ನಿತ್ಯವಾಣಿ ಭಾನುವಾರದ ರಾಶಿ ಭವಿಷ್ಯ

ನಿತ್ಯವಾಣಿ ಭಾನುವಾರದ ರಾಶಿ ಭವಿಷ್ಯ
ಮೇಷ
ಭಾನುವಾರ, 6 ಜೂನ್
ಇಂದು ನೀವು ಅತ್ಯಂತ ಉಲ್ಲಾಸಭರಿತವಾಗಿರುತ್ತೀರಿ. ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರುತ್ತೀರಿ. ಇಂದು ನೀವು ಏನೇ ಮಾಡಿದರೂ ಅದರಲ್ಲಿ ಯಶಸ್ವಿಯಾಗುವ ಸಾಧ್ಯತೆಯಿದೆ. ನಿಮ್ಮ ಕುಟುಂಬದ ವಾತಾವರಣದಲ್ಲಿ ಇಂದು ಸಂತಸ ತುಂಬಿರುತ್ತದೆ. ಅವರಿಂದ ನಿಮಗೆ ಲಾಭವೂ ಉಂಟಾಗಬಹುದು.ಇಂದು ನಿಮಗೆ ಧನಲಾಭದ ಯೋಗವಿದೆ. ನಿಮ್ಮ ಸ್ನೇಹಿತರೊಂದಿಗೆ ಅಥವಾ ಆಪ್ತರೊಂದಿಗೆ ವಿಹಾರ ಹೋಗಲು ಇಂದು ಉತ್ತಮ ದಿನ. ನಿಮ್ಮ ಮನಸ್ಸಿಗೆ ಮುದ ನೀಡುವಂತಹ ಉಡುಗೊರೆಗಳನ್ನು ನೀವು ಅವರಿಂದ ಪಡೆಯಬಹುದು..

ವೃಷಭ
ಭಾನುವಾರ, 6 ಜೂನ್
ಈ ದಿನ ನಿಮಗೆ ಉತ್ತಮವಾಗಿರಲಾರದು, ಎಲ್ಲಾ ರೀತಿಯ ತೊಂದರೆಗಳೂ ನಿಮ್ಮನ್ನು ಚಿಂತೆಗೀಡುಮಾಡುತ್ತದೆ. ದೈಹಿಕವಾಗಿ ನೀವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ನಿಮ್ಮ ಮತ್ತು ನಿಮ್ಮ ಆಪ್ತರ ನಡುವೆ ಸಂಘರ್ಷ ತಲೆದೋರುವ ಸಾಧ್ಯತೆಯಿದ್ದು, ಇದು ನಿಮ್ಮ ಕುಟುಂಬದ ವಾತಾವರಣದಲ್ಲಿ ಅಸ್ಥಿರತೆಯನ್ನು ಉಂಟುಮಾಡಬಹುದು.ನೀವು ಕೈಗೆತ್ತಿಕೊಂಡ ಕಾರ್ಯವನ್ನು ಇಂದು ನೀವು ಪೂರ್ಣಗೊಳಿಸುವುದಿಲ್ಲ. ಇಂದು ಹೆಚ್ಚಿನ ಖರ್ಚಿಗೆ ಕೂಡ ಹಾದಿ ಸಿಗಬಹುದು. ಕಠಿಣ ಶ್ರಮದ ಹೊರತಾಗಿಯೂ ಕಳಪೆ ಫಲಿತಾಂಶದಿಂದಾಗಿ ನೀವು ವ್ಯಾಕುಲತೆಗೊಳಗಾಗಬಹುದು. ಗೊಂದಲವನ್ನು ತಡೆಗಟ್ಟುವ ಸಲುವಾಗಿ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸಾಕಷ್ಟು ಆಲೋಚಿಸುವುದು ಒಳಿತು.

ಮಿಥುನ
ಭಾನುವಾರ, 6 ಜೂನ್
ವಿವಿಧ ರೀತಿಯ ಲಾಭದಾಯಕತೆಯು ನಿಮ್ಮ ಇಂದಿನ ಸಂತಸವನ್ನು ಇಮ್ಮಡಿಗೊಳಿಸುತ್ತದೆ.ನಿಮ್ಮ ಹೆಂಡತಿ ಅಥವಾ ಮಕ್ಕಳಿಂದ ನೀವು ಸಂತೋಷದ ಸುದ್ದಿ ಪಡೆಯುವಿರಿ. ಸ್ನೇಹಿತರನ್ನು ಭೇಟಿ ಮಾಡುವ ವೇಳೆ ನೀವು ಸಾಕಷ್ಟು ಖುಷಿಯನ್ನು ಪಡೆಯುವಿರಿ. ವಿವಾಹ ಪ್ರಯತ್ನದಲ್ಲಿ ತೊಡಗಿರುವವರಿಗೆ ಸೂಕ್ತ ಸಂಗಾತಿ ದೊರಕುವ ಸಾಧ್ಯತೆಯಿದೆ.

ಕರ್ಕಾಟಕ
ಭಾನುವಾರ, 6 ಜೂನ್
ಉದ್ಯೋಗಸ್ಥರಿಗೆ ಇಂದು ಲಾಭದಾಯಕ ದಿನವಾಗಲಿದೆ. ನಿಮ್ಮ ಮೇಲಿನ ವ್ಯಕ್ತಿಗಳಿಂದ ಸಾಕಷ್ಟು ಬೆಂಬಲ ನಿಮಗೆ ಸಿಗಲಿದೆ. ಬಡ್ತಿ ಸಿಗುವ ಸಾಧ್ಯತೆಯೂ ಇದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಅತಿ ಮುಖ್ಯ ವಿಚಾರವೊಂದರ ಬಗ್ಗೆ ನೀವು ಚರ್ಚಿಸಲಿದ್ದೀರಿ. ನಿಮ್ಮ ತಾಯಿಯ ಆರೋಗ್ಯ ನಿಮ್ಮನ್ನು ಚಿಂತೆಗೀಡುಮಾಡುವುದಿಲ್ಲ. ಇಂದು ನೀವು ಗೌರವ ಮತ್ತು ಹಣ ಗಳಿಸುತ್ತೀರಿ. ನಿಮ್ಮ ಗೃಹ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದ್ದೀರಿ. ಅತಿಯಾದ ಕೆಲಸದ ಒತ್ತಡದಿಂದಾಗಿ ನೀವು ಸ್ವಲ್ಪ ಆಯಾಸಗೊಳ್ಳಬಹುದು. ಆದರೂ, ನಿಮ್ಮ ಆರೋಗ್ಯ ಅದರ ಒತ್ತಡವನ್ನು ತಡೆಯದು.ನಿಮ್ಮ ಕುಟುಂಬ ಜೀವನವು ಸಂತೋಷವಾಗಿರುತ್ತದೆ.

ಸಿಂಹ
ಭಾನುವಾರ, 6 ಜೂನ್
ಇಂದು ನೀವು ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಮತ್ತು ಸ್ನೇಹಿತರೊಂದಿಗೆ ಯಾತ್ರಾಸ್ಥಳಕ್ಕೆ ತೆರಳಲು ಇಂದು ಯೋಗ್ಯ ದಿನವಾಗಿದೆ.ಒಮ್ಮೆ ನೀವು ಒಂದು ಕಾರ್ಯವನ್ನು ಮಾಡಲು ನಿರ್ಧರಿಸಿದರೆ ಅದನ್ನು ಪೂರ್ಣಗೊಳಿಸಲು ಸಂಪೂರ್ಣವಾಗಿ ಪ್ರಯತ್ನಿಸುತ್ತೀರಿ. ನಿಮ್ಮ ಗುರಿಯಲ್ಲಿ ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತೀರಿ. ನಿಮ್ಮ ಸಿಟ್ಟನ್ನು ನಿಯಂತ್ರಿಸಿಕೊಳ್ಳಿ. ನಿಮ್ಮ ಉದ್ಯೋಗದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗುವ ಸಂಭವವಿದೆ. ನಿಮ್ಮ ಮೇಲಾಧಿಕಾರಿಗಳ ಅಸಮಧಾನದಿಂದ ನಿಮ್ಮ ಮನಸ್ಸಿಗೆ ನೋವುಂಟಾಗಲಿದೆ. ಆರೋಗ್ಯವು ಸಾಮಾನ್ಯವಾಗಿ ಇರುತ್ತದೆ.

ಕನ್ಯಾ
ಭಾನುವಾರ, 6 ಜೂನ್
ಯೋಚಿಸಿ ಮಾತನಾಡುವಂತೆ ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಇಂದು ಸಕಾಲವಲ್ಲ. ನೀವು ಕೋಪಗೊಳ್ಳಬಹುದು ಅಥವಾ ಕ್ಷೋಭೆಗೊಳ್ಳಬಹುದು. ಜಾಗ್ರತೆಯಿಂದಿರಿ. ಕುಟುಂಬ ಸದಸ್ಯರೊಂದಿಗಿನ ಜಗಳದಿಂದಾಗಿ ನಿಮಗೆ ಬೇಸರವುಂಟಾಗುತ್ತದೆ. ಸಾದ್ಯವಿದ್ದರೆ, ಇಂದು ಪ್ರಯಾಣ ಮಾಡುವುದನ್ನು ಆದಷ್ಟು ತಪ್ಪಿಸಿ. ನಿಮಗೆ ಕೆಡುಕನ್ನುಂಟುಮಾಡಲು ಬಯಸುವ ವ್ಯಕ್ತಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ.

ತುಲಾ
ಭಾನುವಾರ, 6 ಜೂನ್
ನಿಮ್ಮ ಪ್ರೀತಿಪಾತ್ರರೊಂದಿಗೆ ಮತ್ತು ನಿಮ್ಮ ಸ್ನೇಹಿತರೊಂದಿಗೆ ಮನರಂಜನಾ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದರಿಂದ ನಿಮ್ಮ ಮನಸ್ಸಿಗೆ ಸಂತಸ ಉಂಟಾಗಲಿದೆ. ಪ್ರಯಾಣ ಮಾಡಲು ಇಂದು ಸೂಕ್ತ ದಿನ. ಉಡುಪು ಮತ್ತು ಮನರಂಜನಾ ವಸ್ತುಗಳನ್ನು ಖರೀದಿಸುತ್ತೀರಿ. ಇಂದು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರುವ ಸಾಧ್ಯತೆಯಿದೆ. ನಿಮ್ಮ ಯಶಸ್ಸು ವೃದ್ಧಿಸಲಿದೆ.

ವೃಶ್ಚಿಕ
ಭಾನುವಾರ, 6 ಜೂನ್
ಇಂದಿನ ದಿನವಿಡೀ ನಿಮ್ಮ ಕುಟುಂಬದ ವಾತಾವರಣವು ಅತ್ಯಂತ ಉಲ್ಲಾಸದಾಯಕವಾಗಿರುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಉತ್ಸಾಹದಿಂದಿರುತ್ತೀರಿ. ನಿಮ್ಮ ವೈರಿಗಳು ಇವತ್ತು ಸೋಲನ್ನು ಒಪ್ಪಿಕೊಳ್ಳುವರು. ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ದೊರಕಲಿದೆ. ಗೆಳತಿಯರ ಭೇಟಿಯು ಮನಸ್ಸಿಗೆ ಮುದ ನೀಡಲಿದೆ. ಇಂದು ಧನಲಾಭದ ಯೋಗವಿದೆ. ಅಪೂರ್ಣಗೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಅನಾರೋಗ್ಯಪೀಡಿತರಿಗೆ ಸ್ವಲ್ಪ ಮಟ್ಟಿನ ಶಮನ ದೊರಕೀತು.

ಧನು
ಭಾನುವಾರ, 6 ಜೂನ್
ಸೋಲಿನಿಂದ ಹತಾಶರಾಗಬೇಡಿ ನಿಮ್ಮ ಸಿಟ್ಟನ್ನು ನಿಯಂತ್ರಿಸಿಕೊಳ್ಳಿ. ನಿಮ್ಮ ಮಕ್ಕಳಿಗೆ ಸಂಬಂಧಿಸಿದ ವಿಚಾರದಲ್ಲಿ ನೀವು ಚಿಂತೆಗೊಳಗಾಗಬಹುದು. ಸಾಧ್ಯವಿದ್ದರೆ ಪ್ರಯಾಣ ಮಾಡುವುದನ್ನು ತಪ್ಪಿಸಿ.

ಮಕರ
ಭಾನುವಾರ, 6 ಜೂನ್
ಈ ದಿನವು ನಿಮಗೆ ಒಂದು ಶುಭದಿನವಾಗಲಿದೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ಉಲ್ಲಾಸದಿಂದಿರುತ್ತೀರಿ. ನಿಮ್ಮ ಕುಟುಂಬ ಸದಸ್ಯರಲ್ಲಿ ಅನಪೇಕ್ಷೀಯ ಘಟನೆಗಳು ನಡೆಯುವುದು ನಿಮ್ಮನ್ನು ಚಿಂತೆಗೀಡು ಮಾಡಬಹುದು. ನಿದ್ರಾಹೀನತೆಯು ನಿಮ್ಮನ್ನು ತೊಂದರೆಗೀಡುಮಾಡಬಹುದು. ನೀರಿನ ವಿಚಾರದೊಂದಿಗೆ ಮತ್ತು ಮಹಿಳೆಯೊಂದಿಗೆ ವ್ಯವಹರಿಸುವಾಗ ಎಚ್ಚರದಿಂದಿರಿ. ಹಣಕಾಸು ನಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ. ನಿಮ್ಮ ಘನತೆಗೆ ಕುತ್ತು ತರುವಂತಹ ಘಟನೆಗಳು ಸಂಭವಿಸಬಹುದು.

ಕುಂಭ
ಭಾನುವಾರ, 6 ಜೂನ್
ಮಾನಸಿಕ ಒತ್ತಡದಿಂದ ಇದು ನಿಮಗೆ ಶಮನ ದೊರಕುವ ಸಾಧ್ಯತೆಯಿದೆ. ಇಂದು ನಿಮ್ಮ ದಿನವನ್ನು ಅತ್ಯಂತ ಸಂತೋಷದಿಂದಲೇ ಕಳೆಯುತ್ತೀರಿ. ಸ್ನೇಹಿತರೊಂದಿಗೆ ಮತ್ತು ಆಪ್ತರೊಂದಿಗೆ ಜೊತೆಗೂಡಲಿದ್ದೀರಿ. ಕೆಲವು ಮುಖ್ಯ ವಿಚಾರಗಳ ಬಗ್ಗೆ ಯೋಜನೆ ರೂಪಿಸಬಹುದು. ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ.

ಮೀನ
ಭಾನುವಾರ, 6 ಜೂನ್
ಇಂದು ನೀವು ಏನೇ ಮಾತನಾಡುವ ಮುನ್ನ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ.ನಿಮ್ಮ ಕಾರ್ಯದಲ್ಲಿನ ವಿಫಲತೆಯು ನಿಮ್ಮ ವಾತಾವರಣವನ್ನು ಪ್ರತಿಕೂಲವಾಗಿಸಲಿದೆ. ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಸರಿಯಾಗಿ ನೀವು ಪರೀಕ್ಷಿಸಿಕೊಳ್ಳುವ ಅಗತ್ಯವಿದೆ. ಹಣಕಾಸು ವಿಚಾರಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಅತ್ಯಂತ ಎಚ್ಚರಿಕೆವಹಿಸಿ. ನೀವು ಇಂದು ಹೆಚ್ಚು ಆಯಾಸಗೊಳ್ಳಬಹುದು. ಸಂಬಂಧಿಕರ ನಡುವಿನ ಅನಗತ್ಯ ಘಟನೆಗಳು ನಿಮ್ಮ ಮತ್ತು ಅವರ ನಡುವೆ ಋಣಾತ್ಮಕ ಸಂವೇದನೆ ಉಂಟುಮಾಡಬಹುದು. ಮಿತಿಮೀರಿದ ಆಹಾರ ಸೇವನೆಯನ್ನು ತಪ್ಪಿಸಿ.

Leave a Reply

Your email address will not be published.