ಮದುವೆಯ ಮಂಟಪದಿಂದಲೇ ಓಡಿ ಬಂದು ರಕ್ತ ದಾನ ಮಾಡಿ ಮಗುವಿನ ಪ್ರಾಣ ಉಳಿಸಿದ ದಂಪತಿ

ಲಕ್ನೋ:ಆ ದಂಪತಿಗಳು ತಮ್ಮ ಮದುವೆಯ ದಿನವನ್ನು ನೆನಪಿಸಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಆ ಪುಟಾಣಿ ಮಗುವಿನ ತಂದೆ ತಾಯಿ ಮಾತ್ರ ಅವರನ್ನು ಜೀವನ ಪರ್ಯಂತ ನೆನಪಿಸಿಕೊಳ್ಳುತ್ತಾರೆ. ಕಾರಣ ಆ ಮಗು ರಕ್ತ ದೊರಕದೇ ಸಾವು ಬದುಕಿನ ನಡುವೆ ಹೋರಾಡುತ್ತಿರುತ್ತದೆ. ಮದುವೆಯ ಮಂಟಪದಲ್ಲಿ ವಿಷಯ ಗೊತ್ತಾದ ದಂಪತಿಗಳು ಕೂಡಲೇ ಮದುವೆ ಮಂಟಪದಿಂದಲೇ ಓಡಿ ಬರುತ್ತಾರೆ.ಮದುಮಗ ತಮ್ಮ ರಕ್ತವನ್ನು ದಾನ ಮಾಡುತ್ತಾರೆ. ಆ ಮಗು ಉಳಿಯುತ್ತದೆ. ಇದು ನಡೆದಿದ್ದು ಉತ್ತರ ಪ್ರದೇಶದಲ್ಲಿ.ಈ ಸುದ್ದಿಯನ್ನು ಉತ್ತರ ಪ್ರದೇಶದ ಹಿರಿಯ ಪೋಲಿಸ್ ಅಧಿಕಾರಿ ಟ್ವೀಟ್ ಮಾಡಿದ್ದು ‘ನನ್ನ ದೇಶ ಸುಂದರವಾಗಿದೆ. ಹುಡುಗಿಗೆ ರಕ್ತ ಬೇಕಾಗಿದೆ. ಬೇರೊಬ್ಬರಾರೂ ಮುಂದೆ ಬರಲಿಲ್ಲ.ಆದರೆ ಈ ದಂಪತಿಗಳು ಮಂಟಪದಿಂದಲೇ ಓಡಿ ಬಂದು ತಮ್ಮ ರಕ್ತ ದಾನ ಮಾಡಿದ್ದಾರೆ ‘ ಎಂದು ಪ್ರಶಂಸಿದ್ದಾರೆ.

Leave a Reply

Your email address will not be published.