ಕ್ಷೇತ್ರದ ಜನರ ಅಭಿವೃದ್ಧಿಯೇ ತನ್ನ ಆದ್ಯ ಕರ್ತವ್ಯ ಎಂದುಕೊಂಡಿರುವ ನಮ್ಮ ಶಾಸಕರು ಚಂದ್ರಪ್ಪ : ಹೊಳಲ್ಕೆರೆ ಬಿಜೆಪಿ ಮಂಡಲ ಅದ್ಯಕ್ಷ ಸಿದ್ದೇಶ್

ನಿತ್ಯವಾಣಿ,ಚಿತ್ರದುರ್ಗ, (ಮೇ. 18) : ಹೊಳಲ್ಕೆರೆ ಕ್ಷೇತ್ರದ ಶಾಸಕ ಚಂದ್ರಪ್ಪರವರ ಏಳಿಗೆಯನ್ನು ಸಹಿಸದ ಕೆಲವರು ಷಡ್ಯಂತ್ರ ಮಾಡಿ ವಿಡಿಯೋದ ತುಣುಕನ್ನು ಕತ್ತರಿಸಿ ಎಡಿಟ್ ಮಾಡಿ ಮಾಧ್ಯಮದವರಿಗೆ ನೀಡಿದ್ದಾರೆ ಎಂದು ಬಿಜೆಪಿ ಮಂಡಲ ಅದ್ಯಕ್ಷರಾದ ಸಿದ್ದೇಶ್ ದೂರಿದ್ದಾರೆ.  ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಮಾರು 20 ನಿಮಿಷಗಳ ಇರುವ ವಿಡಿಯೋದಲ್ಲಿ 20 ಸೆಕೆಂಡುಗಳ ತುಣುಕನ್ನು ಕತ್ತರಿಸಿ ಮಾಧ್ಯಮದವರಿಗೆ ನೀಡಿದ್ದಾರೆ. ವಿಡಿಯೋವನ್ನು ಎಡಿಟ್ ಮಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಹೊಳಲ್ಕೆರೆ ಪೆÇಲೀಸರಿಗೆ ದೂರು ನೀಡಿದ್ದೇವೆ ಎಂದರು.

ಚುನಾವಣೆದಲ್ಲಿ 40 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಜಯ ಸಾಧಿಸಿರುವ ಎಂ ಚಂದ್ರಪ್ಪ ರವರು ಕ್ಷೇತ್ರದ ಜನತೆಯ ಬಗ್ಗೆ ಒಳ್ಳೆಯ ದೃಷ್ಟಿಯನ್ನು ಇಟ್ಟುಕೊಂಡಿದ್ದು, ಜನರ ಅಭಿವೃದ್ಧಿ ಮತ್ತು ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ. ಕ್ಷೇತ್ರದ ಜನರ ಅಭಿವೃದ್ಧಿಯೇ ತನ್ನ ಆದ್ಯ ಕರ್ತವ್ಯ ಎಂದುಕೊಂಡಿರುವ ಶಾಸಕರು ಎಂದು ಸಹ ಮತದಾರರನ್ನು ಸಾಯಲಿ ಎಂದು ಹೇಳುವುದಿಲ್ಲ ಎಂದು ಶಾಸಕರ ಮಾತಿಗೆ ಸ್ಪಷ್ಟನೆ ನೀಡಿದರು

ಹೊಳಲ್ಕೆರೆ ಪಟ್ಟಣದ ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಬೆಡ್ ಸಂಪರ್ಕ ಹೊಂದುವ ಆಸ್ಪತ್ರೆಯನ್ನು ಪ್ರಾರಂಭಿಸುವ ವ್ಯವಸ್ಥೆಯನ್ನು ಮಾಡಿದ್ದರು, ಆದರೆ ಡಿಎಚ್‍ಓ 10 ಬೆಡ್‍ಗೆ ಆಕ್ಸಿಜನ್ ಸಂಪರ್ಕಕ ಕಲ್ಪಿಸುವುದಾಗಿ ಹೇಳಿದ್ದರಿಂದ ಜನರ ಹಿತದೃಷ್ಟಿಯಿಂದ  ಶಾಸಕರು ಡಿಎಚ್‍ಒ ರವರ ಮೇಲೆ ಏರುದನಿಯಲ್ಲಿ ಮಾತನಾಡಿ ನಮಗೆ 50 ಆಕ್ಸಿಜನ್ ಬೆಡ್‍ನ್ನು ಪ್ರಾರಂಭ ಮಾಡುವುದಾದರೆ ಮಾಡಿ 10 ಬೆಡ್‍ಗಳನ್ನು ಮಾಡುವುದಾದರೆ ಬೇಡ ಅಂತ ತಿಳಿಸಿರುತ್ತಾರೆ ವಿನಾ ಇಲ್ಲಿ ಯಾವುದೇ ಜನರು ಸಾಯಲಿ ಎಂಬ ಕೆಟ್ಟ ಉದ್ದೇಶ ಇರುವುದಿಲ್ಲ ಎಂದು ಹೇಳಿದರು.

ಮಾಜಿ ಸಚಿವರಾದ ಆಂಜನೇಯ ರವರು ಚಂದ್ರಪ್ಪ ರವರಿಗೆ ಬುದ್ಧಿಭ್ರಮಣೆ ಆಗಿದೆ ಅಂತ ಹೇಳಿರುತ್ತಾರೆ, ಅಧಿಕಾರ ಕಳೆದುಕೊಂಡಿರುವ ಮಾಜಿ ಸಚಿವ ಹೆಚ್ ಆಂಜನೇಯ ರವರಿಗೆ ಬುದ್ಧಿ ಭ್ರಮಣೆಯಾಗಿದೆ. ಅವರು ಸಹಾ ಮಾಜಿ ಸಚಿವರಾಗಿದ್ದು, ಕ್ಷೇತ್ರದ ಮತದಾರರ ಕಷ್ಟಗಳಿಗೆ sÀಭಾಗಿಯಾಗಬೇಕಿದೆ ಇದುವರೆವಿಗೂ ಕಾಂಗ್ರೇಸ್ ರವರು ಯಾರು ಸಹಾ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ, ಮತದಾರರ ಕಷ್ಟ ಏನು ಎಂದು ಕೇಳಿಲ್ಲ, ಅಧಿಕಾರವನ್ನು ಕಳೆದುಕೂಂಡು ಅವರಿಗೆ ಏನು ಮಾಡಲಿ ಎಂದು ಸುಮ್ಮನಿರದೆ ಈ ರೀತಿಯಾದ ಹೇಳೀಕೆಯನ್ನು ನೀಡುತ್ತಿದ್ದಾರೆ. ಅವರು ಮಂತ್ರಿಯಾಗಿದ್ದಾಗಸರಿಯಾಗಿ ಕೆಲಸವನ್ನು ಮಾಡದಿದ್ದರಿಂದಲೇ ಚುನಾವಣೆಯಲ್ಲಿ ಮತದಾರ ಅವರನ್ನು ತಿರಸ್ಕರ ಮಾಡಿ ಚಂದ್ರಪ್ಪರವರನ್ನು ಆಯ್ಕೆ ಮಾಡಿದ್ದಾರೆ ಮುಂದೆಯೂ ಸಹಾ ಚಂದ್ರಪ್ಪರವೇ ಚುನಾವಣೆಯಲ್ಲಿ ಆಯ್ಕೆಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಹೊಳಲ್ಕೆರೆ ಪಪಂ ಅಧ್ಯಕ್ಷರಾದ ಅಶೋಕ್ ಮುಖಂಡರಾದ ಕೆ ಸಿ ರಮೇಶ್, ಮಲ್ಲಿಕಾರ್ಜನ್, ಡಿ ಸಿ ಮೋಹನ್, ಗೋಷ್ಟಿಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.