BIG NEWS : ಅಮೇರಿಕಾ ನೂತನ ಅಧ್ಯಕ್ಷರಾಗಿ ಜೋ ಬೈಡೆನ್, ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಅಧಿಕೃತವಾಗಿ ಘೋಷಣೆ

ಅಮೇರಿಕಾ : ಒಂದೆಡೆ ಟ್ರಂಪ್ ಬೆಂಬಲಿಗರ ಪ್ರತಿಭಟನೆಯ ಕಿಚ್ಚು ದೇಶದಲ್ಲಿ ಹಬ್ಬಿದ್ದರೇ, ಇದೇ ಸಂದರ್ಭದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಜೋ ಬೈಡೆನ್​ ಮತ್ತು ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್​ ಅಧಿಕೃತವಾಗಿ ಘೋಷಣೆಯಾಗಿದ್ದಾರೆ. ಇದರಿಂದಾಗಿ ಅಮೆರಿಕ ಸಂಸತ್ ಸಭೆಯ ಅಧಿಕೃತ ಘೋಷಣೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅಮೇರಿಕಾದಲ್ಲಿ ಟ್ರಂಪ್ ಬೆಂಬಲಿಗರ ಪ್ರತಿಭಟನೆ ತಾರಕಕ್ಕೆ ಏರಿದೆ. ಬೆಂಬಲಿಗರ ಪ್ರತಿಭಟನೆಯಿಂದಾಗಿ ಟ್ರಂಪ್ ಟ್ವಿಟ್ಟರ್, ಫೇಸ್ ಬುಕ್, ಇನ್ಸ್ ಸ್ಟಾಗ್ರಾಂ ಖಾತೆಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿಯೇ ಕಳೆದ ಇತ್ತೀಚಿಗೆ ಭರ್ಜರಿ ಗೆಲುವು ಸಾಧಿಸಿದ್ದಂತ ಜೋ ಬೈಡನ್ ಅವರನ್ನು ಇದೀಗ ಅಧ್ಯಕ್ಷರನ್ನಾಗಿ, ಉಪಾಧ್ಯಕ್ಷರನ್ನಾಗಿ ಕಮಲಾ ಹ್ಯಾರಿಸ್ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

Leave a Reply

Your email address will not be published.