ಹೊಸ ಉದ್ಯಮಿಗಳಿಗೆ ವಿಶೇಷ ಸಾಲ ಯೋಜನೆ ಅವಕಾಶ

ರಾಜ್ಯದ ಮುಂಚೂಣಿ ಸಹಕಾರಿ ಬ್ಯಾಂಕ್ ಆಗಿರುವ ಸುಕೋ ಬ್ಯಾಂಕ್, ಮೂರು ವಿಶೇಷ ಸ್ಟಾರ್ಟ್ ಅಪ್ ಕಂಪನಿಗಳ ಜೊತೆ ಫ್ರಾಂಚೈಸಿ (ಸ್ಥಳೀಯ ರಿಟೇಲ್ ವ್ಯಾಪಾರ) ತೆರೆಯಲು ನವ ಉದ್ಯಮಿಗಳಿಗೆ ಅವಕಾಶ ಕಲ್ಪಿಸಲಿಕ್ಕಾಗಿ `ಸ್ಟಾರ್ಟ್ ಅಪ್ ಟು ಸೆಲ್ಫ್ ಎಂಪ್ಲಾಯ್ಮೆಂಟ್’ ಎಂಬ ವಿಶೇ ಷ ಸಾಲ ಯೋಜನೆಯನ್ನು ರೂಪಿಸಿ, ಪ್ರಕಟಿಸಿದೆ.

ಸುಕೋ ಬ್ಯಾಂಕ್‍ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಉತ್ತರ ಕರ್ನಾಟಕದ ಅನೇಕರು ಉದ್ಯೋಗ ಹುಡುಕಿಕೊಂಡು ಮೆಟ್ರೋ ಸಿಟಿಗಳಿಗೆ ವಲಸೆ ಹೋಗಿದ್ದರು. ಆದರೆ, `ಕೋವಿಡ್ -19′ ನಂತರ ಅನೇಕರು ವಿವಿಧ ಕಾರಣಗಳಿಗಾಗಿ ಸ್ವಗ್ರಾಮಗಳಿಗೆ ಮರಳಿ, ಹೊಸದಾಗಿ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಉದ್ಯಮಗಳತ್ತ ಗಮನ ನೀಡಿ ನವ್ಯೋದ್ಯಮಗಳನ್ನು ಹುಡುಕಾಡುತ್ತಿರುವುದು ವಿಶೇಷವಾಗಿದೆ.

ಈ ವಿಶೇಷ ವ್ಯಾಪಾರದ ಸ್ಟಾರ್ಟ್ ಅಪ್ ಕಂಪನಿಗಳು ವಿನೂತನವಾದ ಉತ್ಪನ್ನಗಳನ್ನು ಹೊಂದಿವೆ. ಈ ಉತ್ಪನ್ನಗಳಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಯಾವುದೇ ಪರ್ಯಾಯಗಳ ಸ್ಪರ್ಧೆ ಇಲ್ಲ. ನವ್ಯೋದ್ಯಮಗಳನ್ನು ಪ್ರಾರಂಭಿಸಲು ಆಸಕ್ತರು ವಿನೂತನ ಉತ್ಪನ್ನಗಳ ಫ್ರಾಂಚೈಸಿಯನ್ನು ಪಡೆದು ಉದ್ಯಮಪತಿಗಳಾಗಳು ಮುಕ್ತ ಅವಕಾಶಗಳಿವೆ.

ಸುಕೋ ಬ್ಯಾಂಕ್ 15 ಕೋಟಿರೂಪಾಯಿ ಸಾಲ ವಿತರಣೆಯ ಗುರಿಯೊಂದಿಗೆ 500 ಕ್ಕೂ ಹೆಚ್ಚಿನ ಉದ್ಯಮಿಗಳ ಸ್ವಾವಲಂಬನೆಯ ಬದುಕಿಗೆ ನೆರವಾಗಲು `ಸ್ವ ಉದ್ಯೋಗಕ್ಕಾಗಿ ಸ್ಟಾರ್ಟ್‍ಅಪ್’ ಯೋಜನೆಯನ್ನು ರೂಪಿಸಿ ಹೊಸತನದ ನಿರೀಕ್ಷೆಯಲ್ಲಿ ಇರುವವರಿಗೆ `ಸ್ಟಾರ್ಟ್ ಅಪ್ ಟು ಸೆಲ್ಫ್ ಎಂಪ್ಲಾಯ್ಮೆಂಟ್’ ವಿಶೇಷ ಸಾಲ ಯೋಜನೆ ನೆರವಾಗಲಿದೆ.

1.  ಬ್ಯಾಟ್-ಫ್ಲೇ;

ಬೆಂಗಳೂರಿನ ಬನಶ್ರೀ ಸಿಸ್ಟಂ ಪ್ರೈವೇಟ್ ಲಿಮಿಟೆಡ್‍ನ ಪೇಟೆಂಟ್ ಆಧಾರಿತ `ಪರಿಸರ ಸ್ನೇಹಿ’ ಬ್ಯಾಟ್ -ಫ್ಲೇ ತಂತ್ರಜ್ಞಾನ. ಇದುನಿರುಪಯುಕ್ತ ಮತ್ತು ಸಾಮಥ್ರ್ಯ ಕುಗ್ಗಿದ ಲೆಡ್ ಬ್ಯಾಟರಿಗಳನ್ನು ಕೇವಲ ಶೇ.30% ವೆಚ್ಚದಲ್ಲಿ ನವೀಕರಿಸಿ ಅವುಗಳ ಪುನರ್ ಬಳಕೆಯ ಸಾಮಥ್ರ್ಯವನ್ನು ಕನಿಷ್ಠ ಮೂರು ವರ್ಷಗಳಿಗೆ ಹೆಚ್ಚಿಸಲಿದೆ.

2. NeeRaw:-  ನೈಸರ್ಗಿಕ ಆರೋಗ್ಯ ಪಾನೀಯ ;

ಸಾವಿರಾರು ವರ್ಷಗಳಿಂದ ಆಯುರ್ವೇದ ಮತ್ತು ಭಾರತೀಯ ಆಹಾರ ಪರಂಪರೆಯಲ್ಲಿ ನೀರಾವನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ, ಸಹಜವಾಗಿ ಹುಳಿಯಾಗಿ ಆಲ್ಕೋಹಾಲ್ ಆಗಿ ಪರಿವರ್ತನೆ ಆಗುತ್ತಿದ್ದರಿಂದ ಸರಕಾರಗಳು ಹುಳಿಯಾದ ಪಾನೀಯವನ್ನು ನಿಷೇಧಿಸಿದ್ದವು.

ಶಿವಮೊಗ್ಗದಲ್ಲಿ ಇರುವ `ಮಲೆನಾಡು ನಟ್ಸ್ ಅಂಡ್ ಸ್ಪೈಸ್ ರೈತ ಸಂಸ್ಥೆ’ ನೀರಾ ಉತ್ಪಾದಕ ರೈತ ಸಂಸ್ಥೆ ಆಗಿದ್ದು, ಕರ್ನಾಟಕ ಸರಕಾರದ ಪರವಾನಿಗೆ ಮತ್ತು ಭಾರತೀಯ ಆಹಾರ ಗುಣಮಟ್ಟ ಸಂಸ್ಥೆಯಿಂದ ಮಾನ್ಯತೆ ಪಡೆದುಕೊಂಡ ರಾಜ್ಯದ ಏಕೈಕ ಸಂಸ್ಥೆ ಇದಾಗಿದೆ.

ಈ ಸಂಸ್ಥೆಯು ನೀರಾವನ್ನು ದಿನದ ಎಲ್ಲಾ ಕಾಲದಲ್ಲೂ ಉತ್ಪಾದನೆ ಮಾಡಿ ಝೀರೋ ಆಲ್ಕೋಹಾಲ್ ಮತ್ತು ಪರಿಶುದ್ಧತೆ ಕಾಯ್ದುಕೊಳ್ಳುವ ತಂತಜ್ಞಾನವನ್ನು ಅಭಿವೃದ್ಧಿಪಡಿಸಿ, ಸಂಸ್ಕರಿಸಿ ವಿಶೇಷವಾದ ಕೋಲ್ಡ್‍ಚೈನ್ ವ್ಯವಸ್ಥೆಯಲ್ಲಿ ರಾಜ್ಯಾದ್ಯಂತ ಇರುವ ಮಾರುಕಟ್ಟೆಗೆ ಪೂರೈಸುತ್ತಿದೆ.

ನೀರಾದಲ್ಲಿ ಖನಿಜಗಳು, ವಿಟಮಿನ್-ಸಿ, ನೈಸರ್ಗಿಕ ಸಕ್ಕರೆ ಮತ್ತು ಪೆÇ್ರೀಟೀನ್ ಸಮೃದ್ಧವಾಗಿದ್ದು ರಸಾಯನಿಕ ಮುಕ್ತವಾದ ಪಾನೀಯ. `ಒಂದು ಲೋಟ ನೀರಾ, ಆರು ಲೋಟ ತೆಂಗಿನ ಎಳೆನೀರಿಗೆ ಸಮ’ ಎಂದು ಸಂಶೋದನಾ ವರದಿಗಳು ತಿಳಿಸಿವೆ. ನೈಸರ್ಗಿಕ ಮತ್ತು ವಿಶೇಷ ಆರೋಗ್ಯಕರ ಈ ಪಾನೀಯಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.

3. ಸಂವಿತಾ :

ಬೆಂಗಳೂರಿನ ವೆನ್ಝೈನ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ರೋಗಿಯ ಮನೆ ಬಾಗಿಲಲ್ಲೇ ಬಿಪಿ, ಶುಗರ್, ಬ್ಲಡ್ ಕೌಂಟ್ ಸೇರಿ 60ಕ್ಕೂ ಹೆಚ್ಚಿನ ವ್ಯಾಧಿಯನ್ನು ಸುಲಭವಾಗಿ ಗುರುತಿಸುವ ವೈದ್ಯಕೀಯ ಉಪಕರಣಗಳ ಕಿಟ್ ಅನ್ನು ಕಡಿಮೆ ವೆಚ್ಚದಲ್ಲಿ ಸಿದ್ಧಪಡಿಸಿದೆ. ಈ ಉಪಕರಣವು ಗ್ರಾಮೀಣ ಭಾಗದಜನರಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತಿದ್ದು, ಸಕಾಲದಲ್ಲಿ ರೋಗಿಗೆ ಸೂಕ್ತ ಚಿಕಿತ್ಸೆ ನೀಡಲು ನೆರವಾಗಲಿದೆ.

ಗ್ರಾಮೀಣ ಮಟ್ಟದಲ್ಲಿ ಆರೋಗ್ಯ ಸೇವೆಗಳ ಗುಣ ಮಟ್ಟ ಹೆಚ್ಚಿಸುವಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆ. ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವವರು ಈ ಉಪಕರಣದ ಸಹಾಯದಿಂದ ರೋಗಿಗೆ ಅಗತ್ಯವಾದ ಚಿಕಿತ್ಸೆಯನ್ನು ತ್ವರಿತವಾಗಿ ಒದಗಿಸಿ ಪ್ರಾಣರಕ್ಷಣೆ ಮಾಡಬಹುದಾಗಿದೆ.

ಈ ಮೂರು ವ್ಯವಹಾರಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯಲ್ಲಿ ಇರುವ ಸ್ಪರ್ಧೆ ರಹಿತವಾದ ವಿಶಿಷ್ಟ ಉತ್ಪನ್ನಗಳು. ಈ ವ್ಯವಹಾರಗಳನ್ನು ಪ್ರಾರಂಭಿಸುವ ಮೂಲಕ ಹೊಸ ಉದ್ಯಮಿಗಳಾಗಿ ಉತ್ತಮ ಆದಾಯವನ್ನು ಗಳಿಸಬಹುದಾಗಿದೆ.

ಈ ಉದ್ದಿಮೆ ಕೇಂದ್ರಗಳನ್ನು ಪ್ರಾರಂಭಿಸಲು ಆಸಕ್ತರು ಸುಕೋ ಬ್ಯಾಂಕಿನ ಜಾಲತಾಣ www.sucobank.com  ಅಥವಾ ಹತ್ತಿರದ ಸುಕೋ ಬ್ಯಾಂಕ ಶಾಖೆಗಳಿಗೆ ಭೇಟಿ ನೀಡಿರಿ. ಅಥವಾ ಬ್ಯಾಂಕ್‍ನ ಕಾಲ್ ಸೆಂಟರ್ 18001215560 ಗೆ ಕರೆ ಮಾಡಿ ಅಥವಾ 8197944402 ಗೆ  ವಾಟ್ಸಾಪ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.


ಈ ಮೂರು ಯೋಜನೆಗಳು ರೂಪಾಯಿ 3 ರಿಂ 5 ಲಕ್ಷದ ಒಳಗಿನ ಬಂಡವಾಳ ಹೊಂದಿದ್ದು, ಪ್ರತೀ ತಿಂಗಳು ಕನಿಷ್ಠ 50 ಸಾವಿರ ರೂಪಾಯಿಗಿಂತಲೂ ಹೆಚ್ಚಿನ ಆದಾಯ ಗಳಿಸುವ ಅವಕಾಶಗಳನ್ನು  ಹೊಂದಿವೆ. ಈ ಬಗ್ಗೆ ಎಸ್2ಎಸ್‍ಇ ಯೋಜನೆ ಸ್ಟಾರ್ಟ್ ಅಪ್‍ಗಳ ವಿನೂತನ ಆವಿಷ್ಕಾರಗಳನ್ನು ರಾಜ್ಯದ ಜನತೆಗೆ ಉದ್ದಿಮೆ ಹಾಗು ವ್ಯಾಪಾರದ ಅವಕಾಶಗಳಾಗಿ ಪರಿವರ್ತಿಸುವ ಗುರಿಯನ್ನು ಬ್ಯಾಂಕ್ ಹೊಂದಿದೆ.– ಮೋಹಿತ ಮಸ್ಕಿ, ಅಧ್ಯಕ್ಷರು, ಸುಕೋ ಬ್ಯಾಂಕ್.
ಅರ್ಜಿ ಸಲ್ಲಿಸಲು ಜನೆವರಿ 30 ಕೊನೆಯ ದಿನ.

Leave a Reply

Your email address will not be published.