BIG BREAKING, ನಿತ್ಯವಾಣಿ ಬೆಂಗಳೂರು,(ಜೂ. 6) ಹೈಕಮಾಂಡ್ ಯಾವತ್ತೂ ನನ್ನನ್ನು ರಾಜೀನಾಮೆ ಕೇಳಿದರೆ ಅಂದೆ ನಾನು ರಾಜೀನಾಮೆ ಕೊಡಲು ಪದವಿ ತ್ಯಾಗಕ್ಕೆ ಸಿದ್ದನಿದ್ದೇನೆ, ಪಕ್ಷದಲ್ಲಿ ನಾನೊಬ್ಬನೇ ನಾಯಕನಲ್ಲ ಪರ್ಯಾಯವಾಗಿ ಬೇರೆ ನಾಯಕರು ಬರಬಹುದು, ಹೈಕಮಾಂಡ್ ಎಲ್ಲಿಯವರೆಗೆ ನನ್ನ ಮೇಲೆ ವಿಶ್ವಾಸ ಇರುತ್ತದೆಯೋ ಅಲ್ಲಿವರೆಗೆ ನಾನು ಹಗಲು-ರಾತ್ರಿ ಕೆಲಸ ಮಾಡುತ್ತೇನೆ, ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ ಅದನ್ನು ಶಕ್ತಿಮೀರಿ ನಾನು ಹಗಲು ರಾತ್ರಿ ಕೆಲಸ ಮಾಡುತ್ತೇನೆ, ಹೈಕಮಾಂಡ್ ಯಾವಾಗ ನನಗೆ ರಾಜೀನಾಮೆ ಕೊಡಿ ಯಡಿಯೂರಪ್ಪನವರೇ ಅಂತ ಕೇಳಿದರೆ ಆ ದಿನ ನಾನು ರಾಜೀನಾಮೆ ಕೊಡಲು ಸಿದ್ದನಿದ್ದೇನೆ, ಎಂದು ಈಗತಾನೆ ಪತ್ರಿಕಾಗೋಷ್ಠಿ ಉದ್ದೇಶಿಸಿ ವಿಧಾನಸೌಧದಲ್ಲಿ ಮಾತನಾಡಿದರು,