ನಿತ್ಯವಾಣಿ ಸೋಮವಾರದ ರಾಶಿ ಭವಿಷ್ಯ
ಮೇಷ
ಸೋಮವಾರ, 7 ಜೂನ್
ಈ ದಿನವು ನಿಮಗೆ ಒಂದು ಸುದಿನವಾಗಲಿದೆ. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರುತ್ತೀರಿ. ಇಂದು ನಿಮ್ಮ ಕೆಲಸವನ್ನು ನೀವು ಅತ್ಯಂತ ಉತ್ಸಾಹದಿಂದ ಪೂರೈಸುತ್ತೀರಿ. ಲಕ್ಷ್ಮೀದೇವಿಯು ನಿಮ್ಮನ್ನು ಅನುಗ್ರಹಿಸಬಹುದು. ನೀವು ನಿಮ್ಮ ದಿನವನ್ನು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಕಳೆಯಬಹುದು. ನಿಮ್ಮ ತಾಯಿಯಿಂದ ಪ್ರಯೋಜನವಾಗಲಿದೆ. ನಿಮ್ಮ ಸ್ಥಳದಲ್ಲಿ ಸ್ನೇಹಿತರು ಮತ್ತು ಸಂಬಂಧಿಗಳ ಉಪಸ್ಥಿತಿಯು ನಿಮ್ಮ ವಾತಾವರಣವನ್ನು ಆನಂದಮಯವಾಗಿರಿಸುತ್ತದೆ
ವೃಷಭ
ಸೋಮವಾರ, 7 ಜೂನ್
ಜಾಗರೂಕತೆಯು ಇಂದು ನಿಮಗೆ ಸರಿಯಾದ ಪದ ಎಲ್ಲಾ ರೀತಿಯ ತೊಂದರೆಗಳು ಇಂದು ನಿಮ್ಮನ್ನು ಚಿಂತೆಗೀಡುಮಾಡುತ್ತವೆ. ಅನಾರೋಗ್ಯ ತೊಂದರೆ ಉಂಟಾಗಬಹುದು. ದೃಷ್ಟಿಗೆ ಸಂಬಂಧಿಸಿದ ತೊಂದರೆಗಳು ಕಂಡುಬರಬಹುದು. ನಿಮ್ಮ ಕುಟುಂಬ ಸದಸ್ಯರ ಯಾವುದೇ ವಿರೋಧಕ್ಕೆ ಇಂದು ನೀವು ಬಗ್ಗಬೇಡಿ. ಇಂದು ನೀವು ಕೈಗೆತ್ತಿಕೊಳ್ಳುವ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ನಿಮ್ಮ ಖರ್ಚುವೆಚ್ಚಗಳು ನಿಮ್ಮ ನಿರೀಕ್ಷೆಗಳಿಗಿಂತ ಹೆಚ್ಚಾಗಿರುತ್ತದೆ. ನೀವು ಯಶಸ್ಸನ್ನು ಕಾಣಬೇಕಾದರೆ ನೀವು ನಿಜವಾಗಿಯೂ ಕಠಿಣ ಶ್ರಮಪಡಲೇಬೇಕು. ಅಪಘಾತದ ಸಂಭಾವ್ಯತೆಯಿದೆ. ಎಚ್ಚರದಿಂದಿರಿ.
ಮಿಥುನ
ಸೋಮವಾರ, 7 ಜೂನ್
ಇಂದು ನಿಮಗೆ ವಿಫುಲ ಲಾಭವಾಗಲಿದೆ, ವಿವಾಹದ ಯೋಜನೆಯಲ್ಲಿರುವವರಿಗೆ ಸೂಕ್ತ ಸಂಬಂಧಗಳು ಕೂಡಿಬರಲಿವೆ. ಧನಲಾಭ ಉಂಟಾಗುವ ಸಾಧ್ಯತೆಯಿದೆ. ಸ್ನೇಹಿತರೊಂದಿಗಿನ ಭೇಟಿಯು ಸಂತೋಷದಿಂದ ಕೂಡಿರುತ್ತದೆ. ಮತ್ತು ನಿಮಗೆ ಅವರಿಂದ ಪ್ರಯೋಜನ ಉಂಟಾಗುವ ಸಾಧ್ಯತೆಯಿದೆ. ಅಲ್ಲದೆ, ಒಡಹುಟ್ಟಿದವರಿಂದ, ಪತ್ನಿಯಿಂದ ಮತ್ತು ಮಗನಿಂದಲೂ ನಿಮಗೆ ಪ್ರಯೋಜನ ಉಂಟಾಗಲಿದೆ. ಸ್ನೇಹಿತೆಯರು ನಿಮ್ಮಿಂದ ಸಹಾಯ ಕೇಳಬಹುದು ಮತ್ತು ಅದರಿಂದಾಗಿ ನಿಮಗೆ ಬಿಡುವಿಲ್ಲದಂತಾಗಬಹುದು. ನಿಮ್ಮ ಮಕ್ಕಳು ನಿಮಗೆ ಶುಭಸುದ್ದಿಯನ್ನು ತರುತ್ತಾರೆ. ವೃತ್ತಿಕ್ಷೇತ್ರದಲ್ಲಿ ನಿಮಗೆ ಲಾಭ ಉಂಟಾಗಲಿದೆ. ನಿಮ್ಮ ಸುತ್ತಲೂ ಮಹಿಳೆಯರು ಆವರಿಸಿರುತ್ತಾರೆ ಮತ್ತು ಇದು ನಿಮ್ಮ ದಿನವನ್ನು ಉತ್ಸಾಹದ ದಿನವನ್ನಾಗಿಸುತ್ತದೆ.
ಕರ್ಕಾಟಕ
ಸೋಮವಾರ, 7 ಜೂನ್
ಈ ದಿನವು ನಿಮ್ಮ ಮನಸ್ಥಿತಿಗೆ ಒಪ್ಪುವ ರೀತಿಯಲ್ಲಿರುವಂತಿದೆ. ನೀವು ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುವಿರಿ. ನಿಮ್ಮ ಮೇಲಾಧಿಕಾರಿಗಳು ನಿಮ್ಮೊಂದಿಗೆ ಸಂತೋಷದಲ್ಲಿರುವ ಸಾಧ್ಯತೆಯಿದೆ. ಬಡ್ತಿ ಸಿಗಲಿದೆ. ನೀವು ನಿಮ್ಮ ಮೇಲಾಧಿಕಾರಿಗಳೊಂದಿಗೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಮನೆಯ ಅಲಂಕಾರದಲ್ಲಿನ ನಿಮ್ಮ ಆಸಕ್ತಿಯು ಮನೆಯ ಅಂದವನ್ನು ಬದಲಾಯಿಸುವಂತೆ ಪ್ರೇರೇಪಿಸುವ ಸಾಧ್ಯತೆಯಿದೆ. ಕಚೇರಿ ನಿಮಿತ್ತ ಪ್ರವಾಸ ತೆರಳುವ ಸಂಭವವಿದೆ. ತಾಯಿಯೊಂದಿಗಿನ ನಿಮ್ಮ ಸಂಬಂಧವು ಅನ್ಯೋನ್ಯವಾಗಿರಲಿದೆ. ಸರಕಾರಿ ಲಾಭ ಮತ್ತು ಪ್ರಯೋಜನಗಳು ಉಂಟಾಗಲಿವೆ. ದಿನಪೂರ್ತಿ ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯದಿಂದಿರುತ್ತೀರಿ.
ಸಿಂಹ
ಸೋಮವಾರ, 7 ಜೂನ್
ಈ ದಿನವು ನಿಮಗೆ ಸಾಮಾನ್ಯ ದಿನವಾಗಲಿದೆ, ಇಂದು ನೀವು ನಿಗದಿಪಡಿಸಿದ ಗುರಿಯನ್ನು ಸಾಧಿಸಲು ಪ್ರಯತ್ನಿಸುವಿರಿ ಮತ್ತು ಅದರಲ್ಲಿ ಸಫಲರಾಗುವಿರಿ. ನಿಮ್ಮ ಮಾರ್ಗವು ನಿರ್ದಿಷ್ಟ ಗುರಿಯನ್ನು ಹೊಂದಿರುವ ಸಾಧ್ಯತೆಯಿದೆ. ಧಾರ್ಮಿಕ ಚಟುವಟಿಕೆಗಳು ನಿಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ. ಯಾತ್ರಾಸ್ಥಳಕ್ಕೆ ತೆರಳಲು ಯೋಜನೆ ರೂಪಿಸಬಹುದು. ನೀವು ಸ್ವಲ್ಪ ಮಟ್ಟಿನ ದುರಾಕ್ರಮಣಕ್ಕೆ ಒಳಗಾಗಬಹುದು. ವಿದೇಶಗಳಲ್ಲಿ ನೆಲೆಸಿರುವ ಸಂಬಂಧಿಕರಿಂದ ಶುಭ ಸುದ್ದಿಯನ್ನು ನಿರೀಕ್ಷಿಸಿ.ಮಾನಸಿಕವಾಗಿ ಸ್ವಲ್ಪಮಟ್ಟಿಗೆ ಗೊಂದಲವಾಗಿರುವಂತೆ ಅನಿಸಬಹುದು. ಮಕ್ಕಳಿಗೆ ಸಂಬಂಧಿಸಿದ ಚಿಂತೆಗಳು ನಿಮಗೆ ತೊಂದರೆ ನೀಡಲಿವೆ. ಉದ್ಯಮಿಗಳು ಇಂದು ಅಡೆತಡೆಗಳನ್ನು ಎದುರಿಸುವ ಸಾಧ್ಯತೆಯಿದೆ.
ಕನ್ಯಾ
ಸೋಮವಾರ, 7 ಜೂನ್
ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಇಂದು ಶುಭದಿನ.
ನೀವು ನಿಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸಬೇಕು. ವಿಶೇಷವಾಗಿ ಜಂಕ್ ಫುಡ್ ಮತ್ತು ರೆಸ್ಟೋರೆಂಟ್ ಆಹಾರವನ್ನು ನೀವು ದೂರ ಇರಲೇಬೇಕು.ಮತ್ತು ನಿಮ್ಮ ಸಿಟ್ಟು ಒಮ್ಮೆಗೇ ಭುಗಿಲೇಳುವ ಸಾಧ್ಯತೆಯಿರುವುದರಿಂದ ನಿಮ್ಮ ನಾಲಗೆಯ ಮೇಲೆ ಹಿಡಿತವಿರಲಿ. ಕುಟುಂಬ ಸದಸ್ಯರೊಂದಿಗೆ ಉದ್ರೇಕದ ಚರ್ಚೆಯಲ್ಲಿ ತೊಡಗುವುದನ್ನು ತಪ್ಪಿಸಿ. ಸಾಧ್ಯವಿದ್ದರೆ ನೀರಿನಿಂದ ದೂರವಿರಿ. ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ. ಅನೈತಿಕ ಅಥವಾ ಸರಕಾರಿ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಿ. ಕೊನೆಯದಾಗಿ ವಾಗ್ವಾದಗಳಿಂದ ದೂರಿವಿರಿ.
ತುಲಾ
ಸೋಮವಾರ, 7 ಜೂನ್
ನೀವು ನಿಮ್ಮ ದಿನವನ್ನು ಖುಷಿಯಿಂದ ಕಳೆಯುವಿರಿ. ವಿವಿಧ ರೀತಿಯ ಜನರು ನಿಮ್ಮ ಸುತ್ತಲಿರುವ ಸಾಧ್ಯತೆಯಿದೆ. ಅವರ ಸಾಂಗತ್ಯವು ನಿಮ್ಮನ್ನು ಉಲ್ಲಾಸಭರಿತರನ್ನಾಗಿಸುತ್ತದೆ. ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರು ನಿಮ್ಮ ಪ್ರವಾಸವನ್ನು ಅವಿಸ್ಮರಣೀಯವಾಗಿಸುತ್ತಾರೆ. ಹೊಸ ಉಡುಪು ಖರೀದಿಸುವ ಸಾಧ್ಯತೆಯಿದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ದಿನಪೂರ್ತಿ ನೀವು ಆರೋಗ್ಯದಿಂದಿರುತ್ತೀರಿ. ಸಾಮಾಜಿಕವಾಗಿ, ನೀವು ಗೌರವ ಸಂಪಾದಿಸುವಿರಿ. ನಿಮ್ಮ ಸಂಗಾತಿಯೊಂದಿಗಿನ ದೈಹಿಕ ಅನ್ಯೋನ್ಯತೆಯು ಇಂದು ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಸಂಜೆಯನ್ನು ಕಳೆಯಲು ಇಂದು ಸೂಕ್ತ ದಿನ.
ವೃಶ್ಚಿಕ
ಸೋಮವಾರ, 7 ಜೂನ್
ನಿಮ್ಮ ಮನೆಯ ವಾತಾವರಣವು ಶಾಂತಿ ಮತ್ತು ಗೆಲುವಿನಿಂದ ತುಂಬಿರುತ್ತದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಇಂದು ನೀವು ಆರೋಗ್ಯದಿಂದಿರುತ್ತೀರಿ. ಆಡಂಬರ ವಸ್ತುಗಳಿಗಾಗಿ ವೆಚ್ಚ ಅಥವಾ ದುಂದುವೆಚ್ಚ ಮಾಡುವ ಸಾಧ್ಯವಿಲ್ಲ. ಅನಾರೋಗ್ಯಪೀಡಿತರಿಗೆ ನೋವಿನಿಂದ ಬಿಡುವು ಸಿಗಲಿದೆ.ನಿಮ್ಮ ಪ್ರತಿಸ್ಪರ್ಧಿಗಳು ಸೋಲೊಪ್ಪಿಕೊಳ್ಳುವರು. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ಪಡೆಯುವಿರಿ. ನಿಮ್ಮ ಹೆತ್ತವರಿಂದ ಸುದ್ದಿಯನ್ನು ನಿರೀಕ್ಷಿಸಿ. ಧನಲಾಭದ ಯೋಗವಿದೆ. ಅಪೂರ್ಣಗೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸುವಿರಿ.
ಧನು
ಸೋಮವಾರ, 7 ಜೂನ್
ಇಂದು ಪ್ರಯಾಣವನ್ನು ತಪ್ಪಿಸುವಂತೆ ನಿಮ್ಮ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿ ವಿಚಾರಗಳು ನಿಮ್ಮ ದಿನಪೂರ್ತಿ ವ್ಯಾಕುಲತೆಯಲ್ಲಿರಿಸುತ್ತದೆ. ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ನೀವು ಸಫಲರಾಗದೇ ಇರುವುದರಿಂದ ನಿಮ್ಮ ದುರಾಕ್ರಮಣ ಸ್ವಭಾವದ ಮೇಲೆ ನಿಯಂತ್ರಣವಿರಿಸಿ. ಇಂದು ನೀವು ಭ್ರಮಾಚಿತ್ರವನ್ನು ಕಲ್ಪಿಸಿಕೊಳ್ಳಬಹುದು.ಸಾಹಿತ್ಯದ ಕಡೆಗೆ ಒಲವು ತೋರುವ ಸಾಧ್ಯತೆಯಿದೆ. ನಿಮ್ಮ ಪ್ರೀತಿಪಾತ್ರರೊಂದಿಗಿನ ಕ್ಷಣಗಳು ರೋಮಾಂಚನಕಾರಿಯಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ವಿಹಾರಕ್ಕೆ ತೆರಳಬಹುದು. ಕೊನೆಯದಾಗಿ, ಬೌದ್ಧಿಕ ಚರ್ಚೆಯಲ್ಲಿ ತೊಡಗದಂತೆ ಇರುಹುದು ನಿಮಗೆ ಸಲಹೆ
ಮಕರ
ಸೋಮವಾರ, 7 ಜೂನ್
ಇಂದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವು ಉತ್ತಮವಾಗಿರುವುದಿಲ್ಲ. ನಿಮ್ಮ ಕುಟುಂಬದಲ್ಲಿನ ಅಸ್ಥಿರ ವಾತಾವರಣವು ನಿಮ್ಮನ್ನು ಗೃಹವಿರಹದಲ್ಲಿರಿಸಬಹುದು. ಶಕ್ತಿ ಮತ್ತು ಉದ್ವೇಗಶೂನ್ಯರಾದಂತೆ ಅನಿಸಬಹುದು. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂಘರ್ಷಕ್ಕೆ ಒಳಗಾಗಬಹುದು ಮತ್ತು ಇದು ಒಲವಿಲ್ಲದ ವಾತಾವರಣವನ್ನು ಸೃಷ್ಟಿಮಾಡುತ್ತದೆ. ಎದೆ ನೋವು ನಿಮಗೆ ತೊಂದರೆಯನ್ನುಂಟುಮಾಡಬಹುದು. ಇಂದು ನೀವು ಆರಾಮ ನಿದ್ರೆ ಮಾಡುವಿರಿ. ನಿಮ್ಮ ಹೆಸರಿಗೆ ಕಳಂಕ ತರುವಂತಹ ಪರಿಸ್ಥಿತಿಗಳಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸಿ. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರುವಂತೆ. ನೀರಿನಿಂದ ದೂರವಿರಿ. ಅಡ್ಡಮಾರ್ಗ ಹಿಡಿಯುವ ಮನೋಭಾವ ಹಾಗೂ ಆವೇಗದಿಂದಾಗಿ ಇಂದು ನೀವು ವ್ಯಾಕುಲತೆಗೆ ಒಳಗಾಗಬಹುದು.
ಕುಂಭ
ಸೋಮವಾರ, 7 ಜೂನ್
ಮಾನಸಿಕವಾಗಿ ನಿರಾಳವಾಗಿರುವಂತೆ ಇಂದು ನಿಮಗೆ ಅನಿಸಬಹುದು . ಒಮ್ಮೆ ನಿಮ್ಮಲ್ಲಿ ಚಿಂತೆಯ ಕಾರ್ಮೋಡ ತುಂಬಿದರೂ, ಉತ್ಸಾಹವು ನಿಮ್ಮಲ್ಲಿ ಮಿಂಚುತ್ತಿರುತ್ತದೆ. ನಿಮ್ಮ ಒಡಹುಟ್ಟಿದವರೊಂದಿಗೆ ಸಮಾರಂಭ ಆಯೋಜಿಸಬಹುದು ಅಥವಾ ಪ್ರವಾಸ ಕೈಗೊಳ್ಳಬಹುದು. ಫಲವಾಗಿ, ಅವರೊಂದಿಗೆ ನೀವು ಖುಷಿಯ ಸಮಯವನ್ನು ಕಳೆಯುತ್ತೀರಿ. ಸ್ನೇಹಿತರು ಹಾಗೂ ಪ್ರೀತಿಪಾತ್ರರನ್ನು ಭೇಟಿಯಾಗುವ ಸಾಧ್ಯತೆಯಿದೆ. ಹತ್ತಿರದಲ್ಲೇ ಎಲ್ಲಾದರೂ ವಿಹಾರಕ್ಕೆ ತೆರಳಬಹುದು. ನಿಮ್ಮ ಪ್ರತಿಸ್ಪರ್ಧಿಗಳು ಸೋಲೊಪ್ಪಿಕೊಳ್ಳುತ್ತಾರೆ. ಮಹಿಳಾ ಅದೃಷ್ಟವು ನಿಮ್ಮಕಡೆಗಿದೆ. ನಿಮ್ಮ ಸಂಗಾತಿಯ ಲೈಂಗಿಕ ಸಾಮೀಪ್ಯವು ನಿಮ್ಮನ್ನು ಖುಷಿಯಲ್ಲಿರಿಸುತ್ತದೆ.
ಮೀನ
ಸೋಮವಾರ, 7 ಜೂನ್
ಮಿತಿಮೀರಿದ ವೆಚ್ಚವನ್ನು ನಿಯಂತ್ರಣದಲ್ಲಿರುವಂತೆ ಬೇರೆಯವರ ಮನಸ್ಸಿಗೆ ನೋವುಂಟುಮಾಡುವುದನ್ನು ತಪ್ಪಿಸಲು, ನಿಮ್ಮ ಮಾತು ಹಾಗೂ ದುರಾಕ್ರಮಣದ ಬಗ್ಗೆ ಹತೋಟಿಯಿಡಬೇಕು. ಹಣಕಾಸಿಗೆ ಸಂಬಂಧಿಸಿದ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವು ದಿನವಿಡೀ ಸಾಮಾನ್ಯ ಸ್ಥಿತಿಯಲ್ಲಿರುತ್ತದೆ. ಋಣಾತ್ಮಕ ಆಲೋಚನೆಗಳು ನಿಮ್ಮೊಳಗೆ ಸೇರಿಕೊಳ್ಳಲು ಬಿಡಬೇಡಿ. ಮಿತಿಮೀರಿದ ಆಹಾರ ಸೇವನೆಯನ್ನು ತಪ್ಪಿಸಿ.