ನಿತ್ಯವಾಣಿ ನ್ಯೂಸ್,ಚಿತ್ರದುರ್ಗ: ಶಾಂತಿ ಸಾಗರದಿಂದ ಬರುವಂತಹ ಕುಡಿಯುವ ನೀರಿನಲ್ಲಿ ದೋಷ ಕಂಡು ಬಂದಿದ್ದು ಚಿತ್ರದುರ್ಗದ ಕವಾಡಿಗರ ಹಟ್ಟಿಯಲ್ಲಿ ಮೂರು ಸಾವುಗಳು ಆಗಿದ್ದು ಸಾಕಷ್ಟು ಜನರು ಅಸ್ತವ್ಯಸ್ತವಾಗಿದ್ದಾರೆ, 40 ಜನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಲ್ಲಿನ ನಾಗರಿಕರೊಬ್ಬರು ನಮ್ಮ ನಿತ್ಯ ವಾಣಿ ನ್ಯೂಸ್ ಗೆ ಕರೆ ಮಾಡಿ ವಿಷಯವನ್ನು ಮುಟ್ಟಿಸಿರುತ್ತಾರೆ, ಆದಕಾರಣ ಚಿತ್ರದುರ್ಗ ಜನತೆಗೆ ಇದು ಶಾಂತಿ ಸಾಗರ ನೀರಿನಿಂದ ತೊಂದರೆ ಆಗಿದೆಯೋ ಅಥವಾ ಬೇರೆ ಯಾವುದೋ ಕಾರಣವೂ ಜಿಲ್ಲಾಡಳಿತ ಶೀಘ್ರವಾಗಿ ಪರೀಕ್ಷೆಗೊಳಿಸಬೇಕಾಗಿದೆ, ಯಾವುದಕ್ಕೂ ಜನತೆ ಜಾಗೃತರಾಗಿರಿ ಎಂದು ನಿತ್ಯ ವಾಣಿ ನ್ಯೂಸ್ ಎಚ್ಚರಿಸಿದೆ