ಚಿತ್ರದುರ್ಗ, ನಿತ್ಯವಾಣಿ,ಏ,4 : ನಮ್ಮ ಶ್ರೀಗಳು ನಮ್ಮ ಹೆಮ್ಮೆ. ಶ್ರೀಗಳ ಮುಂದಾಲೋಚನೆ ಪರಿಣಾಮ, ಸದೃಢ ಭೋವಿ ಸಮಾಜ ನಿರ್ಮಾಣಕ್ಕೆ, ಸಶಕ್ತ ಯುವಕರ ಹುಡುಕಾಟಕ್ಕಾಗಿ ಈ ಕ್ರೀಡಾಕೂಟದ ಉದ್ದೇಶವಾಗಿದೆ ಎಂದು ಭಾಜಪ ಯುವ ಮುಖಂಡ ರಘುಚಂದನ್ ಹೇಳಿದರು.
ಭೋವಿ ಪ್ರೀಮಿಯರ್ ಕ್ರಿಕೆಟ್ ಲೀಗ್ 2021ರ ಮಹಾದಾಸೋಹಿಯಾಗಿ ಮಾತನಾಡಿದ ಅವರು ಸಮಾಜದ ಏಳಿಗೆ ಮನಸ್ಸಿನಿಂದ ಬರಬೇಕು. ಕೇವಲ ಗಂಜಿ ಬಟ್ಟೆಯಿಂದ ಸಾಧ್ಯವಿಲ್ಲ. ಸಮಾಜ ಧ್ವನಿಯಾಗಿ ಪರಮಪೂಜ್ಯ ಶ್ರೀಗಳಿದ್ದಾರೆ. ಅಂತರಿಕ ಕಚ್ಚಾಟ ಕಡಿಮೆ ಆಗಲಿ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅವಕಾಶ ಸಿಕ್ಕಾಗ ಮಾತ್ರ ಅಭಿವೃದ್ಧಿ ಸಾಧ್ಯ. ಸೋಲು ಗೆಲುವು ಸಮಾನವಾಗಿ ತೆಗೆದುಕೊಳ್ಳಿ. ಸಮಾಜ ನನಗೇನೂ ಮಾಡಿದೆ ಎನ್ನುವ ಮೊದಲು, ನಾನೇನು ಸಮಾಜಕ್ಕೆ ಮಾಡಿದೆ ಎನ್ನುವುದು ಮುಖ್ಯ. ಯುವಕರು ಕ್ರೀಡೆಯೊಂದಿಗೆ ಸಮಾಜ ಸಂಘಟನೆಗೆ ಒತ್ತು ನೀಡಿ ಎಂದು ಕರೆಕೊಟ್ಪರು.
ಬೆಂಗಳೂರಿನ ಟಿ.ವೈ.ಕುಮಾರ ಮಾತನಾಡಿ ನಮ್ಮ ಸಮಾಜಕ್ಕೆ ಕಣ್ಣಿಗೆ ಕಾಣುವ ದೇವರು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು. ಯುವಕರ ದಿಕ್ಸೂಚಿಯಾಗಿ ಶ್ರೀಗಳಿದ್ದಾರೆ. ನಮ್ಮೆಲ್ಲರ ದಾರಿದೀಪ ನಮ್ಮ ಶ್ರೀಗಳು ಎಂದು ತಿಳಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಧೀರರಾಜ ಹೊನ್ನನವೀಲೆ ಅವರು ಮಾತನಾಡಿ ಕ್ರೀಡೆ ನವಚೈತನ್ಯವನ್ನು ನೀಡುತ್ತದೆ. ಯುವಕರಿಗೆ ನಮ್ಮ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಕ್ರಿಯಾಶೀಲತೆಯೇ ಸ್ಫೂರ್ತಿ. ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿಭೆ ಗುರುತಿಸುವುದು ಶ್ಲಾಘನೀಯ. ಕೂಲಿಕಾರ್ಮಿಕ ಮಕ್ಕಳಲ್ಲಿ ಕೂಡ ಅದ್ಭುತ ಪ್ರತಿಭೆಯಿದೆ ಎಂದು ಈ ಕ್ರೀಡಾಕೂಟ ಸಾಬೀತು ಪಡಿಸಿದೆ ಎಂದು ಹೇಳಿದರು.
ಶಿವಮೊಗ್ಗ ಜಿ.ಪಂ.ಸದಸ್ಯರಾದ ವೀರಭದ್ರಪ್ಪ ಪೂಜಾರ ಮಾತನಾಡಿ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಮಾರ್ಗದರ್ಶನ ಶೈಕ್ಷಣಿಕ ಆಧ್ಯಾತ್ಮಿಕ ಆಚೆ ಎಲ್ಲಾ ರಂಗಗಳನ್ನು ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ. ಇದರಿಂದ ವಿವಿಧ ರಂಗಲ್ಲಿ ಗುರುತಿಸಿಕೊಳ್ಳಲು ಹಾಗೂ ಚಾಪು ಮೂಡಿಸಲು ಸಾಧ್ಯವಾಗುತ್ತದೆ. ಸಾಹಿತ್ಯ ಲೋಕದಿಂದ ಸಿದ್ದರಾಮೇಶ್ವರರು ಹೊರಹೊಮ್ಮಿದ್ದಾರೆ. ಕ್ರೀಡಾ ಕ್ಷೇತ್ರದಿಂದ ಒಂದು ಧೃವತಾರೆ ಹೊರಹೊಮ್ಮಲಿ. ಕ್ರೀಡಾ ಮನೋಭಾವದಿಂದ ಸೌಹಾರ್ದ ವಾತಾವರಣ ನಿರ್ಮಿಸುತ್ತದೆ ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯರಾದ ಈ. ಮಂಜುನಾಥ ಮಾತನಾಡಿ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಿರುವುದು ಸಮಾಜ ಸಂಘಟನೆಗೆ ಇನ್ನಷ್ಟು ಶಕ್ತಿ ದೊರೆದಂತೆಯಾಗಿದೆ ಎಂದು ಹೇಳಿದರು.
ಕ್ರೀಡಾಪಟು ವಿಜಯಪುರದ ಸುನೀಲ ಮಾತಾನಾಡಿ ನಮ್ಮ ಶ್ರೀಗಳು ಧಾರ್ಮಿಕ ಜೊತೆಜೊತೆಯಲ್ಲಿ ಎಲ್ಲಾ ರಂಗಗಳ ಪ್ರೋತ್ಸಾಹಕರಾಗಿದ್ದಾರೆ. ಕಲ್ಲರಳಿ ಹೂವಾಗಿ ಎನ್ನುವಂತೆ ಕಲ್ಲುಬಂಡೆಗಳನ್ನು ಹೊಡೆಯುವ ಮಕ್ಕಳಲ್ಲಿ ಪ್ರತಿಭೆ ಗುರುತಿಸುತ್ತಿದ್ದಾರೆ. ನಮ್ಮಂತ ಗುಡಿಸಲು ವಾಸಿಗಳಿಗೂ ಗುಡಿಯಂತ ಗೌರವ ನೀಡಿದ್ದಾರೆ. ಈ ಮೂಲಕ ನಾನು ಹಾಗೂ ನಮ್ಮ ಭಾಗದ ಯುವಕರು ಸಮಾಜ ಸೇವೆಗೆ ಶ್ರೀಗಳೊಂದಿಗೆ ಕೈಜೋಡಿಸುತ್ತೇವೆ ಎಂದು ಹೇಳಿದರು.
ನಗರಸಭೆ ನಾಮ ನಿರ್ದೇಶಿತ ಸದಸ್ಯರಾದ ಪೇಂಟ್ ತಿಮ್ಮಣ್ಣ ಅವರಿಗೆ ಸನ್ಮಾನ ನೆರವೇರಿತು.
ಸಮಾರಂಭದಲ್ಲಿ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು ರಾಜ್ಯ ಸರ್ಕಾರಿ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಮಂಜುನಾಥ ಅಧ್ಯಕ್ಷತೆವಹಿಸಿದ್ದರು. ತಾ.ಪಂ.ಸದಸ್ಯಣಿ ವಿದ್ಯಾ, ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿಗಳಾದ ಲಕ್ಷಣ, ನಿರ್ದೇಶಕರಾದ ಕೂಟಿಗೆಹಳ್ಳಿ ಮಂಜುನಾಥ, ಭೋವಿಗುರುಪೀಠದ ಸಿಇಒ ಗೋವಿಂದಪ್ಪ, ಶಿವಮೊಗ್ಗದ ಶಿವರುದ್ರಯ್ಯಸ್ವಾಮಿ, ಬಸವರಾಜ, ಶುಭಕರ, ರವಿ, ಕಾಶಿ, ಉಮೇಶ, ಅರುಣ್ ತಾ.ಪಂ.ಸದಸ್ಯ ತಿಮ್ಮಣ್ಣ, ವಿ.ಆರ್,ನಾಗರಾಜು ಇನ್ನಿತರರು ಭಾಗವಹಿಸಿದ್ದರು.