲ್ಪ ಕಷ್ಟಕರವಾಗಿರಬಹುದು.

ಮೀನ
ಗುರುವಾರ, 3 ಜೂನ್
ಈ ದಿನದ ಲಾಭಗಳಿಗಾಗಿ, ನಿಮ್ಮ ಚೈತನ್ಯವನ್ನು ಒಟ್ಟಾಗಿಸಿ, ಅವುಗಳನ್ನು ಧನಾತ್ಮಕ ಹಾದಿಯಲ್ಲಿ ತೊಡಗಿಸಿ, ಇದನ್ನು ನೀವು ಧ್ಯಾನ ಅಥವಾ ಯೋಗದ ಮೂಲಕ ಸಾಧ್ಯವಾಗಿಸಬಹುದು. ನಿಮ್ಮ ಕುಟುಂಬ ಸದಸ್ಯರು ಮತ್ತು ಪ್ರೀತಪಾತ್ರರೊಂದಿಗೆ ಕಲಹ ಉಂಟಾಗುವ ಸಾಧ್ಯತೆಯಿದೆ. ಅಂತಹ ಸಂಭಾವ್ಯತೆಗಳನ್ನು ತಪ್ಪಿಸಲು ನಿಮ್ಮ ಮಾತು ಮತ್ತು ಸಿಡುಕಿನ ಮೇಲೆ ನಿಯಂತ್ರಣವಿರಿಸಿ. ಮಧ್ಯಾಹ್ನದ ಬಳಿಕ, ನೀವು ಆಲೋಚಿಸುವ ಮತ್ತು ಪ್ರತಿಕ್ರಯಿಸುವ ರೀತಿಯಲ್ಲಿ ಧನಾತ್ಮಕ ಬದಲಾವಣೆಗಳನ್ನು ನೀವು ಕಾಣುವಿರಿ. ಮತ್ತು ಈ ಮನಸ್ಸಿನ ಮಾನಸಿಕ ಸ್ಥಿತಿಯು ನಿಮ್ಮನ್ನು ಸಂತಸ ಹಾಗೂ ತೃಪ್ತಿಯಲ್ಲಿರಿಸುತ್ತದೆ. ನೀವು ಸ್ನೇಹಿತರು ಮತ್ತು ಪ್ರೀತಪಾತ್ರರಿಗಾಗಿ ಔತಣಕೂಟವನ್ನು ಆಯೋಜಿಸಬಹುದು ಮತ್ತು ಇದು ಮನೆಯಲ್ಲಿನ ವಾತಾರವಣವನ್ನು ಸಂತಸದಲ್ಲಿರಿಸುತ್ತದೆ. ಆದರೂ, ನಿಮ್ಮ ವೆಚ್ಚಗಳನ್ನು ನಿಯಂತ್ರಣದಲ್ಲಿರಿಸಿ.

Leave a Reply

Your email address will not be published.