ನಿತ್ಯವಾಣಿ ಬುಧವಾರದ ರಾಶಿ ಭವಿಷ್ಯ

ನಿತ್ಯವಾಣಿ ಬುಧವಾರದ ರಾಶಿ ಭವಿಷ್ಯ

ಮೇಷ
ಬುಧವಾರ, 9 ಜೂನ್
ಇಂದು ನಿಮ್ಮ ದಿನ ಸಾಮಾನ್ಯವಾಗಿರುತ್ತದೆ, ವಿಶೇಷವಾಗಿ ಏನೂ ಇರುವುದಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ಮಾಮೂಲಿ ದಿನಚರಿ. ಆರೋಗ್ಯ ಎಂದಿನಂತಿದ್ದು ಏರುಪೇರು ಉಂಟಾಗುವುದಿಲ್ಲ. ಆದರೆ, ಅತ್ಯಂತ ಉತ್ಸಾಹದಿಂದಲೂ ಇರುವುದಿಲ್ಲ. ಏರುತ್ತಿರುವ ವೆಚ್ಚಗಳು ನಿಮ್ಮನ್ನು ಅಕಸ್ಮತ್ತಾಗಿ ಪೀಡಿಸುತ್ತದೆ ಹಾಗೂ ನಿಮ್ಮನ್ನು ಬೆಚ್ಚಿ ಬೀಳಿಸುತ್ತದೆ ಅಥವಾ ದಿಗ್ಭ್ರಮೆಗೊಳಿಸುತ್ತದೆ. ಅದರ ಚಲನವಲನಗಳ ಮೇಲೆ ಗಮನವಿಟ್ಟಿರಿ ಆದರೆ ಅದು ಒಂದು ಅಂಕೆ ಮೀರಿ ನಿಮಗೆ ತೊಂದರೆ ಕೊಡದಂತೆ ನೋಡಿಕೊಳ್ಳಿ. ಹಣಕಾಸು ಪರಿಸ್ಥಿತಿಯಲ್ಲಿ ಇನ್ನೂ ಕುಸಿತ ಉಂಟಾಗುವುದಿಲ್ಲ. ಋಣಾತ್ಮಕ ಚಿಂತನೆಗಳಿಂದ ದೂರವಿರಿ. ಮತ್ತು ವಾರದ ಕೊನೆಯ ರಾತ್ರಿಯಾಗಿದ್ದರೂ, ಮನೆಯಲ್ಲೇ ಅಡುಗೆ ತಯಾರಿಸಲು ನಿರ್ಧರಿಸಿ.ಸಂಗಾತಿಯೊಂದಿಗಿನ ಸಂಭಾಷಣೆಯ ವೇಳೆ ವಾಗ್ವಾದವನ್ನು ಆದಷ್ಟು ತಪ್ಪಿಸಿ ಮತ್ತು ಮನಸ್ಸಿಗೆ ನೋವಾಗುವಂತಹ ವಿಚಾರವನ್ನು ಹೇಳುವ ವೇಳೆ ನಿಮ್ಮ ಉದ್ವೇಗವನ್ನು ನಿಯಂತ್ರಿಸಿಕೊಳ್ಳಿ. ಮಹಿಳಾ ಸಹ ಉದ್ಯೋಗಿಗಳಿಂದ ನಿಮಗೆ ಲಾಭ ಉಂಟಾಗುವ ಸಂಭವವಿದೆ.

ವೃಷಭ
ಬುಧವಾರ, 9 ಜೂನ್
ಇಂದು ನೀವು ಆರೋಗ್ಯಕರವಾಗಿರುವಿರಿ. ಇದು ಮುಂಜಾನೆಯ ಯೋಗ ತರಗತಿಯಿಂದಲೂ ಆಗಿರಬಹುದು ಅಥವಾ ಡಿಟಾಕ್ಸ್ ಡಯಟ್‌ನಿಂದಲೂ ಆಗಿರಬಹುದು. ಕಾರಣ ಏನೇ ಇರಲಿ ಫಲವನ್ನು ಆನಂದಿಸಿ. ನೀವು ತುಂಬಾ ಹಗುರ ಹಾಗೂ ಖುಷಿ ಅನುಭವಿಸುತ್ತೀರಿ. ಈ ಉತ್ಸಾಹವು ನಿಯೋಜಿತ ಕಾರ್ಯವನ್ನು ಪೂರ್ಣಗೊಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಮತ್ತು ನಿಮ್ಮ ಮನಸ್ಸು ಸ್ಥಿರವಾಗಿರುವುದರಿಂದ ನಿಮಗೆ ಎಂತಹ ಸಮಸ್ಯೆಗೂ ಯತೋಚಿತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಆತ್ಮವಿಶ್ವಾಸದೊಂದಿಗೆ ನೀವು ಯಾವತ್ತೂ ಲವಲವಿಕೆಯಿಂದಿರಿ, ಇದು ಹಣಕಾಸು ವಿಚಾರಗಳಲ್ಲಿ ನಿಮಗೆ ವಿವೇಚನೆಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಇವುಗಳು ಯಶಸ್ವಿಯಾಗಿರುತ್ತದೆ. ಮನೆ ಮತ್ತು ಕಚೇರಿಯಲ್ಲಿನ ಚರ್ಚೆಗಳು ತೃಪ್ತಿಕರವಾಗಿರುತ್ತದೆ.

ಮಿಥುನ
ಬುಧವಾರ, 9 ಜೂನ್
ಈ ದಿನವು ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಕ್ಷೀಣವಾಗಿಸುತ್ತದೆ. ನೀವು ಕಿರಿಕಿರಿ ಮತ್ತು ಸತ್ವವಿಲ್ಲದ ಭಾವನೆಯನ್ನು ಹೊಂದುತ್ತೀರಿ. ನಿಮ್ಮ ಆರೋಗ್ಯದಲ್ಲಿ ವಿಶೇಷವಾಗಿ ಕಣ್ಣಿನಲ್ಲಿ ತೊಂದರೆ ಉಂಟಾಗಬಹುದು. ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗಿನ ಸಂಬಂಧಗಳು ಹಿತಕರವಲ್ಲದ ತಿರುವುಗಳನ್ನು ಪಡೆಯಬಹುದು. ನೀವು ಏನೇ ಮಾಡುವುದಿದ್ದರೂ, ಅಥವಾ ಹೇಳುವುದಿದ್ದರೂ ಜಾಗರೂಕರಾಗಿರಿ. ಮನಸ್ತಾಪಗಳು ಉಂಟಾಗುವ ಸಾಧ್ಯತೆಯು ದಟ್ಟವಾಗಿದೆ. ಅನಿರೀಕ್ಷಿತ ಘಟನೆಗಳಿಗೆ ಸಿದ್ಧರಾಗಿರಿ. ವೆಚ್ಚವು ನಿಮ್ಮ ಆದಾಯವನ್ನು ಮೀರುವ ನಿರೀಕ್ಷೆಯಿದೆ. ಚಿಂತೆಗಳು ನಿಮ್ಮನ್ನು ಪ್ರಕ್ಷುಬ್ಧ ಹಾಗೂ ತಲ್ಲಣಗೊಳಿಸುತ್ತದೆ. ದುಂದುವೆಚ್ಚವನ್ನು ತಪ್ಪಿಸಲು ಸಾಧ್ಯವಾಗಬಹುದು. ಜಗಳ ಅಥವಾ ವ್ಯಾಜ್ಯಗಳಲ್ಲಿ ಸಿಲುಕಬೇಡಿ. ಪ್ರಾರ್ಥನೆ ಮತ್ತು ಧ್ಯಾನವು ನಿಮಗೆ ಖಂಡಿತವಾಗಿಯೂ ಸಹಾಯ ಮಾಡಲಿದೆ.

ಕರ್ಕಾಟಕ
ಬುಧವಾರ, 9 ಜೂನ್
ಇಂದು ನಿಮಗೆ ಖುಷಿ ತುಂಬಿದ ದಿನವಾಗಿರುತ್ತದೆ, ವ್ಯಾಪಾರ ಮತ್ತು ಉದ್ಯಮ ವ್ಯವಹಾರಗಳಲ್ಲಿ ನೀವು ಯಶಸ್ಸು ಮತ್ತು ವಸ್ತು ಪ್ರಯೋಜನಗಳನ್ನು ಪಡೆಯುವಿರಿ. ನಿಮ್ಮ ಆದಾಯ ಮೂಲದಲ್ಲಿ ಹೆಚ್ಚಳ ಉಂಟಾಗಲಿದೆ. ಮತ್ತು ಇದನ್ನು ನೀವು ಆನಂದಿಸಲು ಬಯಸಬಹುದು. ಈ ಹರ್ಷಾಚರಣೆಯು ಕುಟುಂಬ ಅಥವಾ ಸ್ನೇಹಿತರೊಂದಿಗೆ ಸಣ್ಣ ಪ್ರವಾಸವೂ ಆಗಿರಬಹುದು ಅಥವಾ ವ್ಯವಹಾರ ಮತ್ತು ನಲಿವು ಮಿಶ್ರಣದ ಸಂತೋಷಕೂಟವೂ ಆಗಿರಬಹುದು.ನಿಮ್ಮ ಮಗ ಅಥವಾ ನಿಮ್ಮಕ್ಕಿಂತ ಕಿರಿಯವರೊಂದಿಗೆ ಈಜು ಮುಂತಾದವುಗಳ ಮೂಲಕ ಮನಸ್ಸನ್ನು ಉಲ್ಲಾಸಗೊಳ್ಳಲು ಇದೊಂದು ಉತ್ತಮ ದಿನ. ಧ್ಯಾನಕ್ಕಾಗಿ ನದಿತೀರ ಅಥವಾ ಸಮುದ್ರತೀರಕ್ಕೆ ತೆರಳಲು ನೀವು ಉದ್ದೇಶಿಸಬಹುದು. ಬಂಡವಾಳ ವೃದ್ಧಿಗೊಳಿಸಲು, ಸ್ನೇಹಿತರ ಭೇಟಿಗೆ ಮತ್ತು ಆರೋಗ್ಯ ಜೀವನಕ್ರಮ ಪ್ರಾರಂಭಕ್ಕೆ ಇದು ಉತ್ತಮ ಸಮಯ.

ಸಿಂಹ
ಬುಧವಾರ, 9 ಜೂನ್
ನೀವು ಶ್ರೇಷ್ಠ ವ್ಯಕ್ತಿ! ಇದನ್ನು ನೀವು ನಿಜವಾಗಿಯೂ ನಂಬುತ್ತೀರಿ ಮತ್ತು ಜನರೊಂದಿಗಿನ ಎಲ್ಲಾ ವ್ಯವಹಾರಗಳಲ್ಲಿ ತೋರಿಸಿಕೊಳ್ಳುತ್ತೀರಿ. ಏನೇ ಆದರೂ, ವಿಶ್ವಾಸದ ಕೊರತೆಯನ್ನು ನಿಮ್ಮ ಸಿಂಹವು ಯಾವತ್ತೂ ಹೊಂದಿರುವುದಿಲ್ಲ ಆದರೆ, ಇಂದು ನೀವು ಸಂಪೂರ್ಣ ಆತ್ಮವಿಶ್ವಾಸದಿಂದಿರುತ್ತೀರಿ ಮತ್ತು ನಿಮ್ಮ ಮನೋಬಲದಿಂದ ಈ ಮನಸ್ಥಿತಿಯು ಇನ್ನೂ ಹೆಚ್ಚಳಗೊಳ್ಳುವುದು. ಈ ಎರಡರ ಅದ್ಭುತ ಸಂಯೋಜನೆಯು ಕಲೆ, ಕ್ರೀಡೆ. ವ್ಯವಹಾರ ಮುಂತಾದ ಯಾವುದೇ ಕ್ಷೇತ್ರದಲ್ಲೂ ನಿಮ್ಮನ್ನು ಉತ್ಕೃಷ್ಟಗೊಳಿಸುವಲ್ಲಿ ಸಹಕಾರಿಯಾಗಲಿದೆ. ಬಡ್ತಿ, ತಂದೆಯಿಂದ ಲಾಭ, ಪದೋನ್ನತಿ, ಗೌರವ ವೃದ್ಧಿ ಇವೆಲ್ಲವೂ ಸಿಗಲಿದೆ. ಆನಂದಿಸಿ!. ಯಾವುದೇ ಕಾನೂನು ಸಂಬಂಧಿ ಅಥವಾ ಅಧಿಕಾರಿ ಸಂಬಂಧಿ ಕಾರ್ಯಗಳ ಪೂರ್ಣಗೊಳಿಸುವಿಕೆಗೆ ಇದು ಉತ್ತಮ ದಿನ.

ಕನ್ಯಾ
ಬುಧವಾರ, 9 ಜೂನ್
ಅದೃಷ್ಟದಾಯಕ ದಿನವು ನಿಮಗೆ ಕಾದಿದೆ, ನೀವು ಧಾರ್ಮಿಕ ಕ್ಷೇತ್ರಗಳಿಗೆ ಅಥವಾ ಯಾತ್ರಾಸ್ಥಳಗಳಿಗೆ ತೆರಳಬೇಕೆಂಬ ನಿಮ್ಮ ಬಹುಕಾಲದ ಇಚ್ಛೆಯನ್ನು ಪೂರ್ಣಗೊಳಿಸಲು ಇದು ಸಕಾಲವಾಗಿದೆ. ಸಂಬಂಧಿಕರ ಮನೆಗೆ ಭೇಟಿ ನೀಡಲು ನೀವು ಯೋಜನೆ ರೂಪಿಸಬಹುದು ಮತ್ತು ಇದೊಂದು ಅತ್ಯಂತ ಸಂತಸದ ಅನುಭವವಾಗಲಿದೆ. ಗೆಳತಿಯಿಂದ ಅಥವಾ ಸಂಬಂಧಿಕರಿಂದ ಹೇರಳ ಲಾಭ ಉಂಟಾಗಲಿದೆ. ಅವರೊಂದಿಗೆ ಬೆರೆಯಿರಿ. ಜೊತೆಗೆ, ಇತ್ತೀಚೆಗೆ ನಿಮ್ಮೊಂದಿಗೆ ಸಂಪರ್ಕದಲ್ಲಿರವರನ್ನೂ ಕಡೆಗಣಿಸಬೇಡಿ. ಅವರನ್ನು ಸಂಪರ್ಕಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ. ವಿದೇಶಕ್ಕೆ ತೆರಳಲು ಬಯಸಿದ್ದರೆ ಇದು ಸೂಕ್ತ ಸಮಯವಾಗಿದೆ. ವಿದೇಶದಲ್ಲಿ ನೆಲೆಸಿರುವ ನಿಮ್ಮ ಆಪ್ತರಿಂದ ಸಂತೋಷದ ವಿಚಾರವೊಂದು ಸದ್ಯದಲ್ಲಿಯೇ ಕೇಳಲಿದ್ದೀರಿ. ನಿಮ್ಮ ಒಡಹುಟ್ಟಿದವರು ತೊಂದರೆಗಳಿಂದ ಹೊರಬರಲು ನಿಮಗೆ ಸಹಾಯಮಾಡಬಹುದು. ಹಣಕಾಸಿನ ವಿಚಾರದಲ್ಲಿ ಎಲ್ಲವೂ ಅನುಕೂಲಕರವಾಗಿಯೇ ಇರಲಿದೆ.

ತುಲಾ
ಬುಧವಾರ, 9 ಜೂನ್
ನಿಮ್ಮ ಇಂದಿನ ಎಲ್ಲಾ ಮಾತುಕತೆಯನ್ನು ಸರಿಯಾಗಿ ಪರಿಶೀಲಿಸುವಂತೆ, ನೀವು ಮಾತುಕತೆ ನಡೆಸುವ ಜನರು ಅಧಿಕಾರದಿಂದ ಕೂಡಿರಬಹುದು ಅಥವಾ ಅವರ ವರ್ತನೆಯನ್ನು ನಿಮಗೆ ಸಹಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು. ಇದು ನಿಮ್ಮ ಸಿಡುಕಿಗೆ ಕಾರಣವಾಗಬಹುದು. ನಿಮ್ಮ ಕ್ಷಣಿಕ ಸಿಟ್ಟನ್ನು ನಿಯಂತ್ರಿಸಿ. ಕ್ರಾಂತಿಕಾರಿ ಆಲೋಚನೆಗಳಿಂದ ದೂರವಿರಿ. ಹಲವಾರು ತಪ್ಪುಗಳ ಪರಾಮರ್ಷೆಯಿಂದ ಹೆಚ್ಚು ಪ್ರೌಢ ಹಾಗೂ ಪ್ರಜ್ಞಾವಂತರಾಗುವಿರಿ. ನೀವು ಹೊಸ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದು, ಮೊದಲ ನೋಟದಲ್ಲೇ ನೀವು ಅವರಿಗೆ ಆಕರ್ಷಿತರಾಗಬಹುದು. ಎಚ್ಚರದಿಂದಿರಿ. ಯಾರನ್ನೂ ಅವರ ಹೊರನೋಟದಿಂದ ಅಳೆಯಬೇಡಿ. ಹೊಸ ಸಂಬಂಧಗಳು ವಿಶ್ವಾಸಾರ್ಹವಲ್ಲ. ನಿಮ್ಮ ನೈತಿಕತೆ ಮತ್ತು ಮೌಲ್ಯಗಳಿಗೆ ವಿರುದ್ಧವಾದ ಕಾರ್ಯವನ್ನು ಮಾಡುವಂತೆ ಅವರು ನಿಮ್ಮನ್ನು ಪ್ರಚೋದಿಸಬಹುದು.ನಿಮ್ಮ ಧಾರ್ಮಿಕತೆಯಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಿ ಮತ್ತು ಹಣ ಉಳಿತಾಯ ಮಾಡಿ.

ವೃಶ್ಚಿಕ
ಬುಧವಾರ, 9 ಜೂನ್
ನಿಮ್ಮ ಹಿಂಜರಿಕೆ ಬಿಟ್ಟು ಪೂರ್ತಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಂತೆ, ಒಂದು ಅಥವಾ ಎರಡು ದಿನದ ಮಟ್ಟಿದೆ ದೈನಂದಿನ ಎಲ್ಲಾ ಕಾರ್ಯಗಳನ್ನು ಬಿಟ್ಟು ನಿಮಗಾಗಿ ಕಾಯುತ್ತಿರುವ ಖುಷಿ, ನಲಿವು ಮತ್ತು ನಗುವಿನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮ ದಿನವನ್ನು ಆನಂದಿಸಿ. ಸಣ್ಣ ಪ್ರವಾಸ ಕೈಗೊಳ್ಳಿ, ಮ್ಯೂಸಿಯಂ ಭೇಟಿ ನೀಡಿ. ನಿಮ್ಮ ಸ್ನೇಹಿತರೊಂದಿಗೆ ಕಾಫಿ ಹಂಚಿಕೊಂಡು ಹರಟೆ ಹೊಡೆಯಿರಿ. ಮನೋರಂಜನೆ, ಕುಡಿತ ಮತ್ತು ಸ್ವಾದಿಷ್ಟ ತಿಂಡಿ ತಿನಿಸುಗಳು ನಿಮ್ಮ ದಿನವನ್ನು ಆನಂದಮಯವಾಗಿಸುತ್ತದೆ. ಮತ್ತು ಈ ಸಂವಾದವು ವರಿಷ್ಠರು ಮತ್ತು ಸಹೋದ್ಯೋಗಿಗಳಲ್ಲಿ ನಿಮ್ಮ ಸಾಮಾಜಿಕ ನಿಲುವು ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಲಘು ಸಂಗೀತವನ್ನು ಕೇಳಲು ಮರೆಯದಿರಿ.

ಧನು
ಬುಧವಾರ, 9 ಜೂನ್
ಖುಷಿ ಖುಷಿಯ ದಿನವು ನಿಮಗಾಗಿ ಕಾದಿದೆ. ನಿಮ್ಮ ಮತ್ತು ಇತರರ ಬಗ್ಗೆ ಸಂತೋಷದಿಂದಿರುತ್ತೀರಿ ಮತ್ತು ಎಲ್ಲಾ ಒಳ್ಳೆಯ ವಾತಾವರಣದಲ್ಲಿ ಹಾಯಾಗಿರುತ್ತೀರಿ. ಎಲ್ಲಾ ಕುಟುಂಬ ವಿಚಾರಗಳಿಗೆ ಇದೊಂದು ಉತ್ತಮ ದಿನವಾಗಿದೆ. ಮನೆಯ ವಾತಾವರಣವು ಸಂತಸದಿಂದ ಕೂಡಿರುತ್ತದೆ ಮತ್ತು ಇದು ನಿಮಗೆ ಆನಂದವನ್ನು ನೀಡುತ್ತದೆ. ಆರೋಗ್ಯದಿಂದಿರುತ್ತೀರಿ ಮತ್ತು ಸಾಕಷ್ಟು ಚೈತನ್ಯದಿಂದ ಕೂಡಿರುತ್ತೀರಿ. ಸಕಾರಾತ್ಮಕ ಧೋರಣೆಯನ್ನು ನಿಮ್ಮ ಕೆಲಸ ಮತ್ತು ಕ್ರೀಡೆಯಲ್ಲಿ ಬಳಸಿಕೊಳ್ಳುತ್ತೀರಿ.. ಕಚೇರಿಯಲ್ಲಿ ಪ್ರಶಂಸೆಯನ್ನು ನಿರೀಕ್ಷಿಸಿರುವುದರಿಂದ ಕಾರ್ಯ ಸಂಬಂಧಿ ವಿಚಾರಗಳಿಗೆ ಅನುಕೂಲಕರ ದಿನವಾಗಿದೆ ಮತ್ತು ಸಹೋದ್ಯೋಗಿಗಳಿಂದ ಉತ್ತಮ ಸಹಕಾರವನ್ನು ಪಡೆಯುತ್ತೀರಿ. ಧನಲಾಭದ ಯೋಗವಿದೆ.

ಮಕರ
ಬುಧವಾರ, 9 ಜೂನ್
ನಿಮ್ಮ ಗ್ರಹಗತಿ ಇನ್ನೂ ನೆಟ್ಟಗಾಗಿಲ್ಲ, ನೀವು ಅನ್ಯಮನಸ್ಕರಾಗಿರುತ್ತೀರಿ. ಇದಕ್ಕೆ ಹಲವಾರು ಕಾರಣಗಳಿರಬಹುದು. ನಿಮ್ಮ ಈ ಗೊಂದಲಕ್ಕೆ ಕಾರಣವೇನೆಂದು ನಿಮಗೇ ತಿಳಿದಿರುವ ಸಾಧ್ಯತೆಯಿಲ್ಲ. ಮಾನಸಿಕವಾಗಿ ನೀವು ಅಸ್ಥಿರತೆಯಿಂದ ಕೂಡಿರುತ್ತೀರಿ. ಇದು ನಿಮ್ಮ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿನ ಕೆಲವು ಸಂಘರ್ಷಗಳ ಬಗ್ಗೆ ನೀವು ಚಿಂತಾಗ್ರಸ್ಥರಾಗಬಹುದು.ನಿಮ್ಮ ಶತ್ರುಗಳೊಂದಿಗೆ ಅಥವಾ ವಿರೋಧಿಗಳೊಂದಿಗೆ ವಾದಕ್ಕಿಳಿಯಬೇಡಿ. ಅವರು ನಿಮ್ಮನ್ನು ರೇಗಿಸಲು ಪ್ರಯತ್ನಿಸಬಹುದು ಆದರೆ ಶಾಂತವಾಗಿರಿ. ಕಚೇರಿಯ ಮೇಲಾಧಿಕಾರಿಗಳು ಯಾವುದೇ ಒಂದು ವಿಚಾರದ ಕುರಿತಾಗಿ ನಿಮ್ಮ ಮೇಲೆ ಅಸಮಧಾನ ಹೊಂದಬಹುದು ಮತ್ತು ಇದು ಮುಂದಕ್ಕೆ ನಿಮಗೆ ಅತ್ಯಂತ ಕಿರಿಕಿರಿಯನ್ನುಂಟುಮಾಡಬಹುದು. ಪ್ರೀತಿಪಾತ್ರರ ಸಾಂಗತ್ಯದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಿ.

ಕುಂಭ
ಬುಧವಾರ, 9 ಜೂನ್
ಇಂದು ನೀವು ಅತ್ಯಂತ ಭಾವಪರವಶರಾಗುತ್ತೀರಿ ಮತ್ತು ದುರ್ಬಲರಾಗಿರುತ್ತೀರಿ. ಮಾನಸಿಕ ಸ್ಥಿರತೆ ಹಾಗೂ ಶಾಂತಿಯ ಕೊರತೆಯು ನಿಮ್ಮನ್ನು ತೊಂದರೆಗೀಡುಮಾಡುತ್ತದೆ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಎಲ್ಲಾ ಯೋಜಿತ ಕಾರ್ಯಗಳು ಸೂಕ್ತ ಸಮಯದಲ್ಲಿಯೇ ಪೂರ್ಣಗೊಳ್ಳಲಿದೆ ಇದರ ಫಲವಾಗಿ, ವರಿಷ್ಠರ ನಡುವೆ ನೀವು ಗೌರವ ಪಡೆದುಕೊಳ್ಳುವ ಮೂಲಕ ಪ್ರಯೋಜನ ಪಡೆಯುವಿರಿ. ಹೆಂಗಸರು ತಮ್ಮನ್ನು ತಾನು ಆರೈಕೆ ಮಾಡಿಕೊಳ್ಳಲು ‘ಸ್ಪಾ’ಗೆ ಹೋಗಬಹುದು ಅಥವಾ ಪ್ರಸಾದನ ಖರೀದಿಸಲು ಮಾಲ್‌ಗಳಿಗೆ ಹೋಗಬಹುದು. ಆದರೆ ಅವರ ಖರ್ಚಿನ ಬಗ್ಗೆ ಗಮನ ಇಡುವುದು ಅಗತ್ಯ.ಎಲ್ಲೆಲ್ಲಿ ಪ್ರೌಢತೆ ಬೇಕೋ ಅಲ್ಲಿ ಬಾಲಿಶ ವರ್ತನೆ ಬೇಡ. ಭೂ, ಆಸ್ತಿ ಅಥವಾ ವಾಹನಕ್ಕೆ ಸಂಬಂಧಿಸಿದ ಕಾನೂನು ಪತ್ರಗಳೊಂದಿಗಿನ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ.

ಮೀನ
ಬುಧವಾರ, 9 ಜೂನ್
ಸಾಮೂಹಿಕ ನಿರ್ಧಾರವನ್ನು ಕೈಗೊಳ್ಳಲು ಇದು ಸಕಾಲ, ನಿಮಗೆ ಹೊಸ ಹೊಸ ವಿಚಾರಗಳು ಹೊಳೆಯಬಹುದು. ನಿಮ್ಮ ಚಿಂತನೆಗಳು ಉತ್ಕೃಷ್ಟವಾಗಿರುತ್ತದೆ ಮತ್ತು ಚರ್ಚೆಯ ವೇಳೆ ನೀವು ಉತ್ತಮ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತೀರಿ. ಈಗ ನಿಮ್ಮ ಸುತ್ತಲಿರುವ ಉತ್ತೇಜನಕಾರಿ ಆಲೋಚನೆಗಳಿಂದ ನಿಮ್ಮ ಸೃಜನಶೀಲತೆ ಲಾಭವಾಗಿ ಪರಿಣಮಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ ಮತ್ತು ನಿಮ್ಮ ಸ್ಥಿರತೆ ಮತ್ತು ಆತ್ಮವಿಶ್ವಾಸವು ಮುಂದೆಯೂ ನಿಮಗೆ ಪ್ರಚೋದನೆ ನೀಡುತ್ತದೆ. ನಿಮ್ಮ ಸಂಗಾತಿಯಿಂದ ನಿಮಗೆ ಹೆಚ್ಚಿನ ಸಹಕಾರ ದೊರೆಯಲಿದೆ ಮತ್ತು ಇದು ನಿಮಗೆ ಸಂತಸವನ್ನುಂಟುಮಾಡುತ್ತದೆ. ನೀವು ಹೊಂದಿರುವ ಸುಂದರ ಬೆಸುಗೆಗೆ ಇನ್ನಷ್ಟು ಮೆರುಗು ತರಲು ಪ್ರವಾಸಿ ತಾಣವೊಂದಕ್ಕೆ ಹೋಗುವ ಸಂದರ್ಭ ಬರಬಹುದು. ಅನ್ಯೋನ್ಯವಾಗಿರುವ ಸಂಬಂಧಗಳು ಇನ್ನಷ್ಟು ಹತ್ತಿರವಾಗುತ್ತದೆ ಮತ್ತು ನಿಮ್ಮ ಪೂಜ್ಯ ಭಾವನೆಯು ವರ್ಧಿಸುತ್ತದೆ.

Leave a Reply

Your email address will not be published.