ಬಹುಜನ ಸಮಾಜ ಪಾರ್ಟಿ ಚಿತ್ರದುರ್ಗ ಜಿಲ್ಲಾ ಘಟಕ ವತಿಯಿಂದ ಮುಖ್ಯಮಂತ್ರಿಗೆ ಮನವಿ ಪತ್ರ

ನಿತ್ಯವಾಣಿ,ಚಿತ್ರದುರ್ಗ,( ಮೇ.12) : ಬಹುಜನ ಸಮಾಜ ಪಾರ್ಟಿ ಚಿತ್ರದುರ್ಗ ಜಿಲ್ಲಾ ಘಟಕ ವತಿಯಿಂದ ಚಿತ್ರದುರ್ಗ  ಜಿಲ್ಲಾಧಿಕಾರಿಗಳ ಮುಖಾಂತರ   ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಲಾಯಿತು.
ಭಾರತ ದೇಶದಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ   ನಿರ್ಲಕ್ಷದಿಂದ 2 ನೇ ಅಲೆಯ ಕೊರೋನಾ ಅತಿಹೆಚ್ಚು ವ್ಯಾಪಿಸಿದೆ  ಆದ್ದರಿಂದ ಎಲ್ಲಾ ಕೊರೋನ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಹಾಸಿಗೆ ಆಕ್ಸಿಜನ್ ಮತ್ತು ವೆನ್ಂಟಿಲೇಟರ್ ಒಳ್ಳೆಯ ಆಹಾರ ಪದ್ಧತಿ ಉತ್ತಮ ಚಿಕಿತ್ಸೆ ನೀಡುವ ಮೂಲಕ ಸೋಂಕಿತರನ್ನು ಬದುಕಿಸುವ ಜವಾಬ್ದಾರಿಯನ್ನು ಡಾಕ್ಟರುಗಳು ಮತ್ತು ನರ್ಸುಗಳು ಒಳಗೊಂಡಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರಗಳು  ಜವಾಬ್ದಾರಿಯನ್ನು ಹೊರಬೇಕೆಂದು ಚಿತ್ರದುರ್ಗ ಬಿಎಸ್ಪಿಯ ಜಿಲ್ಲಾ ಘಟಕ ಒತ್ತಾಯಿಸುತ್ತದೆ.
 ಕರ್ನಾಟಕದಲ್ಲಿ ದಿನಾಂಕ 26 4 21ರಂದು ಯಾವುದೇ ಪೂರ್ವ ತಯಾರಿ ಇಲ್ಲದೆ ಜನತಾ ಕರ್ಫ್ಯೂ ಜಾರಿ ಮಾಡಲಾಗಿದೆ. ಇದು  ಲಾಕ್ ಡೌನ್ ನ್ನಷ್ಟೇ ಬಿಗಿಭದ್ರತೆ ಒಂದಿದೆ ಆದರೆ ಏಕಾಏಕಿ ನಿರ್ಧಾರ ಕೈಗೊಂಡಿರುವುದರಿಂದ ಅವತ್ತೇ ದುಡಿದು ಅವತ್ತೇ ತಿನ್ನುತ್ತಿರುವ ಬಡವರು ಕೃಷಿಕಾರ್ಮಿಕರು ಕೂಲಿಕಾರ್ಮಿಕರು ರಸ್ತೆ ವ್ಯಾಪಾರಿಗಳು ಆಟೋ-ಟ್ಯಾಕ್ಸಿ ಲಾರಿ-ಬಸ್ ಚಾಲಕರು ಟೈಲರುಗಳು   ಮಡಿವಾಳ ವಿಶ್ವಕರ್ಮ ಕಂಬಾರ್ ಕುಂಬಾರ್ ಕ್ಷೌರಿಕರು  ಚರ್ಮ ಕಾರರು ಪೇಂಟರ್ ಗೃಹ ಕಾರ್ಮಿಕರು ಬಡಗಿ  ಕಾರ್ಮಿಕರು ಕಟ್ಟಡ ಕಾರ್ಮಿಕರು ಹಮಾಲಿಗಳು ವೃದ್ಧರು ಅಂಗವಿಕಲರು ಮಹಿಳೆಯರು ಮಕ್ಕಳು ಒಟ್ಟಾರೆ ಹೇಳುವುದಾದರೆ ನಗರದ  ಸ್ಲಮ್ಮುಗಳಲ್ಲಿ ಗ್ರಾಮಗಳಲ್ಲಿ ವಾಸಿಸುವ ಅಸಂಘಟಿತ ಕಾರ್ಮಿಕರು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲಾ ಜಾತಿ ಎಲ್ಲ ಧರ್ಮದವರು ಸಂಕಷ್ಟದಲ್ಲಿದ್ದಾರೆ ಕೋರೋನ ಬಂದು ಸಾಯುವುದಕ್ಕಿಂತ ಹಸಿದು ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಈ ಕೂಡಲೇ ಕರ್ನಾಟಕ ಸರ್ಕಾರ ಬಡವರ ಖಾತೆಗೆ 25000 ಹಣ ಜಮಾ ಮಾಡಿ ಬಡವರನ್ನು ರಕ್ಷಣೆ ಮಾಡಬೇಕಾಗಿದೆ ಹಾಗೇನೆ ಮೈಕ್ರೋಫೈನಾನ್ಸ್ ಹಣ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಚಿತ್ರದುರ್ಗ ಜಿಲ್ಲಾ ಘಟಕ ಅಧ್ಯಕ್ಷ ಎಸ್ ವೆಂಕಟೇಶ್ ಮನವಿ ಸಲ್ಲಿಸಿದರು

Leave a Reply

Your email address will not be published.