ಇನ್ನೂ 10 ವರ್ಷಗಳ ಕಾಲ ಕೊರೊನಾ ಕಾಟ ಕಾಡಲಿದೆ.. ದೊಡ್ಡ ತಲೆಗಳೇ ಉರುಳಲಿದೆ: ಕೋಡಿ ಶ್ರೀ ಭವಿಷ್ಯ.!

 

ನಿತ್ಯವಾಣಿ, ಚಿತ್ರದುರ್ಗ, (ಜೂ. 1) :
ತಾಳೆಗರಿ ಮೂಲಕ ಭವಿಷ್ಯ ನುಡಿಯುವ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಕೊರೊನಾ ಕಾಲಘಟ್ಟದಲ್ಲೂ ಮತ್ತೊಂದು ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ.

‘ ಇನ್ನೂ 10 ವರ್ಷಗಳ ಕಾಲ ಈ ಕೊರೊನಾ ಕಾಟ ಕಾಡಲಿದೆ. ಜೂನ್ 20 ಕ್ಕೆ ಕೊರೊನಾ 2ನೇ ಅಲೆ ಹೊಡೆತ ಕಡಿಮೆಯಾಗಲಿದೆ. ಆದರೆ 3ನೇ ಇನ್ನೊಂದು ಅಲೆ ಬರುತ್ತದೆ. ಅದು ಭೀಕರವಾಗಿದ್ದು, ಕೋಟ್ಯಾಂತರ ಜನ ರಸ್ತೆ ರಸ್ತೆಗಳಲ್ಲೇ ರಕ್ತ ಕಾರಿ ಸಾಯುತ್ತಾರೆ; ಸ್ಥಳೀಯ, ರಾಜ್ಯ, ರಾಷ್ಟ್ರೀಯ ದೊಡ್ಡ ದೊಡ್ಡ ತಲೆಗಳೇ ಉರುಳುತ್ತವೆ’ ಎಂದು ಕೋಡಿ ಮಠ ಶ್ರೀ ಭವಿಷ್ಯನುಡಿದಿದ್ದಾರೆ.

ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಅವರು ಈ ಭವಿಷ್ಯ ಹೇಳಿದ್ದಾರೆ. ಕಾರ್ತೀಕ ಮಾಸದವರೆಗೂ ಮಳೆ ಸುರಿಯುತ್ತದೆ. ಶೀತ ಹೆಚ್ಚಾಗಿ ಕಾಯಿಲೆಗೆ ಇನ್ನಷ್ಟು ಪೂರಕವಾಗುತ್ತದೆ. ಅಶ್ವ ಯುಜ ಮಾಸ ಅಂದರೆ ಸಂಕ್ರಾಂತಿ ವೇಳೆಗೆ ಅಪಾಯಕಾರಿ ಘಟನೆಗಳು ಸಂಭವಿಸಲಿವೆ; ಆಗ ಸಾಮೂಹಿಕ ಸಾವುಗಳ ಜೊತೆಗೆ ದೊಡ್ಡ ದೊಡ್ಡ ತಲೆಗಳೇ ಉರುಳಿ ಹೋಗಲಿವೆ. ಜನರಿಗೆ ರಾಹು ಹಿಡಿಯಲಿದೆ; ಸುನಾಮಿ, ಭೂ ಪ್ರಳಯ ಇತ್ಯಾದಿ ಪ್ರಕೃತಿ ವಿಕೋಪಗಳು ಘಟಿಸಲಿವೆ. ಈಗಾಗಲೇ ಭೂಮಿಯಲ್ಲಿ ಹೂಳಲ್ಪಟ್ಟಿರುವ ಲಕ್ಷಾಂತರ ಶವಗಳು ಮುಂದೆ ಕಣ್ಣೆದುರೇ ಪ್ರೇತಾತ್ಮಗಳಾಗಿ ಕಾಡಲಿದೆ ಎಂದು ಅವರು ಹೇಳಿದ್ದಾರೆ.ತಮ್ಮ ಭವಿಷ್ಯ ಈವರೆಗೂ ಸುಳ್ಳಾಗಿಲ್ಲ. ‘ ಮದ್ದಿಲ್ಲದ ಕಾಯಿಲೆ ಬರಲಿದೆ’ ಎಂದು 2 ವರ್ಷಗಳ ಹಿಂದೆಯೇ ನಾನು ನುಡಿದಿದ್ದೆ ಎಂದು ಅವರು ತಮ್ಮ ತಾಳೆಗರಿ ಭವಿಷ್ಯದ ಕುರಿತು ಹೆಮ್ಮೆ ವ್ಯಕ್ತಪಡಿಸಿದರು.

Leave a Reply

Your email address will not be published.